ಕುಂದಾಪುರ ಮಿರರ್ ಸುದ್ದಿ…
ಕೋಟ: ಯಕ್ಷಾಂತರಂಗ ವ್ಯವಸಾಯೀ ಯಕ್ಷ ತಂಡ ಶಿವರಾಮ ಕಾರಂತ ಥೀಂ ಪಾರ್ಕ್ ಕೋಟ ಇವರಿಂದ ಶ್ರೀ ಆನೆಗುಡ್ಡೆ ವಿನಾಯಕ ದೇವಳದಲ್ಲಿ ಗಣೇಶ ಚತುರ್ಥಿಯ ಸಾಂಸ್ಕೃತಿಕ ಕಾರ್ಯಕ್ರಮದ ಪ್ರಯುಕ್ತ ಸಾಂಪ್ರದಾಯಿಕ ಯಕ್ಷಗಾನ ದಕ್ಷಾಧ್ವರ ನೆರವೇರಿತು. ಕಲಾವಿದರಾಗಿ ಹಿರಿಯ ಭಾಗವತ ಹೆರಂಜಾಲು ಗೋಪಾಲ ಗಾಣಿಗ,ಪ್ರಸಾದ ಕುಮಾರ ಮೊಗೆಬೆಟ್ಟು ದೇವದಾಸ್ ರಾವ್ ಕೂಡ್ಲಿ ಕೃಷ್ಣಮೂರ್ತಿ ಉರಾಳ ,ಪ್ರತೀಶ್ ಬ್ರಹ್ಮಾವರ, ಶ್ರೀನಾಥ ಉರಾಳ , ಮಟಪಾಡಿ ಪ್ರಭಾಕರ ಆಚಾರ್ಯ , ಸಚಿನ್ ಶೆಟ್ಟಿ, ಶೋಭಿತ್, ಮಂಜುನಾಥ ಹೊಳ್ಳ ,ರಾಜು ಪೂಜಾರಿ, ಕೃಷ್ಣ.ಜಿ, ಮುಂತಾದವರು ಭಾಗವಹಿಸಿದ್ದರು.











