ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಜೆಸಿಐ ಚಿತ್ತೂರು ಮಾರಣಕಟ್ಟೆಯ ಸದಸ್ಯ ಗುಂಡು ಪೂಜಾರಿ ಅವರಿಗೆ ಪ್ರತಿಷ್ಠಿತ ವಲಯ 15ರ 2022ನೇ ಸಾಲಿನ ಕೃಷಿರತ್ನ ಪ್ರಶಸ್ತಿ ಪ್ರದಾನಿಸಿ ಗೌರವಿಸಲಾಯಿತು.
ಜೆಸಿಐ ಬೆಳ್ಮಣ್ಣು ಆಶ್ರಯದಲ್ಲಿ ಬೆಳ್ಮಣ್ಣಿನ ಮೂಹೂರ್ತ ಸಭಾಂಗಣದಲ್ಲಿ ನಡೆದ ಜೆಸಿಐ ವಲಯ 15ರ 2022ನೇ ಸಾಲಿನ ವ್ಯವಹಾರ ಸಮ್ಮೇಳನ ‘ಸಂಕಲನ ಸಾಧಕರ ಸಭಾಂಗಣ’ದಲ್ಲಿ ಉದ್ಯಮ, ಉದ್ಯೋಗ, ಕಲೆ, ಕೃಷಿ ಮತ್ತು ಸಮಾಜ ಸೇವೆ ಹೀಗೆ ಈ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹಲವು ಜೆಸಿಐ ಸದಸ್ಯರಿಗೆ ಸಾಧನಶ್ರೀ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಜೆಸಿಐ ಚಿತ್ತೂರು ಮಾರಣಕಟ್ಟೆಯ ಸದಸ್ಯ ಗುಂಡು ಪೂಜಾರಿ ಅವರು ಕೃಷಿ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಕೃಷಿರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಜೆಸಿಐ ವಲಯ 15ರ ವಲಯಾಧ್ಯಕ್ಷ ಸೆನೆಟರ್ ರಾಯನ್ ಉದಯ ಕ್ರಾಸ್ತಾ, ವಲಯ ಉಪಾಧ್ಯಕ್ಷ ವಿಜಯ ನರಸಿಂಹ ಐತಾಳ್, ಕುಂದಾಪುರ ವ್ಯವಹಾರ ವಿಭಾಗದ ವಲಯ ನಿರ್ದೇಶಕ ಸರ್ವಜ್ಞ ತಂತ್ರಿ, ಜೆಸಿಐ ಚಿತ್ತೂರು ಮಾರಣಕಟ್ಟೆಯ ಅಧ್ಯಕ್ಷರು ಮತ್ತು ಸದಸ್ಯರು ಉಪಸ್ಥಿತರಿದ್ದರು.











