ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ನಮ್ಮೊಳಗಿನ ಸಮಸ್ಯೆಗಳನ್ನು ಪರಸ್ಪರ ಸಹಬಾಳ್ವೆಯಿಂದ ಪರಿಹರಿಸಿಕೊಳ್ಳಬೇಕು. ಆ ಮೂಲಕ ಸಮಾಜಕ್ಕೆ ನಾವು ಮಾದರಿಯಾಗಬೇಕು ಎಂದು ಉಡುಪಿ ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಅಬ್ದುಲ್ ಮುತ್ತಾಲಿ ವಂಡ್ಸೆ ಹೇಳಿದರು.

ಅವರು ಬುಧವಾರ ಕುಂದಾಪುರದ ಜಾಮೀಯಾ ಮಸೀದಿ ಕುಂದಾಪುರ ಜಮಾತಿನ ನೂತನ2022-25ನೇ ಸಾಲಿನ ಅಧ್ಯಕ್ಷರು ಮತ್ತು ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರಿಸಿ ಮಾತನಾಡಿದರು. ಬಳಿಕ ಮಾತನಾಡಿದ ಅವರು, ಜಮಾತಿನ ನೂತನ ಆಡಳಿತ ಮಂಡಳಿಗೆ ಅಭಿನಂದನೆ ತಿಳಿಸಿ, ಭಿನ್ನಾಭಿಪ್ರಾಯ ಭಾರದಂತೆ ಸೌಹಾರ್ದತೆಯಿಂದ ಸಮುದಾಯದ ಉನ್ನೀತಿಕರಣಕ್ಕೆ ಸೇವೆ ನೀಡಬೇಕೆಂದು ಹೇಳಿದರು.
ಜಮಾತಿನ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಎಸ್.ಎಮ್.ವಸೀಮ್ ಬಾಷಾ ಅಧಿಕಾರ ಸ್ವೀಕರಿಸಿದರು. ಅಧಿಕಾರ ಸ್ವೀಕರಿಸಿ ಮಾತನಾಡಿದ ಎಸ್.ಎಮ್.ವಾಸೀಮ್ ಬಾಷಾ, ಜಮಾತಿನ ಎಲ್ಲಾ ಪದಾಧಿಕಾರಿಗಳನ್ನು ಒಗ್ಗೂಡಿಸಿ ಎಲ್ಲರ ಅಭಿಪ್ರಾಯ ಪಡೆದು ಒಗ್ಗಟ್ಟಿನೊಂದಿಗೆ ಸೇವೆ ನೀಡುತ್ತೇನೆ ಎಂದರು. ಉಪಾಧ್ಯಕ್ಷರಾಗಿ ಅಬು ಮೊಹಮ್ಮದ್ ಮುಜಾವರ್, ಕಾರ್ಯದರ್ಶಿ ಶಮ್ಸ್ ತಬ್ರೇಜ್, ಖಜಾಂಚಿ ಶಾನವಾಜ್, ಸದಸ್ಯರಾಗಿ ನವಾಜ್ ಜೆ.ಕೆ.,ಮುಜಾವರ್ ಅಶ್ಷಕ್ ಅಹಮ್ಮದ್, ಶೇಕ್ ಪರೀಧ್ ಇಲಿಯಾಸ್, ನವಾಜ್ ಅಬ್ದುಲ್ ಮಜೀದ್, ಜೆ. ಮಹಮ್ಮದ್ ಅಮೀನ್, ಆಯೂಬ್ ಕೋಯಾ, ಜೆ.ಎಮ್.ಅಶ್ಪಕ್ ಅಧಿಕಾರ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷರಾದ ಅಬ್ದುಲ್ ಮುತಾಲಿಬ್ ವಂಡ್ಸೆಯವರನ್ನು ಗೌರವಿಸಿ ಸನ್ಮಾನಿಸಲಾಯಿತು. ಉಡುಪಿ ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧಿಕಾರಿ ಅಬುಬಕರ್ ಸಾಹೇಬ್, ಮುಜಾಹಿದ್ ಪಾಶಾ , ಕುಂದಾಪುರ ಜಾಮೀಯ ಮಸೀದಿಯ ಆಡಳಿತಾಧಿಕಾರಿ ಹೆಚ್ ಮೀರಾ ಸಾಹೇಬ್ ಮೊದಲಾದವರು ಉಪಸ್ಥಿತರಿದ್ದರು. ಅಬು ಮಹಮ್ಮದ್ ಸ್ವಾಗತಿಸಿದರು. ಆಸೀಮ್ ಕಾರ್ಯಕ್ರಮ ನಿರೂಪಿಸಿದರು.











