ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಶ್ರೀ ಕ್ಷೇ.ಧ.ಗ್ರಾ.ಯೋಜನೆಯ ಪ್ರಗತಿಬಂಧು ಸ್ವಸಹಾಯ ಸಂಘಗಳ ವಂಡ್ಸೆ ಒಕ್ಕೂಟದ ವಾರ್ಷಿಕ ಸಭೆ ವಂಡ್ಸೆ ಸ.ಮಾ.ಹಿ.ಪ್ರಾ.ಶಾಲೆಯಲ್ಲಿ ನಡೆಯಿತು. ಒಕ್ಕೂಟದ ಅಧ್ಯಕ್ಷ ಗಿರೀಶ್ ನಾಯ್ಕ್ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ವಲಯ ಮೇಲ್ವಿಚಾರಕ ಚಂದ್ರ ಮಧುವನ ನೂತನ ಪದಾಧಿಕಾರಿಗಳ ಆಯ್ಕೆ ನೆರವೇರಿಸಿದರು.
ಒಕ್ಕೂಟದ ಉಪಾಧ್ಯಕ್ಷ ಭಾಗ್ಯರಾಜ್ ಆಚಾರ್ಯ, ಕಾರ್ಯದರ್ಶಿ ವನಿತಾ, ಜೊತೆ ಕಾರ್ಯದರ್ಶಿ ನಯನ ಶೆಟ್ಟಿ, ಕೋಶಾಧಿಕಾರಿ ರಾಜರತ್ನ ಹಾಗೂ ದಾಖಲಾತಿ ಸಮಿತಿ ಸದಸ್ಯರು, ಸೇವಾಪ್ರತಿನಿಧಿ ಶರ್ಮಿಳಾ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ವಂಡ್ಸೆ ಒಕ್ಕೂಟದ ಮಾಜಿ ಅಧ್ಯಕ್ಷರಾದ ವಾಸು ಜಿ.ನಾಯ್ಕ್, ಆನಂದ ನಾಯ್ಕ್, ಶಂಕರ ಆಚಾರ್ಯ, ಜಯಂತಿ ಪಿ ಶೆಟ್ಟಿ, ಮಾಜಿ ಉಪಾಧ್ಯಕ್ಷರಾದ ಗೀತಾ ಅಬ್ಬಿ, ದಯಾನಂದ ಆಚಾರ್ಯ, ಜವಾಬ್ದಾರಿ ಸವಿನಯ ಸಂಘದ ದಿವಾಕರ ಸುಜಿ, ಗುರುರಾಜ ಗಾಣಿಗ, ಸುಧಾಕರ ಪೂಜಾರಿ, ಕೃಷ್ಣ, ಜಗದೀಶ ಉಪಸ್ಥಿತರಿದ್ದರು. ಸೇವಾ ಪ್ರತಿನಿಧಿ ಶರ್ಮಿಳಾ ಅವರನ್ನು ಸನ್ಮಾನಿಸಲಾಯಿತು. ಶಂಕರ ಆಚಾರ್ಯ ಸ್ವಾಗತಿಸಿ, ದಿವಾಕರ ಸುಜಿ ವಂದಿಸಿದರು.
ಒಕ್ಕೂಟದ ನೂತನ ಅಧ್ಯಕ್ಷರಾಗಿ ಚಂದ್ರವತಿ ಶೆಟ್ಟಿ, ಉಪಾಧ್ಯಕ್ಷರಾಗಿ ದಾಮೋದರ ಕುಕ್ಕೆಶ್ರೀ ವಂಡ್ಸೆ, ಕಾರ್ಯದರ್ಶಿಯಾಗಿ ನಯನ ಶೆಟ್ಟಿ, ಜೊತೆ ಕಾರ್ಯದರ್ಶಿಯಾಗಿ ಕವಿತಾ ವಂಡ್ಸೆ, ಕೋಶಾಧಿಕಾರಿಯಾಗಿ ನೇತ್ರಾವತಿ ಶಾರ್ಕೆ ಆಯ್ಕೆಯಾದರು.











