ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ : ಪೋರ್ಟ್ ಗೇಟ್ ಎಜುಕೇಶನ್ ಟ್ರಸ್ಟ್ ಸಂಸ್ಥೆಯು ನಡೆಸುತ್ತಿರುವ ಓಕ್ ವುಡ್ ಇಂಡಿಯನ್ ಶಾಲೆಯ ಪೋಷಕರಿಗೆ ಶನಿವಾರ ಮಕ್ಕಳು ಮತ್ತು ಕೋವಿಡ್-19 ಯುವಜನತೆಯ ಮಾನಸಿಕ ಆರೋಗ್ಯದ ಮೇಲೆ ಸಾಂಕ್ರಾಮಿಕದ ಪರಿಣಾಮ ಎಂಬ ವಿಷಯದಲ್ಲಿ ಕಾರ್ಯಾಗಾರ ನಡೆಯಿತು.
ಕುಂದಾಪುರದ ಹರಿಪ್ರಸಾದ್ ಹೊಟೇಲ್ ನ ಅಕ್ಷತಾ ಹಾಲ್ ನಲ್ಲಿ ನಡೆದ ಕಾರ್ಯಗಾರವನ್ನು ಉಡುಪಿಯ ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆಯ ಖ್ಯಾತ ಮನೋವೈದ್ಯ ಡಾ.ವಿರುಪಾಕ್ಷ ದೇವರ ಮನೆ ನಡೆಸಿಕೊಟ್ಟರು. ಪೋಷಕರು ಅವರಿಗೆ ಇರುವ ಸಮಸ್ಯೆಯನ್ನು ಕೇಳಿಕೊಂಡು ಅದಕ್ಕೆ ಪರಿಹಾರವನ್ನು ಪಡೆದರು.
ಪೋರ್ಟ್ ಗೇಟ್ ಎಜುಕೇಶನ್ ಸಂಸ್ಥೆಯ ಅಧ್ಯಕ್ಷ ಅಭಿನಂದನ್ ಶೆಟ್ಟಿ, ಆಡಳಿತ ಮಂಡಳಿ ಮುಖ್ಯಸ್ಥರು, ಮುಖ್ಯ ಶಿಕ್ಷಕರು ಶಿಕ್ಷಕರು ಮತ್ತು ಪೋಷಕರು ಉಪಸ್ಥಿತರಿದ್ದರು ಓಕ್ ವುಡ್ ಶಾಲೆಯ ಕಾರ್ಯದರ್ಶಿ ನೀತ ಶೆಟ್ಟಿ ಸ್ವಾಗತಿಸಿದರು. ಶಿಕ್ಷಕಿ ಸಿಲ್ವಿಯಾ ಫೆನಾ೯ಂಡಿಸ್ ನಿರೂಪಿಸಿದರು. ಶಿಕ್ಷಕಿ ಕಾವ್ಯ ಪರಿಚಯಿಸಿದರು. ಸಹನ ಶೆಟ್ಟಿ ವಂದಿಸಿದರು.











