ಮೂಡುಗಿಳಿಯಾರಿನಲ್ಲಿ ಕೋಟ ಸಹಕಾರಿ ಸಂಘದ ಸ್ವಂತ ಕಟ್ಟಡ ಶಿಲಾನ್ಯಾಸ

0
365

Click Here

Click Here

ಜನಸಾಮಾನ್ಯ ಸಹಕಾರಿ ಸಂಘವಾಗಿ ಯಶಸ್ಸಿನ ದಾರಿಯಲ್ಲಿ ಮುನ್ನುಡಿ ಬರೆಯುತ್ತಿದೆ-ಎಸ್ ಸೋಮಯಾಜಿ

ಕುಂದಾಪುರ ಮಿರರ್ ಸುದ್ದಿ…
ಕೋಟ : ಕೋಟ ಸಹಕಾರಿ ವ್ಯವಸಾಯಕ ಸಂಘ ನಿ. ಕೋಟ ಇದರ ಮೂಡುಗಿಳಿಯಾರು ಶಾಖೆಯ ನೂತನ ಕಟ್ಟಡ ಹಾಗೂ ಗೋದಾಮು, ವಸತಿ ಸಂಕೀರ್ಣಕ್ಕೆ ಶಿಲಾನ್ಯಾಸ ಕಾರ್ಯಕ್ರಮ ಗುರುವಾರ ಮೂಡುಗಿಳಿಯಾರು ಹಿ.ಪ್ರಾ.ಶಾಲೆಯಲ್ಲಿ ಜರಗಿತು.

ಕೋಟ ವ್ಯವಸಾಯಯಕ ಸಹಕಾರಿ ಸಂಘದ ನಿವೃತ್ತ ಪ್ರಧಾನ ವ್ಯವಸ್ಥಾಪಕ ಜಿ.ಶ್ರೀಧರ ಸೋಮಯಾಜಿ ಶಿಲಾನ್ಯಾಸ ನೆರವೆರಿಸಿ ಮಾತನಾಡಿ, ಈ ಸಂಸ್ಥೆಯು ನಮ್ಮ ಹಿರಿಯರ ಪರಿಶ್ರಮದೊಂದಿಗೆ ಪ್ರಸ್ತುತ ಆಡಳಿತ ಮಂಡಳಿಯ ಕಾರ್ಯಸಾಧನೆಯ ಫಲವಾಗಿ ಯಶಸ್ಸಿನ ದಾರಿಯಲ್ಲಿ ಮುನ್ನಡೆಯುತ್ತಿದೆ ಅಲ್ಲದೆ ಅವಿಭಜಿತ ದ.ಕ. ಜಿಲ್ಲೆಯಲ್ಲೇ ಹಲವಾರು ಪ್ರಶಸ್ತಿಗಳನ್ನು ಮುಡಿಗೆರಿಸಿಕೊಂಡಿದೆ, ಹಲವು ಯಶಸ್ವಿ ಕಾರ್ಯಕ್ರಮಗಳ ಮೂಲಕ ಜನಸಾಮಾನ್ಯರ ಸಂಘವಾಗಿ ಹೊರಹೊಮ್ಮಿದೆ ಎಂದರು.

Click Here

ಕುಂದಾಪುರದ ಸಹಕಾರ ಸಂಸ್ಥೆಗಳ ಸಹಾಯಕ ನಿಬಂಧಕಿ ಲಾವಣ್ಯ ಕೆ.ಆರ್. ಮಾತನಾಡಿ, ಈ ಸಂಸ್ಥೆಯ ಅಧ್ಯಕ್ಷರಾದ ತಿಮ್ಮ ಪೂಜಾರಿಯವರು ಸಿಬಂದಿಗಳ ಜತೆಯಲ್ಲಿ ದುಡಿಯುತ್ತಿರುವುದು ಅಧ್ಯಕ್ಷರಾಗಿ ಬ್ಯಾಂಕ್‍ನ ಜನಸ್ನೇಹಿಯಾಗಿ ಕೊಂಡ್ಯೋಯ್ದಿದ್ದಾರೆ ಇದು ವಿಶೇಷವಾಗಿದೆ ಎಂದರು.

ಸಂಘದ ಅಧ್ಯಕ್ಷ ತಿಮ್ಮ ಪೂಜಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಮಂದಾರ್ತಿ ಸಹಕಾರಿ ಸಂಘದ ಅಧ್ಯಕ್ಷ ಗಂಗಾಧರ ಶೆಟ್ಟಿ, ಉಡುಪಿ ಟಿ.ಎ.ಪಿ.ಸಿ.ಎಂ.ಎಸ್. ಅಧ್ಯಕ್ಷ ಅಶೋಕ್ ಶೆಟ್ಟಿ, ಕೋಟ ಗ್ರಾ.ಪಂ. ಅಧ್ಯಕ್ಷ ಅಜಿತ್ ದೇವಾಡಿಗ, ಹೊನ್ನಾರಿ ಬೊಬ್ಬರ್ಯ ದೇವಸ್ಥಾನದ ಆಡಳಿತ ಮೊಕ್ತೇಸರ ಮಹಾಬಲ ಹೇರ್ಳೆ, ತಾ.ಪಂ. ಮಾಜಿ ಸದಸ್ಯ ಭರತ್ ಕುಮಾರ್ ಶೆಟ್ಟಿ, ಸ್ಥಳೀಯರಾದ ಸುಮಿತ್ರ ಶಂಕರನಾರಾಯಣ ಹೇರ್ಳೆ ಗಿಳಿಯಾರು, ಉಪನ್ಯಾಸಕ ಸಂಜೀವ ಸಿ.ಗುಂಡ್ಮಿ, ಸಂಘದ ಮಾಜಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೋಭಾ ಶೆಟ್ಟಿ, ಮುಖ್ಯ ಶಿಕ್ಷಕ ಶಿವರಾಮ್ ಭಟ್ ಹಾಗೂ ಸಂಸ್ಥೆಯ ಉಪಾಧ್ಯಕ್ಷ ರಾಜೀವ ದೇವಾಡಿಗ, ಸಿ.ಇ.ಓ. ಶರತ್ ಕುಮಾರ್ ಶೆಟ್ಟಿ, ನಿರ್ದೇಶಕರಾದ ಮಹೇಶ್ ಶೆಟ್ಟಿ, ರವೀಂದ್ರ ಕಾಮತ್, ನಾಗರಾಜ ಹಂದೆ, ರಂಜಿತ್ ಕುಮಾರ್, ಗೀತಾ ಶಂಭು ಪೂಜಾರಿ, ಪ್ರೇಮ ಎಸ್., ರಶ್ಮಿತಾ, ಶ್ರೀಕಾಂತ್ ಶೆಣೈ, ಶಾಖಾ ವ್ಯವಸ್ಥಾಪಕ ಶೇಖರ ಮರಕಾಲ ಮುಂತಾದವರು ಉಪಸ್ಥಿತರಿದ್ದರು.
ನಿರ್ದೇಶಕ ಹಾಗೂ ಶಾಖಾ ಸಭಾಪತಿ ಟಿ.ಮಂಜುನಾಥ ಸ್ವಾಗತಿಸಿ, ಸಿಬಂದಿ ವಾಸುದೇವ ಕಾರ್ಯಕ್ರಮ ನಿರೂಪಿಸಿದರು.

Click Here

LEAVE A REPLY

Please enter your comment!
Please enter your name here