ಕುಂದಾಪುರ ಮಿರರ್ ಸುದ್ದಿ…
ಕೋಟ: ಕೋಟದ ಸುವಿಕಾ ಸಾಂಸ್ಕøತಿಕ ಸಂಘಟನೆಯ ಆಯೋಜನೆಯಲ್ಲಿ ಬಹುಮುಖಿ ವ್ಯಕ್ತಿತ್ವದ ರಂಗ ನಿರ್ದೇಶಕ ಡಾ. ಶ್ರೀಪಾದ ಭಟ್ಟರ ಪರಿಕಲ್ಪನೆ, ವಿನ್ಯಾಸ ಮತ್ತು ನಿರ್ದೇಶನದಲ್ಲಿ ಕುಂದಾಪುರ ಭಂಡಾರ್‍ಕಾರ್ಸ್ ಕಾಲೇಜಿನ ತೃತೀಯ ಬಿ.ಎಸ್ಸಿ ವಿದ್ಯಾರ್ಥಿನಿ ಕುಮಾರಿ ಕಾವ್ಯ ಎಚ್. ಹಂದೆ ಕೋಟ ಅಭಿನಯಿಸುವ ‘ಹಕ್ಕಿ ಮತ್ತು ಅವಳು’ ಏಕವ್ಯಕ್ತಿ ರಂಗ ಪ್ರಯೋಗ ಎಂ.ಜಿ.ಎಂ. ಕಾಲೇಜಿನ ರವೀಂದ್ರ ಮಂಟಪದಲ್ಲಿ ಡಿ.31, ಶನಿವಾರ ಸಂಜೆ ಗಂಟೆ 6:00ಕ್ಕೆ ಸಂಪನ್ನಗೊಳ್ಳಲಿದೆ.
ಕನ್ನಡದ ಮತ್ತು ಕನ್ನಡಕ್ಕೆ ಅನುವಾದವಾಗಿ ಬಂದಿರುವ ಹಲವು ಲೇಖಕರ ಕವನ, ಕಥೆ, ಪ್ರಬಂಧಗಳನ್ನು ಆಧರಿಸಿದ ಕಾವ್ಯ ಪ್ರಯೋಗದ ರಂಗದಾಟ. ಹೆಣ್ಣಿನ ಬಿಡುಗಡೆಯ ಹಾಡುಗಳನ್ನು ಇಲ್ಲಿ ಅಭಿನಯಿಸಲಾಗುತ್ತದೆ. ದೇಹ, ದೇಶಗಳಲ್ಲಿ ಬಂಧಿಸಲ್ಪಟ್ಟ ‘ಅವಳು’ ತನ್ನ ಬಿಡುಗಡೆಯನ್ನು ಕನಸುವ ಆಟವಿದು. ಅನುಷ್ ಶೆಟ್ಟಿ, ಮುನ್ನಾ ಮೈಸೂರು ಅವರ ಸಂಗೀತ, ರಾಜು ಮಣಿಪಾಲ, ಗೋಪಿ ಸಾಗರ ಅವರ ರಂಗಸಜ್ಜಿಕೆ, ಸ್ವರ್ಣ ಪ್ರಭು ಅವರ ಸಹ ನಿರ್ದೇಶನದಲ್ಲಿ ಅಭಿಲಾಷ ಎಸ್, ಮಾನಸಿ ಸುಧೀರ್, ಕಾವ್ಯ ಪ್ರಭು ಅವರ ಸಹಕಾರದಲ್ಲಿ ‘ಹಕ್ಕಿ ಮತ್ತು ಅವಳು’ ತೆರೆಕಾಣಲಿದೆ ಎಂದು ಸುವಿಕಾದ ಸಂಘಟಕ ಎಚ್. ಸುಜಯೀಂದ್ರ ಹಂದೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.











