ವಡ್ಡರ್ಸೆ ಡಿ.30 ವಡ್ಡರಸನ ನೆಲದಲ್ಲಿ ರಜತ ತೇರಿನ ವೈಭವ – ಸರಕಾರಿ ಪ್ರೌಢಶಾಲೆ ವಡ್ಡರ್ಸೆ ಅಕ್ಷರ ರಥದ ಅನಾವರಣ, ಸಾಂಸ್ಕ್ರತಿಕ ಕಾರ್ಯಕ್ರಮಗಳ ತಿಲ್ಲಾನ

0
331

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕೋಟ: ವಡ್ಡರಸ ಮಹಾರಾಜ ವಿರಾಜಮಾನವಾಗಿ ಆಳ್ವಿಕೆ ನಡೆಸಿದ ಗ್ರಾಮೀಣ ಭಾಗವಾದ ವಡ್ಡರ್ಸೆ ಪ್ರದೇಶದಲ್ಲಿ ಶೈಕ್ಷಣಿಕ ಕ್ರಾಂತಿ ಪಸರಿಸಿ ಅದೆಷ್ಟೊ ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆ ನೀಡಿದ ಸರಕಾರಿ ಪ್ರೌಢಶಾಲೆಗೆ ಇದೀಗ ಇಪ್ಪತೈದರ ಸಂಭ್ರಮ. ಈ ಹಿನ್ನಲ್ಲೆಯಲ್ಲಿ ರಜತ ಪರ್ವ ಕಾರ್ಯಕ್ರಮದ ಮೂಲಕ ಡಿ.30ರಂದು ಆಚರಿಸಿಕೊಳ್ಳುತ್ತಿದೆ.

Click Here

ರಜತ ಮಹೋತ್ಸವ ಸಮಿತಿಯ ನೇತ್ರತ್ವದಲ್ಲಿ ಹಳೆ ವಿದ್ಯಾರ್ಥಿ ಸಂಘಟನೆ, ಶಾಲಾಭಿವೃದ್ಧಿ ಮತ್ತು ಮೇಲುಸ್ತವಾರಿ ಸಮಿತಿ, ಶಾಲಾ ಶಿಕ್ಷಕರು ಪೋಷಕರು ವಿದ್ಯಾಭಿಮಾನಿಗಳು, ದಾನಿಗಳ ಸಹಕಾರ ಹಾಗೂ ನೆರವಿನೊಂದಿಗೆ ಅದ್ದೂರಿಯ ಕಾರ್ಯಕ್ರಮ ಜರುಗಲಿದೆ
ಪೂರ್ವಾಹ್ನ ಘಂಟೆ 8:30ಗೆ, ವಿಶೇಷಪುರ ಮೆರವಣಿಗೆಯೊಂದಿಗೆ ರಜತಮಹೋತ್ಸವ ಕಾರ್ಯಕ್ರಮವು ಅನಾವರಣಗೊಳ್ಳಲಿದೆ. ನಂತರ ಘಂಟೆ 9:00ಕ್ಕೆ ಧ್ವಜಾರೋಹಣ, 9:30ಕ್ಕೆ ಬಹುಮಾನವಿತರಣೆ, ನಡೆಯಲಿದೆ. ಸಂಜೆ ಘಂಟೆ5:00ರಿಂದ ಸ್ಥಳೀಯ ಅಂಗನವಾಡಿ ಮಕ್ಕಳಿಂದ ನೃತ್ಯಸಿಂಚನ ಕಾರ್ಯಕ್ರಮ ತದನಂತರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವಡ್ಡರ್ಸೆ ಹಾಗೂ ವಿವೇಕಾನಂದ ಖಾಸಗಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಮಧುವನ ವಿದ್ಯಾರ್ಥಿಗಳಿಂದ ನಾಟ್ಯಸಂಭ್ರಮ, ಸಂಜೆ6:30ಯಿಂದ ಸಭಾಕಾರ್ಯಕ್ರಮ ಪ್ರತಿಭಾ ಪುರಸ್ಕಾರ, ದತ್ತಿನಿಧಿ ವಿತರಣೆ, ಗುರುವಂದನೆ, ಕಾರ್ಯಕ್ರಮವು ಜರುಗಲಿದೆ. ಈ ಕಾರ್ಯಕ್ರಮದಲ್ಲಿ, ಸಚಿವರು, ಶಾಸಕರು ಜನಪ್ರತಿನಿಧಿಗಳು, ದಾನಿಗಳು, ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಶಾಲೆಗೆ ಕೊಡುಗೆಯಾಗಿ ಶ್ರೀ ಶಂಕರನಾರಾಯಣ ಕನ್ಸ್ಟ್ರಕ್ಷನ್ (ಪ್ರೈ) ಲಿಮಿಟೆಡ್ ಬೆಂಗಳೂರು ಶಾಲಾ ವಾಹನ ಅಕ್ಷರ ಅಂಬಾರಿ ಉದ್ಘಾಟನೆ ಹಾಗೂ ಶಾಲೆಗೆ ನೀಡಲಾದ ಸಿ.ಸಿ. ಕ್ಯಾಮರದ ಉದ್ಘಾಟನೆಯು ನಡೆಯಲಿದೆ. ರಾತ್ರಿ8:30ಯಿಂದ ಪೌಢಶಾಲಾ ಮಕ್ಕಳಿಂದ ಸಾಂಸ್ಕ್ರತಿ ಕಾರ್ಯಕ್ರಮ ಡಾನ್ಸ್ ಮೆರಗು, ನಾಟಕ, ಯಕ್ಷಗಾನ ಹಾಗೂ ಹಳೆವಿದ್ಯಾರ್ಥಿಗಳಿಂದ ಕುಂದಾಪ್ರಕನ್ನಡದಲ್ಲಿ ನಗುವಿನ ಚಿತ್ತಾರ ನಾಟಕವು ಪ್ರಸ್ತುತಿಯಾಗಲಿದೆ. ರಜತಮಹೋತ್ಸವ ಸಮಿತಿಯ ಅಧ್ಯಕ್ಷರಾದ ವಿಜಯಕುಮಾರ್ ಶೆಟ್ಟಿಕೊತ್ತಾಡಿ, ಗೌರವಾಧ್ಯಕ್ಷರಾದ ಭೋಜಹೆಗ್ಡೆ, ಸಂಸ್ಥೆಯ ಮುಖ್ಯಶಿಕ್ಷಕಿ ಗಾಯತ್ರಿದೇವಿ, ಹಳೆವಿದ್ಯಾರ್ಥಿಸಂಘದ ಅಧ್ಯಕ್ಷ ಚಂದ್ರಶೆಟ್ಟಿ ಯಾಳಹಕ್ಲು, ಕಾರ್ಯಕ್ರಮ ನಿರ್ವಹಣೆಯನ್ನು ಮಾಡಲಿದ್ದಾರೆ.

Click Here

LEAVE A REPLY

Please enter your comment!
Please enter your name here