ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ; ಕೊರಗ ಸಮುದಾಯದ ಪ್ರತಿಭಾನ್ವಿತ ವಿದ್ಯಾರ್ಥಿನಿ ಅಂಕಿತಾ ಆಲೂರು ಇವರ ತ್ರೋಬಾಲ್ ತಂಡ ಜಿಲ್ಲಾ ಮಟ್ಟದಲ್ಲಿ ಗೆದ್ದು ರಾಜ್ಯ ಮಟ್ಟಕ್ಕೆ ಆಯ್ಕೆ ಆಗಿದೆ. ಆ ಮೂಲಕ ತಾಲೂಕಿನ ಗ್ರಾಮೀಣ ಭಾಗದ ಶಾಲೆಯ ಮಕ್ಕಳು ಮತ್ತು ಸಮಾಜದ ಅತ್ಯಂತ ಕಟ್ಟಕಡೆಯ ಸಮುದಾಯದ ಪ್ರತಿಭೆಗಳು ತಮ್ಮ ತಾಕತ್ತು ತೋರಿಸಿ ಕೊಟ್ಟಿದ್ದಾರೆ.
ಕೊರಗರ ಮಕ್ಕಳು ಪ್ರತಿಭಾನ್ವಿತರು ಎನ್ನುವುದನ್ನು ಈ ಹಿಂದೆ ಆಲೂರಿನ ವಿದ್ಯಾರ್ಥಿ ಅಖಿಲೇಶ್ ಎಂಬ ಕೊರಗರ ಹುಡುಗ SSLC ಯಲ್ಲಿ 602 ಅಂಕ ಪಡೆದು ಎಲ್ಲಾ ಮಕ್ಕಳಿಗೆ ಮಾದರಿಯಾಗಿದ್ದು ನೆನಪ್ಪಿದ್ದರೆ, ಇಂದು ಅದೇ ಅಖಿಲೇಶ್ ನ ಸಹೋದರಿ ಅಂಕಿತಾ ತ್ರೋಬಾಲ್ ನಲ್ಲಿ ರಾಜ್ಯಕ್ಕೆ ಆಯ್ಕೆಯಾಗಿ ಕ್ರೀಡೆಗೂ ಸೈ ಎಂದು ತೋರಿಸಿಕೊಟ್ಟಿದ್ದಾರೆ. ಆ ಮೂಲಕ ಗಣೇಶ ಮತ್ತು ಮಾಲತಿ ಆಲೂರು ಇವರ ಮಗಳು ಅಂಕಿತಾ ಅತ್ಯಂತ ಮಹತ್ವದ ಸಾಧನೆಯನ್ನು ಕ್ರೀಡಾ ಕ್ಷೇತ್ರದಲ್ಲಿ ಸಾಧಿಸಿದ್ದಾರೆ. ಅಂಕಿತಾ ತಂಡದಲ್ಲಿ ಲತಾ, ಸಂಗೀತ, ರಿತಿಕ್ಷಾ, ರಶ್ಮಿತಾ, ಜೋತಿ, ಮಧುಕುಮಾರಿ, ಸೌಮ್ಯ, ಸಾನ್ವಿ ಇಂದು ಉತ್ತಮ ಪ್ರದರ್ಶನ ನೀಡಿದ್ದಾರೆ. ಕೊರಗ ಸಮುದಾಯದ ಪ್ರತಿಭೆ ಅಂಕಿತಾ ಮತ್ತೊಂದು ತಂಡಕ್ಕೆ ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಜಿಲ್ಲಾ ಸಂಘಟನಾ ಸಮಿತಿ ಉಡುಪಿ ಜಿಲ್ಲಾ ಘಟಕ ಅಭಿನಂದನೆ ಸಲ್ಲಿಸಿದೆ.











