ಕುಂದಾಪುರ ಮಿರರ್ ಸುದ್ದಿ…
ಕೋಟ :ಮಹೇಶ್ ಆಸ್ಪತ್ರೆ ಬ್ರಹ್ಮಾವರ, ಗೆಳೆಯರ ಬಳಗ ಕಾರ್ಕಡ ಹಾಗೂ ಬ್ರಾಹ್ಮಣ ಮಹಾಸಭಾ ಸಾಲಿಗ್ರಾಮ ವಲಯ ಸಂಯುಕ್ತ ಆಶ್ರಯದಲ್ಲಿ ಡಾ.ಕೋಟ ಶಿವರಾಮ ಕಾರಂತರ ಸ್ಮರಣಾರ್ಥ ಬೃಹತ್ ಉಚಿತ ಆರೋಗ್ಯ ಶಿಬಿರ ಸೆ.4 ರಂದು ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನದ ಜ್ಞಾನಮಂದಿರದಲ್ಲಿ ನಡೆಯಿತು.
ಶಿಬಿರವನ್ನು ಸಾಲಿಗ್ರಾಮ ಶ್ರೀಗುರುನರಸಿಂಹ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಡಾ. ಕೆ. ಎಸ್ ಕಾರಂತ ಉದ್ಘಾಟಿಸಿದರು.
ತಜ್ಞ ವೈದ್ಯರುಗಳು,ಕಣ್ಣು, ಕಿವಿ, ಮೂಗು, ಮಕ್ಕಳ ಖಾಯಲೆ, ಹೃದ್ರೋಗ, ಸ್ರೀ ರೋಗ, ಹಾಗೂ ಸಾಮಾನ್ಯರೋಗಗಳ ತಪಾಸಣೆ ನಡೆಸಿದರು. ರಕ್ತ ಪರೀಕ್ಷೆ, ಇಸಿಜಿ, ಮತ್ತು ಲಭ್ಯವಿರುವ ಔಷಧವನ್ನು ಉಚಿತವಾಗಿ ನೀಡಲಾಯಿತು.
ಗೆಳೆಯರ ಬಳಗದ ಅಧ್ಯಕ್ಷ ಕೆ.ತಾರಾನಾಥ ಹೊಳ್ಳ ಪ್ರಾಸ್ತಾವನೆಗೈದು ಸ್ವಾಗತಿಸಿದರು. ಮಹೇಶ್ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ರಾಕೇಶ್ ಅಡಿಗ ಶಿಬಿರದ ಮಹತ್ವ ತಿಳಿಸಿದರು. ಸಭೆಯಲ್ಲಿ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಕೆ. ಶಿವರಾಮ ಉಡುಪ, ಆಸ್ಪತ್ರೆಯ ತಜ್ಞ ವೈದ್ಯರುಗಳಾದ ಡಾ.ಶರತ್ ಮಧ್ಯಸ್ಥ, ಡಾ.ಕೀರ್ತನ್ ಕುಮಾರ್ ಉಪಾಧ್ಯ, ಡಾ.ವೀಣಾ ಯು. ಎಚ್, ಡಾ. ದೀಕ್ಷತ, ಹಾಗೂ ಡಾ.ಪ್ರಶಾಂತ ಸಿ.ಡಿ ಉಪಸ್ಥಿತರಿದ್ದರು. ಬಳಗದ ಉಪಾಧ್ಯಕ್ಷ ಕೆ. ಶಶಿಧರ ಮಯ್ಯ ಧನ್ಯವಾದಗೈದರು. ಕಾರ್ಯಕ್ರಮ ಬ್ರಾಹ್ಮಣ ಮಹಾಸಭಾ, ಸಾಲಿಗ್ರಾಮ ವಲಯದ ಕಾರ್ಯದರ್ಶಿ ಕೆ. ರಾಜರಾಮ ಐತಾಳ ಕಾರ್ಯಕ್ರಮ ನಿರೂಪಿಸಿದರು.











