ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ : ಇತ್ತೀಚಿನ ದಿನಗಳಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಗಳು ಹೆಚ್ಚುತ್ತಿದ್ದು ಪೋಷಕರು ಹಾಗೂ ಮಕ್ಕಳು ಈ ಬಗ್ಗೆ ಜಾಗೃತಿಯಾಗಬೇಕು ಎಂದು ಶಿಕ್ಷಕ ದಿನೇಶ್ ಪ್ರಭು ಹೇಳಿದರು.

ಅವರು ಸರ್ಕಾರೀ ಪ್ರೌಢ ಶಾಲೆ ಕಾಳಾವರ ಇಲ್ಲಿ ಶಾಲಾ ಇಕೋ ಕ್ಲಬ್ ಹಾಗೂ ಮತದಾರರ ಸಾಕ್ಷರತಾ ಕ್ಲಬ್ ಪ್ರಾಯೋಜಕತ್ವದಲ್ಲಿ ಬುಧವಾರ ನಡೆದ ವಿದ್ಯಾರ್ಥಿಗಳಿಗೆ ಲೈಂಗಿಕ ದೌರ್ಜನ್ಯದ ವಿರುದ್ಧ ರಕ್ಷಣೆ ಕಾನೂನು ಅರಿವು ಮತ್ತು ಮತದಾರರ ಕರಡು ಪಟ್ಟಿ ಗೆ ಹೆಸರು ಸೇರ್ಪಡೆ ಕುರಿತು ಮತದಾರರ ಜಾಗೃತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.
ಮಕ್ಕಳ ಮೇಲಿನ ದೌರ್ಜನ್ಯಗಳಿಗೆ ಸಂಬಂಧಿಸಿ ಪೊಕ್ಸೊ ಕಾಯಿದೆಯಲ್ಲಿ ಮಕ್ಕಳಿಗೆ ಇರುವ ರಕ್ಷಣೆ ಮತ್ತು ತಪ್ಪು ಮಾಡಿದಲ್ಲಿ ನೀಡಬಹುದಾದ ಶಿಕ್ಷೆ ಬಗ್ಗೆ ಉದಾಹರಣೆಗಳೊಂದಿಗೆ ತಿಳಿಸಿದರು.
ಇನ್ನೊಬ್ಬ ಸಂಪನ್ಮೂಲ ಶಿಕ್ಷಕಿ ಶ್ರೀಲತಾ ಮತದಾನದ ಪ್ರಾಮುಖ್ಯತೆ ಹಾಗೂ ಮತದಾರರ ಪಟ್ಟಿಯಲ್ಲಿ ಹೊಸದಾಗಿ ಹೆಸರು ಸೇರ್ಪಡೆಗೊಳಿಸುವ ಕುರಿತು ಮಾಹಿತಿ ನೀಡಿದರು. ಮುಖ್ಯೋಪಾಧ್ಯಾಯಿನಿ ಗಾಯತ್ರಿ ಅಡಿಗ ಅಧ್ಯಕ್ಷತೆ ವಹಿಸಿದ್ದರು. ಹೇಮಾ ಕಾರ್ಯಕ್ರಮ ನಿರ್ವಹಿಸಿದರು, ಪ್ರತಿಭಾ ವಂದಿಸಿದರು.











