ಕುಂದಾಪುರ ಮಿರರ್ ಸುದ್ದಿ…
ಕೋಟ: ಇಲ್ಲಿನ ಶ್ರೀ ವಿರಾಡ್ಡಿಶ್ವಬ್ರಾಹ್ಮಣ ಸಮಾಜೋದ್ಧಾರಕ ಸಂಘ ಸಾಲಿಗ್ರಾಮ, ವಿಶ್ವಕರ್ಮ ಕಲಾವೃಂದ, ವಿಶ್ವಜ್ಯೋತಿ ಮಹಿಳಾ ಬಳಗ ಸಾಲಿಗ್ರಾಮದ ಆಶ್ರಯದಲ್ಲಿ ಚೇಂಪಿ ಸಾಲಿಗ್ರಾಮ ಶ್ರೀವಿಶ್ವಕರ್ಮ ಸಾಂಸ್ಕೃತಿಕ ಭವನದಲ್ಲಿ ಶನಿವಾರ ಸಂಭ್ರಮದ ವಿಶ್ವಕರ್ಮ ಯಜ್ಞ ಮಹೋತ್ಸವ ಜರುಗಿತು.
ಈ ಸಂದರ್ಭದಲ್ಲಿ ಕಾರ್ಯಕ್ರಮಕ್ಕೆ ಭೇಟಿ ನೀಡಿದ ರಾಜ್ಯದ ಸಮಾಜಕಲ್ಯಾಣ ಹಿಂದುಳಿದ ವರ್ಗಗಳ ಕಲ್ಯಾಣ ಖಾತೆಯ ಸಚಿವ ಕೋಟ ಶ್ರೀನಿವಾಸ ಪೂಜಾರಿ ಇವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಕೋಟ ಶ್ರೀವಿರಾಡ್ಡಿಶ್ವಬ್ರಾಹ್ಮಣ ಸಮಾಜೋದ್ಧಾರಕ ಸಂಘ ಸಾಲಿಗ್ರಾಮದ ಅಧ್ಯಕ್ಷ ಮಣೂರು ಸುಬ್ರಾಯ ಆಚಾರ್ಯ,ಉಪಾಧ್ಯಕ್ಷ ರಾಘವೇಂದ್ರ ಆಚಾರ್ಯ,ಗೌರವಾಧ್ಯಕ್ಷ ಜನಾರ್ದನ ಆಚಾರ್ಯ ಚೇಂಪಿ,ಗೌರವ ಸಲಹೆಗಾರ ಗಣಪಯ್ಯ ಆಚಾರ್ಯ ಐರೋಡಿ,ಪುರೋಹಿತರಾದ ಲಕ್ಷ್ಮೀಕಾಂತ್ ಶರ್ಮ,ಎಸ್ ವಿ ರಾಘವೇಂದ್ರ ಆಚಾರ್ಯ, ಕಾರ್ಯದರ್ಶಿ ಐರೋಡಿ ಕೇಶವ ಆಚಾರ್ಯ,ಜೊತೆಕಾರ್ಯದರ್ಶಿಗಳಾದ ಜಗದೀಶ ಆಚಾರ್ಯ ಐರೋಡಿ,ಗಿರಿಧರ ಆಚಾರ್ಯ ಚೇಂಪಿ, ಕೋಶಾಧಿಕಾರಿ ಚೇಂಪಿ ರಮೇಶ್ ಆಚಾರ್ಯ,ವಿಶ್ವಕರ್ಮ ಕಲಾವೃಂದದ ಅಧ್ಯಕ್ಷ ಸಾಲಿಗ್ರಾಮ ವೆಂಕಟೇಶ್ ಆಚಾರ್ಯ, ಕಾರ್ಯದರ್ಶಿ ಕೋಟ ನಿತ್ಯಾನಂದ ಆಚಾರ್ಯ, ಕೋಶಾಧಿಕಾರಿ ಸಾಲಿಗ್ರಾಮ ರಾಘವೇಂದ್ರ ಆಚಾರ್ಯ,ಉಪಾಧ್ಯಕ್ಷರಾದ ದಿನೇಶ್ ಆಚಾರ್ಯಚೇಂಪಿ, ವಿಶ್ವಜ್ಯೋತಿ ಮಹಿಳಾ ಬಳಗದ ಅಧ್ಯಕ್ಷೆ ಸಾಲಿಗ್ರಾಮ ಸುಜಾತ ರಾಘವೇಂದ್ರ ಆಚಾರ್ಯ, ಮೊದಲಾದವರು ಉಪಸ್ಥಿತರಿದ್ದರು.











