ರಥಬೀದಿ ಗೆಳೆಯರ ವತಿಯಿಂದ ಗುಂಡ್ಮಿ ಮಾಣಿಚೆನ್ನಕೇಶವದಲ್ಲಿ ಅದ್ಧೂರಿಯ ಸೋಣೆ ಆರತಿ, ರಂಗಪೂಜೆ ಸೇವೆ

0
360

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕೋಟ: ರಥಬೀದಿ ಗೆಳೆಯರು ಸಾಮಾಜಿಕ ಹಾಗೂ ಸಾಂಸ್ಕೃತಿಕ ವೇದಿಕೆ ಗುಂಡ್ಮಿ ಇವರ ಆಶ್ರಯದಲ್ಲಿ ಗುಂಡ್ಮಿ ಮಾಣಿಚೆನ್ನಕೇಶವ ದೇವಳದಲ್ಲಿ ಅದ್ಧೂರಿಯ ರಂಗಪೂಜೆ,ಸೋಣೆ ಆರತಿ ಪೂಜಾ ಕಾರ್ಯಕ್ರಮಗಳು ಭಾನುವಾರ ವಿಜೃಂಭಣೆಯಿಂದ ಸಂಪನ್ನಗೊಂಡಿತು.

ವೇ.ಮೂ.ಆನಂತರಾಮ ಬಾಯರಿ ನೇತ್ರತ್ವದಲ್ಲಿ ಅರ್ಚಕರಾದ ಅನಂತಕೃಷ್ಣ ಬಾಯರಿ,ಗೋಪಾಲಕೃಷ್ಣ ಐತಾಳ್,ನಾಗಪಯ್ಯ ಶಾಸ್ತ್ರಿ ಸಮ್ಮುಖದಲ್ಲಿ ವಿವಿಧ ಧಾರ್ಮಿಕ ವಿಧಿ ವಿಧಾನಗಳು ನೆರವೆರಿತು.ದೇವಳದಲ್ಲಿ ವಿವಿಧ ಬಗೆಯ ಹೂವಿನ ಅಲಂಕಾರದಿಂದ ಶೃಂಗರಿಸಲಾಗಿತ್ತು. ಗೋವಿಂದ ಶೆಟ್ಟಿಗಾರ ಹೂವಿನ ಅಲಂಕಾರದಲ್ಲಿ ಸಹಕರಿಸಿದರು.

Click Here

ಸಾವಿರಾರು ಭಕ್ತರು ಪೂಜಾಕಾರ್ಯದಲ್ಲಿ ಭಾಗಿಯಾಗಿ ಪ್ರಸಾದ ಸ್ವೀಕರಿಸಿದರು.
ಕಳೆದ ಹತ್ತು ವರ್ಷಗಳಿಂದ ರಥಬೀದಿ ಗೆಳೆಯರ ವತಿಯಿಂಸ ಶ್ರೀ ದೇವಳದಲ್ಲಿ ವಿಶೇಷ ಸೋಣೆ,ರಂಗಪೂಜೆ ಕಾರ್ಯಕ್ರಮ ನಡೆಯುತ್ತಿದೆ.

ಈ ಸಂದರ್ಭದಲ್ಲಿ ದೇವಳದ ಅಧ್ಯಕ್ಷ ಪ್ರಕಾಶ್ ಹೊಳ್ಳ,ಕಾರ್ಯದರ್ಶಿ ಶ್ರೀಧರ ಶಾಸ್ತ್ರಿ, ಗಣ್ಯರಾಗಿ ಕೋಟ ಅಮೃತೇಶ್ವರಿ ದೇವಳದ ಅಧ್ಯಕ್ಷ ಆನಂದ್ ಸಿ ಕುಂದರ್,ಕುಂದಾಪುರದ ತಾಲೂಕು ಆಸ್ಪತ್ರೆ ವೈದ್ಯಾಧಿಕಾರಿ ನಾಗೇಶ್ ಗುಂಡ್ಮಿ, ಉದ್ಯಮಿ ಆನಂದ್ ಮರಕಾಲ, ಗೋಳಿಗರಡಿ ದೇವಳದ ಅಧ್ಯಕ್ಷ ಜಿ.ವಿಠ್ಠಲ ಪೂಜಾರಿ, ಮಾಧವ ಪೈ, ಸಾಲಿಗ್ರಾಮ ಪ.ಪಂ ಅಧ್ಯಕ್ಷೆ ಸುಲತಾ ಹೆಗ್ಡೆ,ಸದಸ್ಯರಾದ ರಾಜು ಪೂಜಾರಿ,ಉದ್ಯಮಿ ಅನಂತ ಉಪಾಧ್ಯ,ರವೀಂದ್ರ ಐತಾಳ್ ಪಾರಂಪಳ್ಳಿ,ಹಲಸಿನಕಟ್ಟೆ ಅನಂತಪದ್ಮನಾಭ ಐತಾಳ್ ಮತ್ತಿತರರು ಉಪಸ್ಥಿತರಿದ್ದರು.ಶ್ರೀ ರಾಮಾಮೃತ ಭಜನಾ ತಂಡ ಪಡುಕರೆ ಇವರಿಂದ ಭಜನಾ ಕಾರ್ಯಕ್ರಮ,ಶಿವಕೃಪಾ ಚಂಡೆ ಬಳಗದಿಂದ ಚಂಡೆವಾದನ ಏರ್ಪಡಿಸಲಾಗಿತ್ತು.

Click Here

LEAVE A REPLY

Please enter your comment!
Please enter your name here