ಕುಂದಾಪುರ :ಜಿಯೋದಿಂದ ಹಳ್ಳಿ ಹಳ್ಳಿಗೂ ವೇಗದ ನೆಟ್ವರ್ಕ್ – ಸುಧೀಂದ್ರ

0
500

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ : ದೇಶದಾದ್ಯಂತ  ಹಳ್ಳಿ ಹಳ್ಳಿಗೂ ವೇಗದ ನೆಟ್ವರ್ಕ್ ಸಿಗಬೇಕು ಎನ್ನುವ ಉದ್ದೇಶದಿಂದ, ರಿಲಯನ್ಸ್ ಜೀಯೋ ಇನ್ಪೋ ಕಮ್ ಲಿಮಿಟೆಡ್ ಮೆಘಾ  ಎನ್ಎನ್‌ಡಿ ಪ್ರಾಜೆಕ್ಟ್ ತಂದಿದ್ದು, ಈ ಯೋಜನೆಯ ಭಾಗವಾಗಿ ಉಡುಪಿ ಬಸ್ರೂರಿನಲ್ಲಿ ಭೂಮಿ ಪೂಜೆ ನೆರವೇರಿಸಲಾಯಿತು.

Video:

Click Here

ಡಿಜಿಟಲ್ ಇಂಡಿಯಾ ಪೂರಕವಾಗಿ, ವೇಗದ 5ಜಿ ನೆಟ್ವರ್ಕ್ ಸಿಗಬೇಕು ಎನ್ನುವ ನಿಟ್ಟಿನಲ್ಲಿ ಈ ಯೋಜನೆ ಹೊರತಂದಿದ್ದು, ಬಸ್ರೂರಿನಲ್ಲಿ ಯೋಜನೆಯ ಭೂಮಿ ಪೂಜೆ ನಡೆಸಿ, ಜೀಯೋ ಇನ್ಪೋ ಕಮ್ ಲಿಮಿಟೆಡ್ ಸ್ಟೇಟ್ ಕಸ್ಟಮೈಜ್ ಹೆಡ್ ಸುದೀಂದ್ರ ಅವರು ಗುದ್ದಲಿ ಪೂಜೆ ನೆರವೇರಿಸಿದರು.

ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ದೇಶದ ಪ್ರತಿಯೊಂದು ಕಡೆಗೂ ವೇಗದ ಸಿಗಬೇಕು ಎನ್ನುವುದು ಈ ಯೋಜನೆ ಉದ್ದೇಶವಾಗಿದ್ದು, ಯೋಜನೆಯಿಂದ ನೆಟ್ವರ್ಕ್ ಸಮಸ್ಯೆ ನಿವಾರಣೆಯಾಗಲಿದೆ. ಇದರಿಂದ ಹಳ್ಳಿಯಲ್ಲಿ  ವರ್ಕ್ ಪ್ರಮ್ ಹೋಮ್ ಕೆಲಸ ಮಾಡುವವರಿಗೂ ಉಪಯೋಗವಾಗಲಿದೆ. ಅಲ್ಲದೇ ಲಕ್ಷಾಂತರ ಜನ ಸೇರಿದಾಗಲೂ ಯಾವುದೇ ನೆಟ್ವರ್ಕ್ ಸಮಸ್ಯೆ ಉಂಟಾಗುದಿಲ್ಲ ಅಂತ ಹೇಳಿದ್ದರು
ಕಾರ್ಯಕ್ರಮದಲ್ಲಿ, ಸ್ಟೇಟ್ ಕಮರ್ಷಿಯಲ್ ಹೆಡ್ ವಿಷ್ಣು ದಾಸ್ , ಸ್ಟೇಟ್ ಪ್ರಾಜೆಕ್ಟ್ ಹೆಡ್ ಮಹೇಶ್, ಸ್ಟೇಟ್ ರಾ&ಓ ಹೆಡ್ ವಿರೇಂದ್ರ  ಬಾಬು, ಉದ್ಭವ್ ಇನ್ಫ್ರಾಸ್ಟ್ಟಕ್ಚರ್ ನ ಶ್ರೀಶಾ ನಾಯಕ್ ಪೆರ್ಣಂಕಿಲ, ಎರಿಯಾ  ಮ್ಯಾನೇಜರ್ ರಿಲಯನ್ಸ್ ಜೀಯೋ ಇನ್ಪೋ ಕಮ್‌ನ ಕಿರಣ್ ನಾಯಕ್,  ಬಸ್ರೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ದಿನಕರ ಶೆಟ್ಟಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕಿಶೋರ್ ಕುಮಾರ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸುವರ್ಧನ್ ನಾಯಕ ನಿರೂಪಿಸಿ ವಂದಿಸಿದ್ದರು.

Click Here

LEAVE A REPLY

Please enter your comment!
Please enter your name here