ಕುಂದಾಪುರ ಮಿರರ್ ಸುದ್ದಿ…
ಕೋಟ: ಕೋಟ ಅಮೃತೇಶ್ವರಿದೇವಳದ ಸಭಾಂಗಣದಲ್ಲಿ ಕೋಟ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ ನಡೆಯುತ್ತಿರುವ 48ನೇ ವರ್ಷದ ಗಣೇಶೋತ್ಸವ ಕಾರ್ಯಕ್ರಮದ ಸಾಂಸ್ಕೃತಿಕ ಕಾರ್ಯಕ್ಕೆ ವೇ.ಮೂ.ಸುಬ್ರಮಣ್ಯ ಅಡಿಗ ದೀಪ ಬೆಳಗಿಸಿ ಚಾಲನೆ ನೀಡಿದರು.
ಒಟ್ಟು ಐದು ದಿನಗಳ ಕಾಲ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿವಿಧ ಮನೋರಂಜನಾ ವಿನೋದಾವಳಿಗಳು,ಸನ್ಮಾನ ಕಾರ್ಯಕ್ರಮಗಳು ನಡೆಯಲಿದೆ.
ಮುಖ್ಯ ಅತಿಥಿಗಳಾಗಿ ಸಮಿತಿಯ ಉಪಾಧ್ಯಕ್ಷ ವಳಮಾಡು ಸೋಮ ಮರಕಾಲ,ಕಾರ್ಯದರ್ಶಿ ಚಂದ್ರ ಆಚಾರ್ಯ, ಸಮಿತಿಯ ಸಂತೋಷ್ ಕದ್ರಿಕಟ್ಟು, ಗಿರಿ ಫ್ರೆಂಡ್ಸ್ ಪದಾಧಿಕಾರಿಗಳು ಉಪಸ್ಥಿತರಿದ್ದರು.











