ಕುಂದಾಪುರ ಮಿರರ್ ಸುದ್ದಿ…
ಕೋಟ: ಕೂಟಮಹಾಜಗತ್ತು ಸಾಲಿಗ್ರಾಮ ಅಂಗಸಂಸ್ಥೆ ವತಿಯಿಂದ ಲೋಕ ಕಲ್ಯಾಣಾರ್ಥವಾಗಿ ಶ್ರೀ ಗುರುನರಸಿಂಹನಿಗೆ ತುಳಸಿ ಅರ್ಚನೆ ಕಾರ್ಯಕ್ರಮ ಭಾನುವಾರ ನೆರವೇರಿಸಲಾಯಿತು.
ನಿಗಮಾಗಮ ಪಾಠಶಾಲೆಯ ವಿಧ್ಯಾರ್ಥಿಗಳಿಂದ ಗುರುನರಸಿಂಹ ಸಹಸ್ರನಾಮಾವಳಿ ಪಾರಾಯಣ ಹಾಗೂ ಮಹಿಳಾ ವೇದಿಕೆಯವರಿಂದ ಶ್ರೀ ವಿಷ್ಶುಸಹಸ್ರ ಪಠಣ ಮಾಡಲಾಯಿತು.ದೇವಳದ ಅರ್ಚಕರಾದ ವೇದಮೂರ್ತಿ ಜನಾರ್ಧನ ಅಡಿಗರೊಂದಿಗೆ
ಆಡಳಿತ ಮಂಡಳಿಯ ಮಾಜಿ ಅಧ್ಯಕ್ಷ ಜಗದೀಶ ಕಾರಂತ, ಅಂಗಸಂಸ್ಥೆಯ ಅಧ್ಯಕ್ಷ ಶೀಪತಿ ಅಧಿಕಾರಿ ಸಂಕಲ್ಪಿಸಿ ಪ್ರಾರ್ಥಿಸಿದರು.
ಅಂಗಸಂಸ್ಥೆಯ ಪದಾಧಿಕಾರಿಗಳದ ಮಂಜುನಾಥ ಉಪಾಧ್ಯ, ಮಹಾಬಲ ಹೇರ್ಳೆ, ಚಿದಾನಂದ ತುಂಗ, ಪ್ರಕಾಶ ಹೇರ್ಳೆ, ಪ್ರಭಾಕರ ಮೈಯ ಉಪಸ್ಥಿತರಿದ್ದರು. ಗಣೇಶ ಭಟ್ಟರು ಕಾರ್ಯಕ್ರಮ ಸಂಯೋಜಿಸಿದರು.











