ಕುಂದಾಪುರ ಮಿರರ್ ಸುದ್ದಿ…
ಕೋಟ: ರೋಟರಿ ಕ್ಲಬ್ ಹಂಗಾರಕಟ್ಟೆ ಸಾಸ್ತಾನ ಇದರ ಮಾಜಿ ಅಧ್ಯಕ್ಷ ಚೇಂಪಿ ವೆಂಕಟೇಶ್ ಭಟ್ ಪ್ರತಿವರ್ಷ ತನ್ನ ಹುಟ್ಟುಹಬ್ಬವನ್ನು ವಿವಿಧ ಅನಾಥಾಶ್ರಮಗಳ, ವಿಕಲಚೇತನರ ಆಶ್ರಮದಲ್ಲಿ ಬೆರೆತು ಹಣ್ಣುಹಂಪಲು, ಊಟೋಪಚಾರದ ವ್ಯವಸ್ಥೆ ಕಲ್ಪಿಸುತ್ತಾರೆ ಆದರೆ ಈ ಬಾರಿ ವಿಶೇಷವೆಂಬಂತೆ ಸಾಲಿಗ್ರಾಮ ಪಟ್ಟಣ ಪಂಚಾಯತ್‍ನ ಪೌರಕಾರ್ಮಿಕರ ಜೊತೆ ಮತ್ತು ಸಿಬ್ಬಂದಿಗಳ ಜೊತೆ ಸಿಹಿ ಹಂಚಿ , ಊಟೋಪಚಾರ ನೀಡಿ ಹುಟ್ಟುಹಬ್ಬ ಆಚರಿಸಿಕೊಂಡರು.

ಈ ಸಂಧರ್ಭದಲ್ಲಿ ಸಾಲಿಗ್ರಾಮ ಪಟ್ಟಣ ಪಂಚಾಯತ್‍ನ ಅಧ್ಯಕ್ಷೆ ಸುಲತಾ ಎಸ್ ಹೆಗ್ಡೆ , ಮುಖ್ಯಾಧಿಕಾರಿ ಶಿವ ನಾಯ್ಕ , ಎಲ್ಲಾ ಸಿಬ್ಬಂದಿಗಳು ಮತ್ತು ಪೌರಕಾರ್ಮಿಕರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಪಟ್ಟಣಪಂಚಾಯತ್ ವತಿಯಿಂದ ಶಾಲು ಹೊದಿಸಿ ಅಭಿನಂದಿಸಲಾಯಿತು.











