ಕುಂದಾಪುರ ಮಿರರ್ ಸುದ್ದಿ…
Video :
ಕುಂದಾಪುರ: ನಿಮ್ಮ ಮಕ್ಕಳಿಗಾಗಿ ನೀವೆಷ್ಟೇ ಆಸ್ತಿ ಮಾಡಿ, ಹಣ ಕೂಡಿಡಿ ಆದರೆ ಅದು ಶಾಶ್ವತವಲ್ಲ, ನೀವು ಮಕ್ಜಳಿಗೆ ಕಲಿಸುವ ವಿದ್ಯೆಯೇ ಶಾಶ್ವತವಾದ ಆಸ್ತಿ ಎಂದು ಜನತಾ ಫಿಶ್ ಮಿಲ್ ಹಾಗೂ ಆಯಿಲ್ ಪ್ರಾಡಕ್ಟ್ಸ್ ಪ್ರೈ. ಲಿ. ಕೋಟ ಪಡುಕೆರೆ ಇದರ ಆಡಳಿತ ಪಾಲುದಾರ, ಉದ್ಯಮಿ ಆನಂದ ಸಿ ಕುಂದರ್ ಹೇಳಿದರು.

ಶುಕ್ರವಾರ ರಾತ್ರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಂಡ್ಲೂರು (ಕನ್ನಡ) ಶಾಲಾ ವಾರ್ಷಿಕೋತ್ಸವ ಹಾಗೂ ಪ್ರಾಕ್ತನ ವಿದ್ಯಾರ್ಥಿಗಳ ಸಮ್ಮಿಲನ “ಗರಿಮೆ”ಯನ್ನು ಉದ್ಘಾಟಿಸಿ ಮಾತನಾಡಿದರು.
138ವರ್ಷಗಳ ಇತಿಹಾಸವಿರುವ ಈ ಶಾಲೆ ಸ್ವಾತಂತ್ರ್ಯ ಪೂರ್ವದಲ್ಲಿಯೇ ಆರಂಭವಾಗಿದೆಯೆಂದರೆ ಅಂದು ನಮ್ಮ ಹಿರಿಯರಿಗೆ ಶಿಕ್ಷಣದ ತುಡಿತ ಮತ್ತು ಉ ಹಸಿವು ಎಷ್ಟಿದ್ದಿರಬೇಕು ಎನ್ನುವುದನ್ನು ನಾವು ಅರ್ಥ ಮಾಡಿಕೊಂಡು ನಮ್ಮ ಮುಂದಿನ ಪೀಳಿಗೆಗೆ ಹಂಚುವ ಕೆಲಸ ಮಾಡಬೇಕು ಎಂದು ಅವರು ಹೇಳಿದರು.
ಇದೆ ಸಂದರ್ಭ ಶಾಲೆಗೆ ಇಬ್ಬರು ಶಿಕ್ಷಕರ ವೇತನ ನೀಡುತ್ತಿರುವ ಶ್ರೀ ಕನ್ನಿಕಾ ಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ, ಉದ್ಯಮಿ ಚಂದ್ರಶೇಖರ್ ಜೋಗಿ ಹಾಗೂ ಕನ್ನಿಕಾ ಎಜ್ಯುಕೇಶನ್ ಟ್ರಸ್ಟ್ನ ಗೌರವಾಧ್ಯಕ್ಷ, ಬೆಂಗಳೂರಿನ ಉದ್ಯಮಿ ಶ್ರೀನಿವಾಸ ಜೋಗಿಯವರನ್ನು ಸನ್ಮಾನಿಸಲಾಯಿತು. ವಿವಿಧ ಆಟೋಟ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುತೇಕ ಮಾನ ವಿತರಿಸಲಾಯಿತು.
ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಕಿರಣ್ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಮಾಜೀ ಜಿ.ಪಂ ಸದಸ್ಯ ಹೆಚ್. ದೇವಾನಂದ ಶೆಟ್ಟಿ, ಕಂಡ್ಲೂರು ಜಮಾತೆ ಇಸ್ಲಾಂ ಮಾಜೀ ಅಧ್ಯಕ್ಷ ಮುನಾಫ್ ಸಾಹೇಬ್, ಗ್ರಾ. ಪಂ ಸದಸ್ಯರಾದ ಲುಕಾಯತ್ ಬೆಟ್ಟೆ, ಲಲಿತಾ, ಬಿ.ಇ.ಓ ಕಾಂತರಾಜು, ಶಿಕ್ಷಣ ಸಂಯೋಜಕ ಶಂಕರ್, ಪ್ರಾ.ಶಾ.ಶಿ.ಸಂ.ದ ಅಧ್ಯಕ್ಷ ಗಣೇಶ್ ಶೆಟ್ಟಿ, ಮುಖ್ಯೋಪಾದ್ಯಾಯಿನಿ ರತ್ನಾ ಶೆಟ್ಟಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಉದಯ ಶೇರೆಗಾರ್, ಶಾಲಾಭ್ಯುದಯ ಸಮಿತಿ ಅಧ್ಯಕ್ಷೆ ಗೌರಿ ಆರ್. ಶ್ರೀಯಾನ್ ವಿದ್ಯಾರ್ಥಿ ನಾಯಕ ಅರುಷ್ ಅಚಾರ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾವ್ರಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ, ಶಾಲಾ ವಾರ್ಷಿಕೋತ್ಸವ ಸಮಿತಿ ಅಧ್ಯಕ್ಷ ವಿಜಯ ಪುತ್ರನ್ ಸ್ವಾಗತಿಸಿದರು. ಸಹಶಿಕ್ಷಕಿ ಸುಜಾತಾ ಭಟ ವಂದಿಸಿದರು. ಸಹಶಿಕ್ಷಕ ನಾಗರಾಜ್ ಪುತ್ರನ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ನಡೆದವು.











