ಕುಂದಾಪುರ ಮಿರರ್ ಸುದ್ದಿ…
ಕೋಟ: ಕನ್ನಡ ಭಾಷೆಗೆ ತನ್ನದೆ ಆದ ಇತಿಹಾಸ ಶ್ರೇಷ್ಠತೆಯನ್ನು ಹೊಂದಿದೆ ಎಂದು ಕೋಟ ಆರಕ್ಷರ ಠಾಣಾಧಿಕಾರಿ ಮಧು.ಬಿ.ಇ ಹೇಳಿದ್ದಾರೆ.

ಕೋಟ ವರುಣತೀರ್ಥ ಕೆರೆ ಸಮೀಪ ಕೋಟದ ಪಂಚವರ್ಣ ಯುವಕ ಮಂಡಲ ಹಾಗೂ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತ್ರತ್ವದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೆರಿಸಿ ಮಾತನಾಡಿ ಇತರ ಭಾಷೆಯನ್ನು ಗೌರವಿಸುವುದರ ಜೊತೆಗೆ ಕನ್ನಡ ಭಾಷಾಭಿಮಾನ ಹೆಚ್ಚಿಸಿ ಆ ಮೂಲಕ ಕನ್ನಡದ ತೇರನ್ನು ಎಳೆಯುವ ಕೆಲಸ ಪ್ರತಿಯೊಬ್ಬರು ಮಾಡುವಂತ್ತಾಗಲಿ ಎಂದರಲ್ಲದೆ ರಾಜ್ಯ ಸರಕಾರ ಭಾಷಾಭಿಮಾನ ಹೆಚ್ಚಿಸಲು ನಾನಾ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ.ಈ ದಿಸೆಯಲ್ಲಿ ಸಂಘಸಂಸ್ಥೆಗಳು ಭಾಷೆ ಹಾಗೂ ಅದರ ಸಂಸ್ಕ್ರತಿಯನ್ನು ಉಳಿಸಿ ಬೆಳೆಸುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಬೆಳವಣಿಗೆಯಾಗಿದೆ. ಭಾಷೆಯ ಬಗ್ಗೆ ಕೀಳರಿಮೆ ಸಲ್ಲ ಬದಲಾಗಿ ಮನೆಯಲ್ಲಿ ಕನ್ನಡ ಭಾಷಾ ಸಂಸ್ಕಾರ ಕಲಿಸಿ ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮವನ್ನು ಕೋಟ ಗ್ರಾಮಪಂಚಾಯತ್ ಅಧ್ಯಕ್ಷ ಅಜಿತ್ ದೇವಾಡಿಗ ಉದ್ಘಾಟಿಸಿದರು.
ಅಧ್ಯಕ್ಷತೆಯನ್ನು ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಮೃತ್ ಜೋಗಿ ವಹಿಸಿದ್ದರು.
ಮುಖ್ಯ ಅಭ್ಯಾಗತರಾಗಿ ಕೋಟತಟ್ಟು ಗ್ರಾಮಪಂಚಾಯತ್ ಅಧ್ಯಕ್ಷೆ ಅಶ್ವಿನಿ ದಿನೇಶ್,ಪರಿಸರವಾದಿ ಕೋ.ಗಿ.ನಾ,ಕೋಟ ಗ್ರಾ.ಪಂ ಎಸ್ ಎಲ್ ಆರ್ ಎಂ ಘಟಕದ ಮಖ್ಯಸ್ಥೆ ಲೋಲಾಕ್ಷಿ ಎನ್ ಕೋತ್ವಾಲ್,ರಾಷ್ಟ್ರೀಯ ಮಾನವಹಕ್ಕು ರಾಜ್ಯ ಸಮಿತಿ ಪ್ರದಾನಕಾರ್ಯದರ್ಶಿ ದಿನೇಶ್ ಗಾಣಿಗ,ಪಂಚವರ್ಣದ ಗೌರವಾಧ್ಯಕ್ಷ ಸತೀಶ್ ಹೆಚ್ ಕುಂದರ್,ಗೌರವ ಸಲಹೆಗಾರ ಕೆ.ವೆಂಕಟೇಶ ಪ್ರಭು,ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಕಲಾವತಿ ಅಶೋಕ್,ಗೌರವಾಧ್ಯಕ್ಷೆ ಕುಸುಮಾ ದೇವಾಡಿಗ ಮತ್ತಿತರರು ಉಪಸ್ಥಿತರಿದ್ದರು. ಪಂಚವರ್ಣದ ಸಂಚಾಲಕ ಅಜಿತ್ ಆಚಾರ್ಯ ಸ್ವಾಗತಿಸಿದರು.ಗೌರವ ಸಲಹೆಗಾರ ಉಮೇಶ್ ಪ್ರಭು ನಿರೂಪಿಸಿದರು.ಕಾರ್ಯಾಧ್ಯಕ್ಷ ರವೀಂದ್ರ ಕೋಟ ವಂದಿಸಿದರು
ನಂತರ ರಾಷ್ಟ್ರೀಯ ಹೆದ್ದಾರಿಯ ಮೂಲಕಕನ್ನಡಾಭಿಮಾನದ ವಾಹನ ಪುರಮೆರವಣಿಗೆ ನಡೆಯಿತು.











