ಕುಂದಾಪುರ ಮಿರರ್ ಸುದ್ದಿ…
ಕೋಟ: ಪಾಂಚಜನ್ಯ ಸಂಘದಿಂದ ಗೋವಿಗಾಗಿ ಮೇವು ಪಾಂಚಜನ್ಯ ಸಂಘ ಪಾರಂಪಳ್ಳಿ ಹಂದಟ್ಟು ಮತ್ತು ಮತ್ತು ಸಾಲಿಗ್ರಾಮ ಸ್ವಿಮ್ಮಿಂಗ್ ಕ್ಲಬ್ ಇವರ ಜಂಟಿ ಆಶ್ರಯದಲ್ಲಿ ಭಾನುವಾರ ಗೋವಿಗಾಗಿ ಮೇವು ಅಭಿಯಾನದಡಿ 4ಲೋಡು ಒಣ ಹುಲ್ಲನ್ನು ನೀಲಾವರ ಗೋಶಾಲೆಗೆ ಹಸ್ತಾಂತರಿಸಲಾಯಿತು.
ಸಂಘದ ಅಧ್ಯಕ್ಷ ಕೃಷ್ಣಮೂರ್ತಿ ಮರಕಾಲ ಅಧ್ಯಕ್ಷತೆ ವಹಿಸಿದರು. ಈ ಸಂದರ್ಭದಲ್ಲಿ ಸಾಲಿಗ್ರಾಮ ಶ್ರೀಗುರುನರಸಿಂಹ ದೇವಸ್ಥಾನದ ಅಧ್ಯಕ್ಷ ಡಾ.ಕೆ ಎಸ್ ಕಾರಂತ, ಸಾಲಿಗ್ರಾಮ ಪಟ್ಟಣ ಪಂಚಾಯತ್ ಅಧ್ಯಕ್ಷೆ ಸುಲತಾ ಹೆಗ್ಡೆ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಗೋವಿಗಾಗಿ ಮೇವು ಸಂಸ್ಥಾಪಕ ಬಿಲ್ಲಾಡಿ ಪ್ರಥ್ವರಾಜ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಗೋವಿಗಾಗಿ ಮೇವು ಜಿಲ್ಲಾ ಉಪಾಧ್ಯಕ್ಷ ವಿಜಯ ಗಾಣಿಗ, ಸಾಲಿಗ್ರಾಮ ಸ್ವಿಮ್ಮಿಂಗ್ ಕ್ಲಬ್ ಅಧ್ಯಕ್ಷ ಅನಂತಶ್ರೀನಿವಾಸ್ ಶ್ಯಾನುಭಾಗ್, ಕಾರ್ಯದರ್ಶಿ ಮನೋಹರ ಭಟ್, ಉಪಾಧ್ಯಕ್ಷ ನಿತ್ಯಾನಂದ ಶ್ಯಾನುಭಾಗ್, ಉದ್ಯಮಿ ಚೆಂಪಿ ಮಾಧವ ಶ್ಯಾನುಭಾಗ್, ಪಾಂಚಜನ್ಯ ಸಂಘ ಗೌರವಾಧ್ಯಕ್ಷ ರಾಮಚಂದ್ರ ಐತಾಳ, ಹಂದಟ್ಟು ಮಹಿಳಾ ಬಳಗದ ಅಧ್ಯಕ್ಷೆ ಪುಷ್ಭಾ ಕೆ ಹಂದಟ್ಟು,ಪಾಂಚಜನ್ಯ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು ಪಾಂಚಜನ್ಯದ ಪ್ರಧಾನ ಕಾರ್ಯದರ್ಶಿ ಸ್ವಾಗತಿಸಿ ಸುಜಿತ್ ಕುಮಾರ್ ಧನ್ಯವಾದಗೈದರು.











