ಕುಂದಾಪುರ ಮಿರರ್ ಸುದ್ದಿ…
ಬೆಳ್ವೆ :ವ್ಯಕ್ತಿಯೊಬ್ಬ ತನ್ನ ಜೀವನದಲ್ಲಿ ಕಠಿಣ, ಶ್ರಮದ ದುಡಿಮೆಯೊಂದಿಗೆ ಇತರರಿಗೆ ಮಾದರಿಯಾಗಿ ಗುರುತಿಸಿಕೊಂಡಾಗ ಸಮಾಜದಲ್ಲಿ ಗೌರವವಿದೆ. ವ್ಯಕ್ತಿ ಸತ್ತ ನಂತರವು ಅವರ ಸೇವೆಯು ಜೀವಂತವಾಗಿರುತ್ತದೆ. ಇಂತಹವರ ಹೆಸರಿನಲ್ಲಿ ಹಮ್ಮಿಕೊಳ್ಳುವ ಕಾರ್ಯಕ್ರಮಗಳು ಮುಂದಿನ ಯುವ ಜನತೆಗೆ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಪ್ರೇರಣೆಯಾಗಲಿವೆ ಎಂದು ಕೊಲ್ಲೂರು ಶ್ರೀಮೂಕಾಂಬಿಕಾ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯ ಬಿ.ಗಣೇಶ ಕಿಣಿ ಬೆಳ್ವೆ ಹೇಳಿದರು.
ಅವರು ಬೆಳ್ವೆ ಸಮೀಪದ ಮರೂರು ಸರ್ಕಾರಿ ಕಿರಿಯ ಪ್ರಾರ್ಥಮಿಕ ಶಾಲಾ ವಠಾರದಲ್ಲಿ ಮರೂರು ಡಿ.ಪಿ.ಫ್ರೆಂಡ್ಸ್ ಮತ್ತು ಯುವ ಕೇಸರಿ ಫ್ರೆಂಡ್ಸ್ ಸಂಯೋಜನೆಯಲ್ಲಿ ವಿವಿಧ ಸಂಘ_ಸಂಸ್ಥೆಗಳ ಸಹಕಾರದೊಂದಿಗೆ ದಿ.ಶ್ಯಾಮಿಯಾನ್ ಶಂಕ್ರಣ್ಣ ಸ್ಮರಣಾರ್ಥ ನೆನಪು-2022 ಕಾರ್ಯಕ್ರಮವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.
ಹಿಲಿಯಾಣ ಶ್ರೀಬ್ರಹ್ಮಬೈದರ್ಕಳ ಗರೋಡಿ ಅಧ್ಯಕ್ಷ,ವೈ.ಕರುಣಾಕರ ಶೆಟ್ಟಿ ಯರುಕೋಣೆ ಮಾತನಾಡಿ, ಮನುಷ್ಯ ಜೀವನದಲ್ಲಿ ಸಾಧನೆಯನ್ನು ಮಾಡಿದಾಗ ಬದುಕು ಸಾರ್ಥಕವಾಗುತ್ತದೆ. ಪ್ರಮಾಣಿಕ ದುಡಿಮೆ ವ್ಯಕ್ತಿಯ ಗೌರವವನ್ನು ಹೆಚ್ಚಿಸುತ್ತದೆ. ಯುವ ಸಂಘಟನೆಗಳು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಗುರುತಿಸಿಕೊಳ್ಳಬೇಕು ಎಂದರು.
ಹೆಂಗವಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಂತೋಷ ಶೆಟ್ಟಿ,ಸದಸ್ಯೆ ಪಾರ್ವತಿ ನಾಯ್ಕ, ಆರ್ಡಿ-ಬೆಳ್ವೆ-ಗೋಳಿಯಂಗಡಿ ಲಯನ್ಸ್ ಕ್ಲಬ್ ಉಪಾಧ್ಯಕ್ಷ ಪಟ್ಟಾಭಿರಾಮ್ ಭಟ್ ಮರೂರು, ಮರೂರು ಶ್ರೀದುರ್ಗಾಪರಮೇಶ್ವರಿ ದೇವಳದ ಅರ್ಚಕ ಶ್ರೀಧರ ಬಾಯರಿ ಮರೂರು, ಮರೂರು ಸರ್ಕಾರಿ ಕಿರಿಯ ಪ್ರಾರ್ಥಮಿಕ ಶಾಲಾ ಮುಖ್ಯ ಶಿಕ್ಷಕ ಮಂಜುನಾಥ ಗಾಣಿಗ, ಶಂಕರನಾರಾಯಣ ಪೊಲೀಸ್ ಠಾಣೆ ಸಹಾಯಕ ಠಾಣಾಧಿಕಾರಿ ಜನಾರ್ಧನ, ಕುಡುಬಿ ಸಮಾಜೋದ್ಧಾರಕ ಸಂಘದ ಅಧ್ಯಕ್ಷ ಪ್ರಭಾಕರ ನಾಯ್ಕ,ದಿ, ಶ್ಯಾಮಿಯಾನ್ ಶಂಕರ ನಾಯ್ಕ ಸಹೋದರ ಮಹಾಬಲ ನಾಯ್ಕ ಅಲ್ಬಾಡಿ,ಮರೂರು ಡಿ.ಪಿ.ಫ್ರೆಂಡ್ಸ್ ಅಧ್ಯಕ್ಷ ಮಹೇಶ್ ನಾಯ್ಕ ಮರೂರು,ಯುವ ಕೇಸರಿ ಫ್ರೆಂಡ್ಸ್ ಅಧ್ಯಕ್ಷ ಪ್ರಕಾಶ ಮೊಗವೀರ ಮರೂರು, ನೆನಪು-2022 ರ ಸಂಘಟನೆ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.
ಮರೂರು ಸರ್ಕಾರಿ ಕಿರಿಯ ಪ್ರಾರ್ಥಮಿಕ ಶಾಲಾ ಮಕ್ಕಳಿಂದ ಮನೋರಂಜನಾ ಕಾರ್ಯಕ್ರಮ, ಸಮಾಜ ಸೇವಕ, ಬಾಂಧವ್ಯ ಬ್ಲಡ್ ಕರ್ನಾಟಕದ ದಿನೇಶ್ ಭಾಂದವ್ಯ, ಕನ್ನಡದ ಕಣ್ಮಣಿ ,ಜೀ ವಾಹಿನಿಯ ಡ್ರಾಮ ಜ್ಯೂನಿಯರ್ ವಿಜೇತೆ ಸಮೃದ್ಧಿ ಕುಂದಾಪುರ ಇವರುಗಳಿಗೆ ಗೌರವ ಸನ್ಮಾನ, ಉಡುಪಿ ಎಕ್ಸ್ಟೀಮ್ ಡ್ಯಾನ್ಸ್ ಅಕ್ಯಾಡೆಮಿ ತಂಡದವರಿಂದ ಡ್ಯಾನ್ಸ್,
ಕನ್ನುಕೆರೆ ಓಂಕಾರ ಕಲಾವಿದರಿಂದ ಎಸ್ಟ್ ಹೇಳ್ರೂ ಅಷ್ಟೆ ನಗೆ ನಾಟಕ ನಡೆಯಿತು.
ಶ್ರೀಧರ ಬಾಯರಿ ಪ್ರಾಸ್ತಾವಿಕ ಮಾತನಾಡಿದರು. ಗಣೇಶ್ ಅರಸಮ್ಮಕಾನು ಕಾರ್ಯಕ್ರಮ ನಿರೂಪಿಸಿದರು.











