ಕುಂದಾಪುರ ಮಿರರ್ ಸುದ್ದಿ…
ಕೋಟ: ವಿವೇಕ ಪದವಿಪೂರ್ವ ಕಾಲೇಜಿನ ಭೌತಶಾಸ್ತ್ರ ವಿಭಾಗದಲ್ಲಿ ಪ್ರಯೋಗಶಾಲಾ ಸಹಾಯಕರಾಗಿ 40 ವರ್ಷಗಳ ಕಾಲ ಸುದೀರ್ಘ ಸೇವೆಯನ್ನು ಸಲ್ಲಿಸಿ, ಇಲಾಖಾ ನಿಯಮದಂತೆ ವಯೋನಿವೃತ್ತಿ ಹೊಂದಿದ ರಘುರಾಮ ಇವರನ್ನು ಕೋಟ ವಿದ್ಯಾಸಂಘ ಮತ್ತು ವಿವೇಕ ವಿದ್ಯಾಸಂಸ್ಥೆಗಳ ಸಿಬ್ಬಂದಿ ವರ್ಗದ ಜಂಟಿ ಆಶ್ರಯದಲ್ಲಿ ಸಮ್ಮಾನಿಸಿ ಭಾವಪೂರ್ಣ ವಿದಾಯವನ್ನು ನೀಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೋಟ ವಿದ್ಯಾಸಂಘದ ಅಧ್ಯಕ್ಷ ಪ್ರಭಾಕರ ಮೈಯ್ಯರು ವಹಿಸಿದ್ದರು.
ಕೋಶಾಧಿಕಾರಿ ವಲೇರಿಯನ್ ಮೆನೇಜಸ್ ಮತ್ತು ಜೊತೆಕಾರ್ಯದರ್ಶಿ ಮಂಜುನಾಥ ಉಪಾಧ್ಯ ಶುಭಾಶಂಸನೆಗೈದರು. ಕಾಲೇಜಿನ ಪ್ರಾಂಶುಪಾಲರಾದ ಕೆ. ಜಗದೀಶ ನಾವಡರು ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ಭೌತಶಾಸ್ತ್ರ ವಿಭಾಗದ ಹಿರಿಯ ಉಪನ್ಯಾಸಕರಾದ ರವಿ ಕಾರಂತರು ನಿವೃತ್ತರ ಕುರಿತು ತಮ್ಮ ಅನುಭವವನ್ನು ಹಂಚಿಕೊಂಡರು. ಬಾಲಕಿಯರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಕೆ. ಜಗದೀಶ ಹೊಳ್ಳ, ಆಂಗ್ಲ ಮಾಧ್ಯಮ ವಿಭಾಗದ ಮುಖ್ಯಸ್ಥ ಭಾಸ್ಕರ ಆಚಾರ್ಯ ಹಾಗು ಮುಖ್ಯ ಸಹಶಿಕ್ಷಕ ವೆಂಕಟೇಶ ಉಡುಪ ಉಪಸ್ಥಿತರಿದ್ದರು.
ಉಪನ್ಯಾಸಕ ಶಿವಪ್ರಸಾದ ಶೆಟ್ಟಿಗಾರ್ ಪ್ರಾರ್ಥಿಸಿದರು, ಸಿಬ್ಬಂದಿ ಸಂಘದ ಕಾರ್ಯದರ್ಶಿ ಮಂಜುನಾಥ ಉಪಾಧ್ಯ ಕಾರ್ಯಕ್ರಮ ನಿರ್ವಹಿಸಿದರು, ಶಿಕ್ಷಕ ನರೇಂದ್ರ ಕುಮಾರ್ ವಂದಿಸಿದರು.











