ಕುಂದಾಪುರ ಮಿರರ್ ಸುದ್ದಿ…
ಕೋಟ: ಶ್ರೀ ಅಘೋರೇಶ್ವರ ಕಲಾರಂಗದ ವತಿಯಿಂದ ಪ್ರತಿ ವರುಷದಂತೆ ಈ ಬಾರಿಯೂ ತಾವೆ ಕೃಷಿ ಕಾರ್ಯ ಮಾಡಿ ಬಂದ ಅಕ್ಕಿಯನ್ನು ಬಾಲ ನಿಕೇತನ ಅನಾಥಾಶ್ರಮ ಮಟಪಾಡಿ ಬ್ರಹ್ಮಾವರ ಇವರಿಗೆ ನೀಡಲಾಯಿತು.
ಕಲಾರಂಗ ಸದಸ್ಯರು ಸುಮಾರು ಹತ್ತು ವರುಷದಿಂದ ಕೃಷಿ ಕಾರ್ಯ ನಡೆಸಿಕೊಂಡು ಬಂದಿದ್ದು ಬಂದ ಅಕ್ಕಿಯನ್ನು ಜಿಲ್ಲೆಯ ಅನೇಕ ಅನಾಥಾಶ್ರಮಕ್ಕೆ ನೀಡುತ್ತಿದ್ದು ಅದರಂತೆ ನಮ್ಮ ಆಶ್ರಮಕ್ಕೂ ಸಾಕಷ್ಟು ಸಹಾಯಹಸ್ತ ಚಾಚುತ್ತಿದ್ದಾರೆ ಇದು ಶ್ಲಾಘನೀಯಕಾರ್ಯ ಎಂದು ಆಶ್ರಮದ ಸಂಚಾಲಕ ಸೂರ್ಯನಾರಾಯಣ ಗಾಣಿಗ ಮಟಪಾಡಿ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಕಲಾರಂಗದ ಅಧ್ಯಕ್ಷ ಆರ್ ಕೆ ಬ್ರಹ್ಮಾವರ್, ಕಾರ್ಯದರ್ಶಿ ವಿಶ್ವನಾಥ ಗಾಣಿಗ ಬೆಟ್ಲಕ್ಕಿ, ಉಪಾಧ್ಯಕ್ಷ ಶ್ಯಾಮ ಸುಂದರ್ ನಾಯರಿ ಸದಸ್ಯರುಗಳಾದ ಸತ್ಯನಾರಾಯಣ ಆಚಾರ್,,ನವೀನ್ ನಾಯರಿ ,ಸತೀಶ್,ಅಶೋಕ್ ಪೂಜಾರಿ ಪಾರಂಪಳ್ಳಿ,ಗಿರೀಶ್ ಗಾಣಿಗ ಬೆಟ್ಲಕ್ಕಿ, ಪ್ರಭಾಕರ,ಸುಜಿತ್ ಕಾರ್ತಟ್ಟು,ಮಾಜಿ ಅಧ್ಯಕ್ಷರಾದ ನಾಗರಾಜ್ ಐತಾಳ್ ಹಾಗೂ, ಆಶ್ರಮದ ವ್ಯವಸ್ಥಾಪಕ ಜಯರಾಮ್ ನಾಯರಿ ಮಟಪಾಡಿ ಉಪಸ್ಥಿತರಿದ್ದರು.











