ಶಿಕ್ಷ ಪ್ರಭ ಅಕಾಡೆಮಿ ಕುಂದಾಪುರ :ಸಿಎಸ್ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಅಮೋಘ ಸಾಧನೆ

0
408

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಸಿಎ/ ಸಿಎಸ್ ಪ್ರೊಫೆಷನಲ್ ಕೋರ್ಸುಗಳ ಹೆಸರಾಂತ ತರಬೇತಿ ಸಂಸ್ಥೆ ಕುಂದೇಶ್ವರ ರಸ್ತೆಯ ಸಿರಿ ಬಿಲ್ಡಿಂಗನಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷ ಪ್ರಭ ಅಕಾಡೆಮಿ ಆಫ್ ಕಾಮರ್ಸ್ ಎಜುಕೇಶನ್(SPACE)ಸಂಸ್ಥೆಯ ವಿದ್ಯಾರ್ಥಿಗಳು ಇನ್ಸ್ಟಿಟ್ಯೂಟ್ ಆಫ್ ಕಂಪೆನಿ ಸೆಕ್ರೆಟರಿ ಆಫ್ ಇಂಡಿಯಾ ನಡೆಸಿದ ನವೆಂಬರ್ 2022ರ CSEET (ಸಿಎಸ್ ಫೌಂಡೇಶನ್ ) ಪರೀಕ್ಷೆಯಲ್ಲಿ 22 ವಿದ್ಯಾರ್ಥಿಗಳು ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗುವ ಮೂಲಕ ಶ್ರೇಷ್ಠ ಸಾಧನೆ ಮೆರೆದಿದ್ದಾರೆ.

Click Here

ಸಂಸ್ಥೆಯ ವಿದ್ಯಾರ್ಥಿಗಳಾದ ಶಿಬಾನಿ (147), ಪೂಜಾ ಶೆಟ್ಟಿ( 144), ಧೀರಜ್ ಆರ್ ಕಾಮತ್ (131), ಉಜ್ವಲ್ ಕುಮಾರ್ ಶೆಟ್ಟಿ (129), ರೋಹನ್ (124), ಸುಮಂಗಲ (124), ದರ್ಶನ್( 122), ಶ್ರೀನಿಧಿ ಎನ್( 121), ಸುಮೇಧ್ (121), ನಿಖಿತ ಆರ್ ಪೂಜಾರಿ ( 119), ಶ್ರೀಕಾಂತ್ ಉಡುಪ (117), ಶ್ರೇಯ( 115), ಯು ಆರ್ ಫಣಿಂದ್ರ ಮಯ್ಯ (113), ಬಿ ಹೆಚ್ ಸನದ್ (110) , ಪೃಥ್ವೀಶ್ ಹೆಬ್ಬಾರ್ (106), ಸೃಜನ್ ಆಚಾರ್ಯ(105), ಸುಜಯ್ ಶೆಟ್ಟಿ(102), ಅದಿತಿ ಆಚಾರ್(100), ಆಯಿಷ ಅಸೀಲ್(100), ದೀಕ್ಷಿತ(100), ಪೂಜಿತಾ(100), ಶರತ್(100) ಅಂಕಗಳೊಂದಿಗೆ ಸಿಎಸ್ ಕೋರ್ಸುಗಳ ಪ್ರಥಮ ಹಂತದ ಪರೀಕ್ಷೆಯನ್ನು ತೇರ್ಗಡೆ ಹೊಂದಿ ಸಿಎಸ್ ಎಕ್ಸಿಕ್ಯೂಟಿವ್ ಹಂತಕ್ಕೆ ಆಯ್ಕೆಯಾಗಿದ್ದಾರೆ.ಸಂಸ್ಥೆಯಲ್ಲಿ ಅನುಭವಿ ಕಂಪೆನಿ ಸೆಕ್ರೆಟರಿಯವರನ್ನು ಒಳಗೊಂಡಂತೆ ಗುಣಮಟ್ಟದ ತರಬೇತುದಾರರಿಂದ ತರಬೇತಿಯನ್ನು ನೀಡಿ ಅತ್ಯಧಿಕ ಪೂರಕ ಪರೀಕ್ಷೆಗಳನ್ನು ನಡೆಸಿ ಇನ್ಸ್ಟಿಟ್ಯೂಟ್ ಆಫ್ ಕಂಪನಿ ಸೆಕ್ರೆಟರಿ ಆಫ್ ಇಂಡಿಯಾ ನಡೆಸುವ ಪರೀಕ್ಷೆಗೆ ವಿದ್ಯಾರ್ಥಿಗಳನ್ನು ಸಿದ್ಧಗೊಳಿಸಲಾಗಿತ್ತು.ಅನುಭವಿ ಶಿಕ್ಷಕರ ಮಾರ್ಗದರ್ಶನ ವಿದ್ಯಾರ್ಥಿಗಳ ನಿರಂತರ ಪ್ರಯತ್ನದಿಂದ ಇಂತಹ ಫಲಿತಾಂಶ ಸಾಧ್ಯವಾಯಿತು. ಸಿಎ/ಸಿಎಸ್ ಫಲಿತಾಂಶದಲ್ಲಿ ಶಿಕ್ಷ ಪ್ರಭಾ ಅಕಾಡೆಮಿಯ ವಿದ್ಯಾರ್ಥಿಗಳ ನಿರಂತರ ಸಾಧನೆ ಮುಂದುವರಿಯಲು ಪೋಷಕರ ಸಹಕಾರದಿಂದ ಬೋಧಕ ಸಿಬ್ಬಂದಿಗಳ ಅವಿರತ ಶ್ರಮಕ್ಕೆ ವಿದ್ಯಾರ್ಥಿಗಳು ನೀಡಿದ ಸಹಕಾರ ಕಾರಣ ಎಂದು ಸಂಸ್ಥೆಯ ಮುಖ್ಯಸ್ಥರು ಈ ಸಂದರ್ಭದಲ್ಲಿ ತಿಳಿಸಿದ್ದಾರೆ. ಈ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ಡಿಸೆಂಬರ್ ಒಂದರಿಂದ ಸಿಎಸ್ ಎಕ್ಸಿಕ್ಯೂಟಿವ್ ಪರೀಕ್ಷೆಗೆ ತರಬೇತಿಯನ್ನು ಪ್ರಾರಂಭಿಸಿ ಮುಂದಿನ ಹಂತದಲ್ಲೂ ವಿದ್ಯಾರ್ಥಿಗಳಿಗೆ ಸಂಸ್ಥೆ ಬೆನ್ನೆಲುಬಾಗಿ ನಿಲ್ಲಲಿದೆ ಎಂದರು.

“ಸ್ಪೇಸ್ ಸಂಸ್ಥೆಯ ತರಬೇತಿ ಮತ್ತು ಶಿಕ್ಷಕರು ನನ್ನನ್ನು ಹುರಿದುಂಬಿಸಿ 147 ಅಂಕಪಡೆಯಲು ಸಹಕಾರಿಯಾದರು. ಅತ್ಯುತ್ತಮ ತರಬೇತಿ, ನಿರಂತರ ಸಹಕಾರ ನಮ್ಮ ಆತ್ಮವಿಶ್ವಾಸ ಹೆಚ್ಚಿಸಿತು. ಸ್ಪೇಸ್ ಸಂಸ್ಥೆ ಆರಂಭದಿಂದ ಇಲ್ಲಿಯ ತನಕ ನಮ್ಮೊಂದಿಗೆ ಜೊತೆಯಾಗಿ ನಿಂತಿರುವುದಕ್ಕೆ ಆಭಾರಿಯಾಗಿದ್ದೇನೆ.”
ಶಿಬಾನಿ (147ಅಂಕ) ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿನಿ

Click Here

LEAVE A REPLY

Please enter your comment!
Please enter your name here