ಕುಂದಾಪುರ ಮಿರರ್ ಸುದ್ದಿ…
ಕೋಟ: ಶ್ರೀ ಕುಮಾರ ಸ್ವಾಮಿ ಮತ್ತು ಪರಿವಾರ ದೇವಸ್ಥಾನ ಅಲಿತೋಟ್ ಗುಂಡ್ಮಿಯಲ್ಲಿ ನೆಡದ ಶರನ್ನವರಾತ್ರಿ ಅಂಗವಾಗಿ ಡ್ರಾಮ ಜೂನಿಯರ್ ವಿಜೇತ ಕುಂದಾಪುರ ಸಮೃದ್ಧಿ ಎಸ್ ಮೊಗವೀರ ಇವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಉದ್ಯಮಿಗಳಾದ ಸುಶೀಲ ಆನಂದ, ಅಲಿತೋಟ ಗ್ರಾಮ ಸಬಾಧ್ಯಕ್ಷರಾದ ರಾಜು ಅಮೀನ್, ಮೊಗವೀರ ಯುವ ಸಂಘಟನೆ ಜಿಲ್ಲಾ ಘಟಕದ ಮಾಜಿ ಪ್ರಧಾನ ಕಾರ್ಯದರ್ಶಿ ಸತೀಶ್ ಮಾರಕಲ, ದೇವಸ್ಥಾನ ಅರ್ಚಕಾರದ ವಿಠ್ಠಲ್ ಕರ್ಕೇರ ಹಾಗೂ ದೀನೆಶ್ ಕರ್ಕೇರ ಹಾಗೂ ಗ್ರಾಮ ಸಭೆಯ ಗುರಿಕಾರ ನರಸಿಂಹ ಕುಂದರ್ ಮತ್ತಿತರರು ಉಪಸ್ಥಿತರಿದ್ದರು.











