ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಕೇಂದ್ರ ವಿದೇಶಾಂಗ ವ್ಯವಹಾರಗಳು ಮತ್ತು ಭಾರತದ ಸಂಸದೀಯ ವ್ಯವಹಾರಗಳ ರಾಜ್ಯ ಸಚಿವರಾದ ವಿ.ಮುರಳಿಧರನ್ ಅವರನ್ನು ಬೈಂದೂರು ಶಿವಮೊಗ್ಗ ಸಂಸದ ಬಿ. ವೈ ರಾಘವೇಂದ್ರ ಅವರು ಕೊಲ್ಲೂರಿನಲ್ಲಿ ಭೇಟಿ ಮಾಡಿದರು.


ಈ ಸಂದರ್ಭ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬೈಂದೂರು ವಿಧಾನಸಭಾ ಕ್ಷೇತ್ರದ ರೈಲ್ವೇ, ಏರ್ ಸ್ಟ್ರಿಪ್ ಹಾಗೂ ವಿವಿಧ ಯೋಜನೆಯ ವಿಷಯವನ್ನು ಚರ್ಚಿಸಿದರು.
ಈ ಸಂದರ್ಭದಲ್ಲಿ ಬೈಂದೂರು ಕ್ಷೇತ್ರದ ಶಾಸಕ ಬಿ. ಎಂ ಸುಕುಮಾರ್ ಶೆಟ್ಟಿ , ಮಾಜಿ ರೈಲ್ವೇ ಬೋರ್ಡ್ ನಿರ್ದೇಶಕ ವೆಂಕಟೇಶ್ ಕಿಣಿ, ಗ್ರಾ. ಪಂ ಅಧ್ಯಕ್ಷ ಸಂತೋಷ್ ಭಟ್,ಬೈಂದೂರು ವಕೀಲರ ಸಂಘದ ಅಧ್ಯಕ್ಷ ಮೊಬಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.











