ಕುಂದಾಪುರ ಮಿರರ್ ಸುದ್ದಿ…
ಕೋಟ: ಸ್ವಚ್ಛ ಸಖಿ ಅಭಿಯಾನ ಗ್ರಾಮ ಪಂಚಾಯತ್ ಸಹಯೋಗದೊಂದಿಗೆ ಪ್ರಕೃತಿ ಸಂಜೀವಿನಿ ಒಕ್ಕೂಟದ ಸದಸ್ಯರಿಗೆ ಮತ್ತು ಸ್ಥಳೀಯರಿಗೆ ಪೌಷ್ಟಿಕ ತೋಟ ಹಾಗೂ ಇಂಗುಗುಂಡಿ ರಚನೆಯ ಬಗ್ಗೆ ಮಾಹಿತಿ ಕಾರ್ಯಕ್ರಮವು ಇತ್ತೀಚಿಗೆ ಮೂಡುಗಿಳಿಯಾರು ಲಲಿತಾ ಎಲ್.ಸಿ.ಆರ್.ಪಿ. ಇವರ ಮನೆಯಲ್ಲಿ ಜರಗಿತು.
ಪಂಚಾಯತ್‍ನ ವಾರ್ಡ್ ಸದಸ್ಯರಾದ ಶೇಖರ್ ಜಿ, ಯೋಗೇಂದ್ರ ಪೂಜಾರಿ,ಸಂಜೀವಿನಿ ಒಕ್ಕೂಟದ ಅಧ್ಯಕ್ಷ ಕಲಾವತಿ ಮತ್ತು ಕಾರ್ಯದರ್ಶಿ ಶಾಂತ ಹಾಜರಿದ್ದರು.
ಪೌಷ್ಟಿಕ ತೋಟ ಹಾಗೂ ಇಂಗುಗುಂಡಿ ಈ ಯೋಜನೆಯ ಮಾಹಿತಿಯನ್ನು ಗ್ರಾಮ ಪಂಚಾಯತ್‍ನ ಸಂಪನ್ಮೂಲ ವ್ಯಕ್ತಿಯಾದ ರಜಿನಿ ಭಾಸ್ಕರ್ ಒಕ್ಕೂಟದ ಸದಸ್ಯರಿಗೆ ಮತ್ತು ಸ್ಥಳೀಯರಿಗೆ ಮಾಹಿತಿ ನೀಡಿದರು.
ಎಲ್.ಸಿ.ಆರ್.ಪಿ. ಲಲಿತಾ ರವರು ಕಾರ್ಯಕ್ರಮ ನಿರೂಪಿಸಿ, ಧನ್ಯವಾದ ನೆರವೆರಿಸಿದರು.
ಎಲ್.ಸಿ.ಆರ್.ಪಿ. ಪ್ರತಿಮಾ ಹಾಗೂ ಎಲ್.ಸಿ.ಆರ್.ಪಿ. ಭಾರತಿ ಕೃಷಿ ಪೌಷ್ಟಿಕ ತೋಟದ ಅರ್ಜಿಯನ್ನು ಪಡೆದರು.











