ಕುಂದಾಪುರ ಮಿರರ್ ಸುದ್ದಿ…
ಕೋಟ: ಸರಕಾರಿ ಪ್ರೌಢ ಶಾಲೆ.ಗುಂಡ್ಮಿ-ಸಾಸ್ತಾನ ಇಲ್ಲಿನ ನಿವೃತ್ತ ಹಿಂದಿ ಶಿಕ್ಷಕ ಕೃಷ್ಣ ನೇರಳಕಟ್ಟೆ ಇವರು ತಮ್ಮ ತಂದೆ ತಾಯಿಯರಾದ ದಿವಂಗತ ಲಕ್ಷ್ಮೀ ಮಂಜ ನಾಯ್ಕ ನೇರಳಕಟ್ಟೆ ಇವರ ಸ್ಮರಣಾರ್ಥ ರೂಪಾಯಿ 25,000ರೂ ವನ್ನು ಶಾಲೆಗೆ ದತ್ತಿನಿಧಿಯಾಗಿ ನೀಡಿದ್ದು, ಅದರಿಂದ ಬರುವ ವಾರ್ಷಿಕ ಆದಾಯದ ಹಣದಲ್ಲಿ ಎಸ್.ಎಸ್.ಎಲ್.ಸಿ.ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಶಾಲಾ ಆಡಳಿತ ಮಂಡಳಿ ವತಿಯಿಂದ ಗೌರವಿಸಲಾಯಿತು. ಶಾಲಾ ಮುಖ್ಯ ಶಿಕ್ಷಕ ಸತೀಶ್ ಐತಾಳ್, ಶಾಲಾಭಿವೃದ್ದಿ ಸಮಿತಿಯ ಅಧ್ಯಕ್ಷ ಶ್ರೀನಿವಾಸ ಶೆಟ್ಟಿಗಾರ ಹಾಗೂ ಸಿಬ್ಬಂದಿ ವರ್ಗ ಹಾಗೂ ಸರ್ವ ಸದಸ್ಯರು,ಪಾಲಕರು ಮತ್ತಿತರರು ಉಪಸ್ಥಿತರಿದ್ದರು.











