ಕುಂದಾಪುರ ಮಿರರ್ ಸುದ್ದಿ…
ಕೋಟ: ಬನ್ನಾಡಿ ಗ್ರಾಮದ, ಉಪ್ಲಾಡಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಆ. 19 ಮತ್ತು 20 ರಂದು ಶ್ರೀ ಕೃಷ್ಣ ಜನ್ಮಾಷ್ಟಮಿ ಮತ್ತು ವಿಟ್ಲಪಿಂಡಿ ಉತ್ಸವ ಜರುಗಲಿದೆ.
ಈ ಕಾರ್ಯಕ್ರಮದ ಅಂಗವಾಗಿ ಶ್ರೀ ದೇವಳದಲ್ಲಿ ಶ್ರೀ ಗೋಪಾಲಕೃಷ್ಣ ಮತ್ತು ಸಪರಿವಾರ ದೇವರಿಗೆ ವಿಶೇಷ ಪೂಜೆ ನಡೆಯಲಿದೆ ಹಾಗೂ ಆ. 19 ರಂದು ಬೆಳಿಗ್ಗೆ 10:00 ಗಂಟೆ ಯಿಂದ ಮಧ್ಯಾಹ್ನ 12:00 ಗಂಟೆ ತನಕ ಪವಮಾನಾಭಿಷೇಕ, ಪಂಚಾಮೃತಾಭಿಷೇಕ ಮತ್ತು ಕುಂಕುಮಾರ್ಚನೆ ಸೇವೆ ನಡೆಯಲಿದ್ದು ಮಧ್ಯಾಹ್ನ ಗಂಟೆ 12:00 ಕ್ಕೆ ಮಹಾಪೂಜೆ ಜರುಗಲಿದೆ ಅದೇ ದಿನ ಸಂಜೆ ಗಂಟೆ 6:30 ರಿಂದ ರಾತ್ರಿ ಗಂಟೆ 8:00 ರತನಕ ಶ್ರೀ ಮಹಾಲಿಂಗೇಶ್ವರ ಭಜನಾ ಮಂಡಳಿ, ವಡ್ಡರ್ಸೆ ಇವರಿಂದ ಭಜನಾ ಕಾರ್ಯಕ್ರಮ ಜರುಗಲಿದೆ. ಆ. 20 ರಂದು ಬೆಳಗ್ಗೆ 9:00 ಗಂಟೆಯಿಂದ ಮಧ್ಯಾಹ್ನ 1:00 ಗಂಟೆ ತನಕ “ಮುದ್ದು ಕೃಷ್ಣ ಸ್ಪರ್ಧೆ” ಹಾಗೂ ಮಧ್ಯಾಹ್ನ 3:00 ಗಂಟೆ ಯಿಂದ ಸಂಜೆ 5:00 ಗಂಟೆಯ ತನಕ ಮೊಸರು ಕುಡಿಕೆ ಮತ್ತು ಮತ್ತು ಹಗ್ಗಜಗ್ಗಾಟ ಸ್ಪರ್ಧೆ ಮತ್ತು ಗಂಟೆ 5:00 ರಿಂದ 7:00 ಗಂಟೆ ತನಕ ಶ್ರೀ ಗೋಪಾಲಕೃಷ್ಣ ದೇವರ ಪುರ ಮೆರವಣಿಗೆ ಜರುಗಲಿದೆ. ಆ. 20 ರ ಬೆಳಗ್ಗೆ 9:00 ಗಂಟೆಗೆ ನಡೆಯಲಿರುವ “ಮುದ್ದು ಕೃಷ್ಣ ಸ್ಪರ್ಧೆ” 3 ವರ್ಷದೊಳಗಿನ ಮತ್ತು 3 ರಿಂದ 6 ವರ್ಷದೊಳಗಿನ ಮಕ್ಕಳಿಗೆ 2 ವಿಭಾಗಗಳಲ್ಲಿರುತ್ತದೆ. ಪ್ರತಿ ವಿಭಾಗದಲ್ಲಿ ಪ್ರಥಮ, ದ್ವೀತಿಯ ಮತ್ತು ತೃತೀಯ ಬಹುಮಾನ ಮತ್ತು ಭಾಗವಹಿಸಿದ ಪ್ರತಿ ಮಕ್ಕಳಿಗೂ ಪ್ರಶಂಸನಾ ಪತ್ರ ನೀಡಲಾಗುವುದು. 6 ವರ್ಷದೊಳಗಿನ ಎಲ್ಲ ಮಕ್ಕಳಿಗೆ ಮುಕ್ತ ಅವಕಾಶ ಇದೆ ಎಂದು ಉಪ್ಲಾಡಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಕಾರ್ಯದರ್ಶಿ ಪ್ರಭಾಕರ ಪೂಜಾರಿ ಉಪ್ಲಾಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.











