ಸುಜಯೀಂದ್ರ ಹಂದೆಯವರಿಗೆ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಶಿಯೇಷನ್ ರಾಜ್ಯೋತ್ಸವ ಗೌರವ

0
368

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕೋಟ: ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಶಿಯೇಷನ್ ದ.ಕ., ಉಡುಪಿ ಜಿಲ್ಲೆ, ಕುಂದಾಪುರ ಮತ್ತು ಬೈಂದೂರು ವಲಯವು, ಶಿಕ್ಷಣ, ಕಲೆ, ಸಾಹಿತ್ಯ ಕ್ಷೇತ್ರಗಳಲ್ಲಿ ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಮಾಡಿದ ಸಾಧನೆಯನ್ನು ಗುರುತಿಸಿ, ಉಪನ್ಯಾಸಕ, ಕಲಾವಿದ ಹೆಚ್.ಸುಜಯೀಂದ್ರ ಹಂದೆ ಕೋಟ ತನ್ನ ಸಂಸ್ಥೆಯ ರಾಜ್ಯೋತ್ಸವ ಪುರಸ್ಕಾರಕ್ಕೆ ನೀಡಿ ಗೌರವಿಸಿದೆ.
ಇತ್ತೀಚಿಗೆ ಹಂದೆಯವರ ಸ್ವಗೃಹಕ್ಕೆ ತೆರಳಿ ಗೌರವಿಸಿದೆ .ಪ್ರಸ್ತುತ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಹಂದೆಯವರು ಯಕ್ಷಗಾನದ ಆಟಕೂಟಗಳಲ್ಲಿ ಪ್ರಸಿದ್ಧ ಕಲಾವಿದರು. ಸಾಲಿಗ್ರಾಮ ಮಕ್ಕಳ ಮೇಳದ ನಿರ್ದೇಶಕರು. ಕುಂದಾಪುರ ಗಮಕಕಲಾ ಪರಿಷತ್ತಿನ ಅಧ್ಯಕ್ಷರು. ನಾಡಿನ ಅನೇಕ ಪತ್ರಿಕೆಗಳಲ್ಲಿ ಇವರ ಕಥೆ, ಕವನ, ಬರಹಗಳು, ವಿವಿಧ ಸಾಮಾಜಿಕ, ಸಾಂಸ್ಕøತಿಕ ಸಂಘಟನೆಗಳಲ್ಲಿ ಸಕ್ರೀಯರು. ಬೆಹರಿನ್, ಕುವೈಟ್, ಲಂಡನ್, ಮೆಂಚೆಸ್ಟರ್‍ಗಳಲ್ಲಿ ಯಕ್ಷಗಾನದ ಕಂಪು ಪಸರಿಸಿದವರು. ವಿವಿಧ ಶೈಕ್ಷಣಿಕ ಸಂಸ್ಥೆಗಳಲ್ಲಿ ಸಾಹಿತ್ಯ, ಕಲೆ, ಜೀವನ ಮೌಲ್ಯ, ಸಂವಹನ ಕೌಶಲ್ಯಗಳ ಕುರಿತು ಉಪನ್ಯಾಸ ನೀಡಿದವರು. ‘ಬಂಜೆ ಹೆತ್ತ ನೋವು’ ಕವನ ಸಂಕಲನಕ್ಕೆ ಮುಂಬೈನ ಪೇಜಾವರ ಸದಾಶಿವ ರಾವ್ ಪ್ರಶಸ್ತಿ ಅಲ್ಲದೇ ದೇಶ ಮತ್ತು ವಿದೇಶಗಳಲ್ಲಿ ಅನೇಕ ಸನ್ಮಾನ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ.

Click Here

ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಶಿಯೇಷನ್ ದ.ಕ., ಉಡುಪಿ ಜಿಲ್ಲೆ, ಕುಂದಾಪುರ ಮತ್ತು ಬೈಂದೂರು ವಲಯವು ನೀಡುವ ರಾಜ್ಯೋತ್ಸವ ಪುರಸ್ಕಾರಕ್ಕೆ ಸುಜಯೀಂದ್ರ ಹಂದೆ ಕೋಟ ಭಾಜನರಾಗಿದ್ದಾರೆ.

Click Here

LEAVE A REPLY

Please enter your comment!
Please enter your name here