ಅಂತರಾಷ್ಟ್ರೀಯ ಬೀಚ್ ಸ್ವಚ್ಛತಾ ಅಭಿಯಾನ,ಸ್ವಚ್ಛ ಸಾಗರ್ ಸುರಕ್ಷಾ ಸಾಗರ್ ಯೋಜನೆ ಮಣೂರು ಬೀಚ್ ಸ್ವಚ್ಛತೆ

0
261

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕೋಟ: ತ್ಯಾಜ್ಯ ಮುಕ್ತ ಕಡಲ ಕಿನಾರೆ ಗುರಿ ಬರೇ ಸಂಘಟಕರಿಗೆ ಸೀಮಿತಗೊಳದೆ ಪ್ರತಿಯೊರ್ವರಿಗೂ ಅದರ ಬಗ್ಗೆ ಅರಿವು ಮೂಡಬೇಕು ಎಂದು ಕೋಟ ಅಮೃತೇಶ್ವರಿ ಹಲವು ಮಕ್ಕಳ ತಾಯಿ ದೇವಳದ ಆಡಳಿತ ಮಂಡಳಿ ಅಧ್ಯಕ್ಷ ಆನಂದ್ ಸಿ ಕುಂದರ್ ಹೇಳಿದ್ದಾರೆ.

Click Here

ಪಂಚವರ್ಣ ಯುವಕ ಮಂಡಲ ಕೋಟ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ಕೋಟ ಇದರ ನೇತ್ರತ್ವದಲ್ಲಿ ಕೋಟ ಗ್ರಾಮಪಂಚಾಯತ್ ಮತ್ತು ಅದರ ಘನ ಹಾಗೂ ದ್ರವ ತ್ಯಾಜ್ಯ ಘಟಕ ,ಮಣೂರು ಫ್ರೆಂಡ್ಸ್,ಯಕ್ಷಸೌರಭ ಕಲಾರಂಗ ಕೋಟ, ಮಹಿಳಾ ಬಳಗ ಹಂದಟ್ಟು ,ವಿಪ್ರ ಮಹಿಳಾ ಬಳಗ ಸಾಲಿಗ್ರಾಮ,ರೋಟರಿ ಕ್ಲಬ್ ಹಂಗಾರಕಟ್ಟೆ ಸಾಸಾಸ್ತಾ, ಗೀತಾನಂದ ಫೌಂಡೇಶನ್ ಮಣೂರು ಇವರುಗಳ ಸಂಯಕ್ತ ಸಹಯೋಗದೊಂದಿಗೆ ಅಂತಾರಾಷ್ಟ್ರೀಯ ಬೀಚ್ ಸ್ವಚ್ಛತಾ ಅಭಿಯಾನದ ಹಿನ್ನಲ್ಲೆಯಲ್ಲಿ ಸ್ವಚ್ಛ ಸಾಗರ್ ಸುರಕ್ಷಾ ಸಾಗರ್ ಯೋಜನೆಯಡಿ ಕೋಟ ಮಣೂರು ಪಡುಕರೆ ಬೀಚ್ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ ಸ್ವಚ್ಛ ಹಾಗೂ ಸುಂದರ ಪರಿಸರದ ಕಲ್ಪನೆ ಪ್ರತಿಯೊರ್ವ ನಾಗರೀಕನಲ್ಲಿ ಮೂಡಬೇಕು.ಪ್ರಕೃತಿಯನ್ನು ಆರಾಧೊಸುವ ಜೊತೆಗೆ ನದಿ ಕೊಳ,ಸಮುದ್ರವನ್ನು ಪ್ರೀತಿಸುವ ಮನೋಭಾವನೆ ಬೆಳೆಸಿಕೊಂಡು ಆಗಾಗ ಅದರ ಸೇವಾ ಕೈಂಕರ್ಯದಲ್ಲಿ ತೋಡಗಿಕೊಳ್ಳಬೇಕು ಈ ನಿಟ್ಟಿನಲ್ಲಿ ಪಂಚವರ್ಣ ಯುವಕ ಮಂಡಲದ ಕಾರ್ಯ ಶ್ಲಾಘಿಸಿದ ಕುಂದರ್, ಕೋಟ ಭಾಗದಲ್ಲಿ ಪರಿಸರ ಕಾಳಜಿಯ ಕ್ರಾಂತಿ ಪಸರಿಸಿದ ಸಂಸ್ಥೆಗೆ ಅಭಿನಂದನೆ ಸಲ್ಲಿಸಿ ಆಜಾದಿಕಾ ಅಮೃತ್ ಮಹೋತ್ಸವ್ ಮೂಲಕ ದೇಶದ ಪ್ರಧಾನಿ ಕನಸಿಗೆ ಪ್ರತಿಯೊಬ್ಬರು ಟೊಂಕಕಟ್ಟಲು ಕರೆಇತ್ತರು.

ಕಾರ್ಯಕ್ರಮದಲ್ಲಿ ಕೋಟ ಗ್ರಾಮಪಂಚಾಯತ್ ಅಧ್ಯಕ್ಷ ಅಜಿತ್ ದೇವಾಡಿಗ,ಉಪಾಧ್ಯಕ್ಷೆ ಜಯಂತಿ ಪೂಜಾರಿ,ಜನತಾ ಫಿಶ್‍ಮಿಲ್ ಮ್ಯಾನೇಜರ್ ಶ್ರೀನಿವಾಸ್ ಕುಂದರ್,ಕೋಟ ಗ್ರಾ.ಪಂ ಘನ ಹಾಗೂ ದ್ರವ ತ್ಯಾಜ್ಯ ಘಟಕದ ಮುಖ್ಯಸ್ಥೆ ಲೋಲಾಕ್ಷಿ ಕೋತ್ವಾಲ್ ,ಗೀತಾನಂದ ಸಮಾಜಕಾರ್ಯವಿಭಾಗದ ರವಿಕಿರಣ್ ಕೋಟ,ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಮೃತ್ ಜೋಗಿ, ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಕಲಾವತಿ ಅಶೋಕ್,ವಿಪ್ರ ಮಹಿಳಾ ಬಳಗದ ಸಂಚಾಲಕಿ ವನೀತಾ ಉಪಾಧ್ಯ, ಮಣೂರು ಫ್ರೆಂಡ್ಸ್ ಅಧ್ಯಕ್ಷ ದಿನೇಶ್ ಆಚಾರ್ಯ,ಯಕ್ಷಸೌರಭದ ಸತ್ಯನಾರಾಯಣ ಆಚಾರ್ಯ,ಕೋಟ ಗ್ರಾಮಪಂಚಾಯತ್ ಸದಸ್ಯರಾದ ಜಯರಾಮ ಶೆಟ್ಟಿ,ಪ್ರದೀಪ್ ಸಾಲಿಯಾನ್,ಹಂದಟ್ಟು ಮಹಿಳಾ ಬಳಗದ ಪುಷ್ಭಾ ಕೆ ಹಂದಟ್ಟು ಮತ್ತಿತರರು ಉಪಸ್ಥಿತರಿದ್ದರು.ಕಾರ್ಯಕ್ರಮವನ್ನು ಸುಜಾತ ಬಾಯರಿ ನಿರೂಪಿಸಿದರೆ ಪಂಚವರ್ಣದ ಕಾರ್ಯಾಧ್ಯಕ್ಷ ರವೀಂದ್ರ ಕೋಟ ಕಾರ್ಯಕ್ರಮ ಸಂಯೋಜಿಸಿ ವಂದಿಸಿದರು.

Click Here

LEAVE A REPLY

Please enter your comment!
Please enter your name here