ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಕುಂದಾಪುರ ಮೊದಲ ಮಕ್ಕಳ ತಜ್ಞ, ಖ್ಯಾತ ವೈದ್ಯ ಡಾ. ವೆಂಕಟರಾಜ್ (67) ಅವರು ಇಂದು ಅಲ್ಪಕಾಲದ ಅಸೌಖ್ಯದಿಂದ ನಿಧನರಾಗಿದ್ದಾರೆ.
ಹೃದಯ ಸಂಬಂಧಿ ಖಾಯಿಲೆಯಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು, ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಕುಂದಾಪುರ ನಗರದಲ್ಲಿ ಸ್ವಾತಿ ಕ್ಲಿನಿಕ್ ಮೂಲಕ ಮೂರು ದಶಕಗಳಿಗೂ ಹೆಚ್ಚು ಕಾಲ ಮಕ್ಕಳ ತಜ್ಞರಾಗಿ ಸೇವೆ ಸಲ್ಲಿಸಿದ್ದ ಡಾ. ವೆಂಕಟರಾಜ್ ಅವರು, ಜನನುರಾಗಿ ವೈದ್ಯರೂ ಆಗಿದ್ದರು.
ಮೂಲತಃ ಉಪ್ಪುಂದದವರಾದ ಡಾ.ವೆಂಕಟರಾಜ್ ಅವರು, ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಪಿಯುಸಿ ಹಾಗೂ ಮಣಿಪಾಲದ ಕೆಎಂಸಿಯಲ್ಲಿ ಎಬಿಬಿಎಸ್ ಹಾಗೂ ಡಿಸಿಎಚ್ ಮುಗಿಸಿ ತಮ್ಮ ವೃತ್ತಿ ಜೀವನ ಆರಂಭಿಸಿದ್ದರು. ಮೃತರು ತಂದೆ ತಿಮ್ಮಪ್ಪಯ್ಯ ಕಾರಂತ್, ಮಡದಿ ರಾಜೇಶ್ವರಿ, ಪುತ್ರ ಯುರಾಲಾಜಿಸ್ಟ್ ಡಾ. ಕಿಶನ್ ರಾಜ್, ಪುತ್ರಿ ಆಶಾಜ್ಯೋತಿ, ಸೊಸೆ ಗೌನಕಾಲಜಿಸ್ಟ್ ಡಾ.ರಜನಿ ಹಾಗೂ ಕುಟುಂಬಿಕರನ್ನು ಅಗಲಿದ್ದಾರೆ.











