ಕುಂದಾಪುರ ಮಿರರ್ ಸುದ್ದಿ…
ಕೋಟ: ಶ್ರೀ ಶಾಂಭವೀ ವಿದ್ಯಾದಾಯಿನೀ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಗಿಳಿಯಾರು ಕೋಟ ಇಲ್ಲಿ ಸ್ಥಳೀಯ ಅಂಗನವಾಡಿ ಪುಟಾಣಿಗಳ ಸಮಾಗಮದೊಂದಿಗೆ ಮಕ್ಕಳ ದಿನಾಚರಣೆಯು ವಿಜೃಂಭಣೆಯಿಂದ ಜರಗಿತು.
ಕಾರ್ಯಕ್ರಮವನ್ನು ಕೋಟ ಅಮೃತೇಶ್ವರಿ ದೇವಳದ ಟ್ರಸ್ಟಿ ಎಂ. ಸುಬ್ರಾಯ ಆಚಾರ್ ಉದ್ಘಾಟಿಸಿ ಶಾಲಾಯ ಕ್ರೀಯಾಶೀಲ ಚಟುವಟಿಕೆಯನ್ನು ಪ್ರಶಂಸೆ ವ್ಯಕ್ತಪಡಿಸಿ ದೇಣಿಗೆಯನ್ನು ನೀಡಿ ಶುಭ ಹಾರೈಸಿದರು.
ಸಾಮಾಜಿಕ ಕಾರ್ಯಕರ್ತ ಕೋಟ ಶ್ರೀಕಾಂತ್ ಶೆಣೈ ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪ್ರಾಯೋಜಕರಾಗಿ ಬಹುಮಾನದ ವಿತರಿಸಿದರು.
ಅಂಗನವಾಡಿಯ ಎಲ್ಲಾ ಪುಟಾಣಿಗಳಿಗೆ ಶಾಲಾ ಹಳೇ ವಿದ್ಯಾರ್ಥಿ ರೂಪೇಶ್ ಜೋಗಿ ಉಡುಗೊರೆ ನೀಡಿ ಸಹಕರಿಸಿದರು, ವೇದಿಕೆಯಲ್ಲಿ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ರಾಜಾರಾಮ ಐತಾಳ್ ಹಾಗೂ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ರವೀಂದ್ರ ಜೋಗಿ ಉಪಸ್ಥಿತರಿದ್ದರು.
ಶಾಲಾ ಮುಖ್ಯೋಪಾಧ್ಯಾಯರು ದಿವಾಕರ ರಾವ್ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ವಿಜೇತರ ಪಟ್ಟಿಯನ್ನುಹಿರಿಯ ಶಿಕ್ಷಕಿ ಯಶೋದ ವಾಚಿಸಿದರು.ದೈಹಿಕ ಶಿಕ್ಷಣ ಶಿಕ್ಷಕ ರಮೇಶ ಧನ್ಯವಾದ ಸಮರ್ಪಿಸಿದರು. ಕಾರ್ಯಕ್ರಮವನ್ನು ಗೌರವಶಿಕ್ಷಕಿಯರಾದ ವಿನೋದ ಮತ್ತು ಸುನೀತಾ ನಿರೂಪಿಸಿದರು. ನಂತರ ಅಂಗನವಾಡಿ ಪುಟಾಣಿಗಳ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.











