ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ : ವಾಹನಗಳ ಅರ್ಹತಾ ಪತ್ರ (ಎಫ್.ಸಿ) ಪಡೆದುಕೊಳ್ಳುವ ಪೂರ್ವದಲ್ಲಿ ರೀಟ್ರಾ ರೀಫ್ಲೇಕ್ಟೀವ್ ಟೇಪ್ ಹಾಗೂ ರಿಯರ್ ಮಾರ್ಕಿಂಗ್ ಪ್ಲೇಟ್ ಅಳವಡಿಸುವುದನ್ನು ಸರ್ಕಾರ ಕಡ್ಡಾಯ ಮಾಡಿದ್ದು, ವಾಹನ ಮಾಲಿಕರಿಗೆ ಅನುಕೂಲವಾಗಲು ತಾಲ್ಲೂಕು ಲಾರಿ ಮಾಲಿಕರ ಸಂಘದಿಂದ ಸ್ಟಿಕ್ಕರ್ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಕುಂದಾಪುರ ತಾಲ್ಲೂಕು ಲಾರಿ ಮಾಲಿಕರ ಸಂಘದ ಅಧ್ಯಕ್ಷ ಸುಧಾಕರ ಸ್ವಸ್ತಿಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಾರುಕಟ್ಟೆ ಧಾರಣೆಗಿಂತ ಕಡಿಮೆ ದರದಲ್ಲಿ ಸ್ಟಿಕ್ಕರ್ ವಿತರಣೆ ಮಾಡುವ ಕುರಿತು ಪ್ರಾದೇಶಿಕ ಸಾರಿಗೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗಿದ್ದು, ಸಂಘದಿಂದ ಸ್ಟಿಕ್ಕರ್ ವಿತರಣೆ ಕಾರ್ಯ ನಡೆಯುವುದರಿಂದ ವಾಹನದ ಮಾಲಿಕರಿಗೆ ಸಾಕಷ್ಟು ಉಪಯೋಕವಾಗಲಿದ್ದು, ವಾಹನ ಮಾಲಿಕರು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಹಾಗೂ ಸಂಪರ್ಕಕ್ಕಾಗಿ ದೂರವಾಣಿ ಸಂಖ್ಯೆ 9449166613 (ಸುಧಾಕರ ) / 9449600198 (ಅನಿಲ) ಅವರನ್ನು ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.










