ಕುಂದಾಪುರ :ಡಾ. ರಾಜ್ ಸಂಘಟನೆಯಿಂದ ಪುನೀತ ಸ್ಮರಣೆ

0
440

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಎಷ್ಟೋ ಜನರ ಬಾಳಿಗೆ ಬೆಳಕಾಗಿದ್ದ ಅಪ್ಪು ಇಲ್ಲದೆ ವರುಷವೊಂದು ಕಳೆದು ಹೋಗಿದೆ ಕನ್ನಡ ಚಿತ್ರರಂಗದ ದಂತ ಕತೆಯಾಗಿರುವ ಪುನೀತ್ ರಾಜ್ ಕುಮಾರ್ ಸೂರ್ಯ ಚಂದ್ರರಿರುವ ತನಕ ಅಭಿಮಾನಿಗಳ ಹೃದಯದಲ್ಲಿ ಸದಾ ಜೀವಂತರಾಗಿರುತ್ತಾರೆ ಎಂದು ಕನ್ನಡಾಭಿಮಾನಿ ಡಾ.ರಾಜ್ ಸಂಘಟನೆಯ ಅಧ್ಯಕ್ಷ ರತ್ನಾಕರ ಪೂಜಾರಿಯವರು ಹೇಳಿದರು.

Click Here

ಅವರು ಸಂಘ ವತಿಯಿಂದ ಕುಂದಾಪುರ ಹೊಸ ಬಸ್ ನಿಲ್ದಾಣದಲ್ಲಿ ಆಯೋಜಿಸಲಾದ ಪುನೀತ ಸ್ಮರಣೆ ಕಾರ್ಯಕ್ರಮದಲ್ಲಿ ಪುನೀತ್ ರಾಜ್ ಕುಮಾರ್ ಚಿತ್ರಕ್ಕೆ ದೀಪ ಹಚ್ಚಿ ಮಾತನಾಡಿದರು.

ಮೊಂಬತ್ತಿ ಬೆಳಗಿಸುವುದರ ಮೂಲಕ ಒಂದು ನಿಮಿಷ ಮೌನವನ್ನುಆಚರಿಸಲಾದ ಕಾರ್ಯಕ್ರಮದಲ್ಲಿ ಸಂಘದ ಅಗಸ್ಟಿನ್ ಡಿಸೋಜಾ,ದುಂಡಿರಾಜ್, ಹರ್ಷ ಖಾರ್ವಿ,ಶ್ರೀಧರ ಗಾಣಿಗ, ಗಾಳಿ ಮಾಧವ ಖಾರ್ವಿ,ಪ್ರಭಾಕರಖಾರ್ವಿ,ಕೋಡಿ ಶಂಕರ, ಸಂತೋಷ್ ಕುಂದೇಶ್ವರ್, ಗುರು ಖಾರ್ವಿ,ಕಿಶನ್ ಖಾರ್ವಿ,ನಾರಾಯಣ ಗಾಣಿಗ ತೆಕ್ಕಟ್ಟೆ ಸಹಿತ ಹಲವಾರು ಸಾರ್ವಜನಿಕರು ಭಾಗವಹಿಸಿದ್ದರು .ಸುನಿಲ್ ಕುಮಾರ್ ತಲ್ಲೂರು ಸ್ವಾಗತ ಕೋರಿದರು. ಪತ್ರಕರ್ತ ಮಝರ್ ಕುಂದಾಪುರ ನಿರೂಪಿಸಿದರು.

Click Here

LEAVE A REPLY

Please enter your comment!
Please enter your name here