ಕುಂದಾಪುರ ಮಿರರ್ ಸುದ್ದಿ…
ಕೋಟ: ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸ್ವಚ್ಚತೆಯನ್ನು ಕಾಪಾಡಿಕೊಂಡು ಸುಸ್ಥಿರ ಅಭಿವೃದ್ಧಿಯನ್ನು ಸಾಧಿಸುವ ಮುಖೇನ ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿ ಯೋಜನೆಯು ಸಫಲತೆಯನ್ನು ಕಾಣಲು ಎಲ್ಲರ ಶ್ರಮ ಅಗತ್ಯ ವೆಂದು ಪಾಂಡೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷ ಕಲ್ಪನಾ ದಿನಕರ್ ಪೂಜಾರಿ ತಿಳಿಸಿದರು.
ಪಾಂಡೇಶ್ವರ ಪಂಚಾಯತ್ ಸಭಾಂಗಣದಲ್ಲಿ ನಡೆದ ಗ್ರಾಮ ನೈರ್ಮಲ್ಯ ಯೋಜನೆ ಹಾಗೂ ಸ್ವಚ್ಚತಾ ಹೀ ಸೇವಾ ಆಂದೋಲನ ಕುರಿತು ನಡೆದ ಸಭೆಯ ಉಧ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.
ಸ್ವಚ್ಛ ಭಾರತ ಮಿಷನ್ ಗ್ರಾಮೀಣ ಯೋಜನೆಯಡಿ ಗ್ರಾಮ ಪಂಚಾಯತ್ ನ್ನು ಸಂಪೂರ್ಣ ಬಯಲು ಬರ್ಹಿದೆಸೆ ಮುಕ್ತ ಮಾಡುವಲ್ಲಿ ಎಲ್ಲರೂ ಈ ಹಿಂದೆ ಕೈಜೋಡಿಸಿದಂತೆ ಈ ಯೋಜನೆಯ ಮೂಲಕವೂ ಪ್ರತಿಯೊಬ್ಬರ ಮನೆಯಲ್ಲೂ ಇಂಗುಗುಂಡಿ ನಿರ್ಮಿಸಿಕೊಂಡು ದ್ರವ ತ್ಯಾಜ್ಯವನ್ನು ವಿಲೇವಾರಿ ಮಾಡಿ ,ಘನ ತ್ಯಾಜ್ಯ ವನ್ನು ಪಂಚಾಯತ್‍ನ ಸ್ವಚ್ಛತಾ ವಾಹನಕ್ಕೆ ನೀಡಿ, ಪ್ಲಾಸ್ಟಿಕ್‍ನ್ನು ಎಲ್ಲೆಂದರಲ್ಲಿ ಸುಡುವುದನ್ನು,ಬಿಸಾಡುವುದನ್ನು ನಿಲ್ಲಿಸಿ ಸಂಪೂರ್ಣ ಗ್ರಾಮದ ಸ್ವಚ್ಚತೆಗೆ ಪಂಚಾಯತ್ ನೊಂದಿಗೆ ಸಹಕರಿಸಿ ಎಂದರು.
ಗ್ರಾಮ ನೈರ್ಮಲ್ಯ ಯೋಜನೆಯ ಮಹತ್ವ,ಹಾಗೂ ಜನರ ಸಹಭಾಗಿತ್ವ,ಯೋಜನೆಯ ಪರಿಣಾಮಕಾರಿ ಅನುಷ್ಠಾನ ದಲ್ಲಿ ಅಧಿಕಾರಿಗಳು,ಜನಪ್ರತಿನಿಧಿಗಳು ಹಾಗೂ ನಾಗರೀಕರ ಪಾತ್ರದ ಕುರಿತು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸತೀಶ್ ವಡ್ಡರ್ಸೆ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಜಿಲ್ಲಾ ಸಮಾಲೋಚಕ ರಂಜಿತ್ ಗ್ರಾಮ ನಕ್ಷೆ ತಯಾರಿಸಿ ಗ್ರಾಮದ ಮೂಲಭೂತ ಅವಶ್ಯಕತೆಗಳು,ಹಾಗೂ ನೈರ್ಮಲ್ಯದ ಕುರಿತು ವಿವರಣೆ ನೀಡಿದರು. ಸಭೆಯಲ್ಲಿ ಉಪಾಧ್ಯಕ್ಷ ಸಿಲ್ವೆಸ್ಟರ್ ಡಿಸೋಜಾ, ಅಂಗನವಾಡಿ ಮೇಲ್ವಿಚಾರಕಿ ಲಕ್ಷ್ಮೀ ಪಂಚಾಯತ್ ಸದಸ್ಯರು ,ಆಶಾ ಅಂಗನವಾಡಿ ಕಾರ್ಯಕರ್ತೆಯರು,ಸಂಜೀವಿನಿ ಒಕ್ಕೂಟದ ಸದಸ್ಯರು ,ಪಂಚಾಯತಿ ಸಿಬ್ಬಂದಿ, ಆರೋಗ್ಯ ಸಹಾಯಕಿ, ಸಮುದಾಯ ಆರೋಗ್ಯ ಅಧಿಕಾರಿ ಹಾಗೂ ಶಾಲಾ ಶಿಕ್ಷಕರು ಹಾಜರಿದ್ದರು.ಕಾರ್ಯದರ್ಶಿ ವಿಜಯಾ ಭಂಡಾರಿ ಸ್ವಾಗತಿಸಿ ನಿರೂಪಿಸಿದರು. ಬಳಿಕ ಪಂಚಾಯತ್ ವ್ಯಾಪ್ತಿಯಲ್ಲಿ ಜಾಥಾ ಕಾರ್ಯಕ್ರಮ ನಡೆಸಲಾಯಿತು..











