Category: ಸುದ್ದಿ

  • ಕರಾಟೆ ಬ್ಲ್ಯಾಕ್ ಬೆಲ್ಟ್ ವಿಭಾಗ ಪೃಥ್ವಿಜ್ ಆರ್.ಕೆ ತೇರ್ಗಡೆ

    ಕರಾಟೆ ಬ್ಲ್ಯಾಕ್ ಬೆಲ್ಟ್ ವಿಭಾಗ ಪೃಥ್ವಿಜ್ ಆರ್.ಕೆ ತೇರ್ಗಡೆ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಕರಾಟೆ ಬುಡೋಕಾನ್ ಇಂಟರ್ ನ್ಯಾಷನಲ್ ವತಿಯಿಂದ 2024ನೇ ಸಾಲಿನ ಕರಾಟೆ ಬ್ಲ್ಯಾಕ್ ಬೆಲ್ಟ್ ವಿಭಾಗದ ಪರೀಕ್ಷೆಯಲ್ಲಿ ಪೃಥ್ವಿಜ್ ಆರ್.ಕೆ ತೇರ್ಗಡೆ ಹೊಂದಿದ್ದಾರೆ.

    ಇವರು ಕೋಡಿ ಕನ್ಯಾಣದ ಜಗನ್ನಾಥ್ ಅಮೀನ್ ಅವರಿಂದ ತರಬೇತಿ ಪಡೆದಿದ್ದು ಕೋಟ ಮಣೂರು ಸರೋಜಾ ಮತ್ತು ರಾಜೇಶ್ ಅವರ ಪುತ್ರರಾಗಿದ್ದು ಬ್ರಹ್ಮಾವರ ಜಿ.ಎಂ.ವಿದ್ಯಾನಿಕೇತನ ಪಬ್ಲಿಕ್ ಸ್ಕೂಲಿನ ವಿದ್ಯಾರ್ಥಿಯಾಗಿದ್ದಾರೆ.

  • ಕೋಟ :ಆನಂದ್. ಸಿ. ಕುಂದರ್ ಹುಟ್ಟು ಹಬ್ಬದ ಹಿನ್ನಲೆಯಲ್ಲಿ ಸೇವಾಶ್ರಮಗಳಿಗೆ, ಅಶಕ್ತರಿಗೆ ಧನಸಹಾಯ

    ಕೋಟ :ಆನಂದ್. ಸಿ. ಕುಂದರ್ ಹುಟ್ಟು ಹಬ್ಬದ ಹಿನ್ನಲೆಯಲ್ಲಿ ಸೇವಾಶ್ರಮಗಳಿಗೆ, ಅಶಕ್ತರಿಗೆ ಧನಸಹಾಯ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಅನಾಥಾಶ್ರಮಗಳ ನಿರ್ವಹಣೆಯೇ ಕ್ಲಿಷ್ಟಕರ ಆದರೆ ಅದರ ನಿರ್ವಹಣೆಗೆ ಅಗತ್ಯವಾದ ಆರ್ಥಿಕ ಕ್ರೂಡಿಕರಣ ಅಗತ್ಯ ಈ ದಿಸೆಯಲ್ಲಿ ಗೀತಾನಂದ ಫೌಂಡೇಶನ್ ಮೂಲಕ ನೆರವು ಯೋಜನೆ ಸಹಕಾರಿಯಾಗಲಿ ಎಂದು ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ ಕುಂದರ್ ನುಡಿದರು.

    ತಮ್ಮ 76ನೇ ಹುಟ್ಟು ಹಬ್ಬದ ಹಿನ್ನಲೆಯಲ್ಲಿ ಜನತಾ ಗ್ರೂಪ್ ಹಾಗೂ ಗೀತಾನಂದ ಫೌಂಡೇಶನ್ ಮೂಲಕ ಒಂದಿಷ್ಟು ಅನಾಥಾಶ್ರಮ, ವಿಕಲಚೇತನ, ಅಶಕ್ತರಿಗೆ ಸುಮಾರು 6ಲಕ್ಷ ರೂ ಅಧಿಕ ಮೌಲ್ಯದ ಧನಸಹಾಯದ ಚಕ್ ವಿತರಿಸಿ ಮಾತನಾಡಿ ಕಳೆದ ವರ್ಷ ಅಮೃತಮಹೋತ್ಸವದ ಹಿನ್ನಲೆಯಲ್ಲಿ ಒಂದಿಷ್ಟು ಆಶ್ರಮಗಳಿಗೆ ನೆರವು ನೀಡಲಾಗಿದ್ದು ಅದೇ ರೀತಿ ಈ ವರ್ಷವು ಹಮ್ಮಿಕೊಂಡಿದ್ದು ಅನಾಥಾಶ್ರಮಗಳು ನೆರಳು ನೀಡುವ ಧಾಮಗಳಾಗಿ ಕಾರ್ಯನಿರ್ವಹಿಸುತ್ತಿವೆ. ಈ ಕಾರ್ಯ ನಿತ್ಯ ನಿರಂತರವಾಗಿ ನಡೆಯಲಿ ಎಂದು ಹಾರೈಸಿದರು.

    ಇದೇ ವೇಳೆ ಒಟ್ಟು 13ಅನಾಥಾಶ್ರಮ, ವಿಕಲಚೇತನ, ಅಶಕ್ತರಿಗೆ ಚಕ್ ಮೂಲಕ ಧನಸಹಾಯ ಹಸ್ತಾಂತರಿಸಿದರು.

    ಈ ವೇಳೆ ಆಶ್ರಮಗಳ ಮುಖ್ಯಸ್ಥರು, ಜನತಾ ಸಂಸ್ಥೆಯ ಸಿಬ್ಬಂದಿಗಳು, ಗೀತಾನಂದ ಟ್ರಸ್ಟ್ ಪ್ರಮುಖರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಗೀತಾನಂದ ಫೌಂಡೇಶನ್ ಸಮಾಜಕಾರ್ಯ ವಿಭಾಗದ ರವಿಕಿರಣ್ ಕೋಟ ನಿರೂಪಿಸಿ ವಂದಿಸಿದರು.

  • ಹಟ್ಟಿಯಂಗಡಿ :ಐ.ಸಿ.ಎಸ್.ಇ. ಕೇಂದ್ರೀಯ ಪಠ್ಯಕ್ರಮದ ವಾರ್ಷಿಕ ಪರೀಕ್ಷೆಯ ಫಲಿತಾಂಶ :ಹಟ್ಟಿಯಂಗಡಿ ವಸತಿ ಶಾಲೆಗೆ ಶೇ.100 ಫಲಿತಾಂಶ

    ಹಟ್ಟಿಯಂಗಡಿ :ಐ.ಸಿ.ಎಸ್.ಇ. ಕೇಂದ್ರೀಯ ಪಠ್ಯಕ್ರಮದ ವಾರ್ಷಿಕ ಪರೀಕ್ಷೆಯ ಫಲಿತಾಂಶ :ಹಟ್ಟಿಯಂಗಡಿ ವಸತಿ ಶಾಲೆಗೆ ಶೇ.100 ಫಲಿತಾಂಶ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ :ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಟಾನ, ಹಟ್ಟಿಯಂಗಡಿಯ ಆಶ್ರಯದಲ್ಲಿ ನಡೆಯುತ್ತಿರುವ ರಜತ ವರ್ಷದ ಸಂಭ್ರಮದಲ್ಲಿ ಎರಡು ಗಿನ್ನಿಸ್ ಪ್ರಶಸ್ತಿ ಪುರಸ್ಕೃತ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯು 2023-24ನೇ ಶೈಕ್ಷಣಿಕ ವರ್ಷದ 10ನೇ ತರಗತಿಯ ವಾರ್ಷಿಕ ಪರೀಕ್ಷೆಯಲ್ಲಿ ನೂರಕ್ಕೆ ನೂರು ಫಲಿತಾಂಶವನ್ನು ಪಡೆಯುವುದರ ಮೂಲಕ ಹೆಗ್ಗಳಿಕೆಗೆ ಪಾತ್ರವಾಗಿದೆ.

    ಕೇಂದ್ರೀಯ ಐ.ಸಿ.ಎಸ್.ಇ. ಪಠ್ಯಕ್ರಮ ಆಧಾರಿತ ಶಿಕ್ಷಣದಲ್ಲಿ ಸತತವಾಗಿ 21ನೇ ಬಾರಿ ಶೇ. 100 ಫಲಿತಾಂಶವನ್ನು ದಾಖಲಿಸಿದ ಕುಂದಾಪುರ ತಾಲೂಕಿನ ಏಕೈಕ ಶಾಲೆ ಎಂಬ ಹಿರಿಮೆಗೆ ಪಾತ್ರವಾಗಿದೆ.

    ಇಲ್ಲಿ ರಾಜ್ಯದ ಹಾಗೂ ಹೊರ ರಾಜ್ಯದ ಸುಮಾರು 1730ಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಅವರಲ್ಲಿ 582 ಮಕ್ಕಳಿಗೆ ಸುಸಜ್ಜಿತ ಹಾಸ್ಟೆಲ್ ವ್ಯವಸ್ಥೆಯನ್ನು ಕಲ್ಪಿಸಿ ಮಾದರಿ ವಸತಿ ಶಾಲೆ ಎನಿಸಿದೆ.

    ಪರೀಕ್ಷೆಗೆ ಹಾಜರಾದ 173 ವಿದ್ಯಾರ್ಥಿಗಳಲ್ಲಿ 119 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ, 54 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.

    ತನ್ವಿಶ್ರೀ ಎಸ್.ಆಚಾರ್ ಮತ್ತು ಮಾನ್ಯ ಪೂಜಾರಿ ಶೇ.97.4 ಅಂಕದೊಂದಿಗೆ ಪ್ರಥಮ, ಜ್ಞಾನದೀಪ್ ವಿ. ಶೆಟ್ಟಿ ಶೇ.96 ಅಂಕದೊಂದಿಗೆ ದ್ವಿತೀಯ, ಪಾವನಿ ಪಾಟೀಲ್ ಶೇ.95.8 ಅಂಕದೊಂದಿಗೆ ತೃತೀಯ ಸ್ಥಾನ ಪಡೆದಿರುತ್ತಾರೆ.

    ಸಂಸ್ಥೆಗೆ ಕೀರ್ತಿ ತಂದ ಎಲ್ಲಾ ವಿದ್ಯಾರ್ಥಿಗಳನ್ನು ಹಾಗೂ ಸಂಸ್ಥೆಯ ಶಿಕ್ಷಕ ಶಿಕ್ಷಕೇತರ ಸಿಬ್ಬಂದಿ ವರ್ಗದವರನ್ನು ಕಾರ್ಯದರ್ಶಿಗಳೂ ಹಾಗೂ ಶಾಲಾ ಪ್ರಾಂಶುಪಾಲರಾದ ಶರಣ ಕುಮಾರ ಅಭಿನಂದಿಸಿದರು.

  • ಶಿವಮೊಗ್ಗ ಲೋಕಸಭಾ ಚುನಾವಣೆ ಮಧ್ಯಾಹ್ನದವರೆಗೆ ಬಿರುಸಿನ ಮತದಾನ. ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಕಟ್ಟೆಚ್ಚರ ವಿವಿಧ ಪಕ್ಷಗಳ ಮುಖಂಡರಿಂದ ಮತದಾನ – ಮತಗಟ್ಟೆಯಲ್ಲಿ ಮತ ಚಲಾಯಿಸಿದ 95ರ ವೃದ್ಧೆ – ಹಲವು ಮತಗಟ್ಟೆಯಲ್ಲಿ ನವದುರ್ಗೆಯರಿಂದ ಮತದಾನಕ್ಕೆ ಚಾಲನೆ

    ಶಿವಮೊಗ್ಗ ಲೋಕಸಭಾ ಚುನಾವಣೆ ಮಧ್ಯಾಹ್ನದವರೆಗೆ ಬಿರುಸಿನ ಮತದಾನ. ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಕಟ್ಟೆಚ್ಚರ ವಿವಿಧ ಪಕ್ಷಗಳ ಮುಖಂಡರಿಂದ ಮತದಾನ – ಮತಗಟ್ಟೆಯಲ್ಲಿ ಮತ ಚಲಾಯಿಸಿದ 95ರ ವೃದ್ಧೆ – ಹಲವು ಮತಗಟ್ಟೆಯಲ್ಲಿ ನವದುರ್ಗೆಯರಿಂದ ಮತದಾನಕ್ಕೆ ಚಾಲನೆ

    ಕುಂದಾಪುರ ಮಿರರ್ ಸುದ್ದಿ…

    ಬೈಂದೂರು: ದೇಶದಲ್ಲಿ ಎರಡನೇ ಹಂತದ ಮತದಾನ ನಡೆಯುತ್ತಿದ್ದು, ಇಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಚುನಾವಣೆಯ ಮತದಾನ ಮೇ7ರಂದು ಬೆಳಿಗ್ಗೆಯಿಂದಲೇ ನಡೆಯುತ್ತಿದೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದ ಚುನಾವಣಾ ವ್ಯಾಪ್ತಿಯಲ್ಲಿ ಬೈಂದೂರು ವಿಧಾನಸಭಾ ಕ್ಷೇತ್ರವೂ ಸೇರಿರುವುದರಿಂದ ಬೈಂದೂರು ಕ್ಷೇತ್ರದಾದ್ಯಂತ ಮತದಾನ ಪ್ರಕ್ರಿಯೆ ಆರಂಭಗೊಂಡಿತು.

    ಬಿಜೆಪಿಯ ಸಂಕಲ್ಪದಂತೆ ವಿವಿಧ ಮತಗಟ್ಟೆಗಳಲ್ಲಿ ಬೆಳಿಗ್ಗೆ 7 ಗಂಟೆಗೆ ಸ್ವಘೋಷಿತ ನವದುರ್ಗೆಯರು ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡುವ ಮೂಲಕ ಮತದಾನಕ್ಕೆ ಚಾಲನೆ ನೀಡಿದರು. ಕಿರಿಮಂಜೇಶ್ವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಮತಗಟ್ಟೆ ಸಂಖ್ಯೆ 95ರಲ್ಲಿ ನವದುರ್ಗೆಯರಿಂದ ಮತದಾನ ನಡೆಯಿತು.

    ಶಿಕಾರಿಪುರದಲ್ಲಿ ಬಿಜೆಪಿ ಅಭ್ಯರ್ಥಿ ಬಿ.ವೈ ರಾಘವೇಂದ್ರ ಅವರು ತನ್ನ ತಂದೆ, ಮಾಜೀ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಹೋದರ, ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಕುಟುಂಬಿಕರ ಜೊತೆ ಮತ ಚಲಾಯಿಸಿದರು. ಈ ಸಂದರ್ಭ ಮಾತನಾಡಿದ ಅವರು, ದೇಶಕ್ಕೆ ಮತ್ತೊಮ್ಮೆ ಮೋದಿ ಪ್ರದಾನಿಯಾಗುವ ನಿಟ್ಟಿನಲ್ಲಿ ಮತದಾರರು ಬಿಜೆಪಿ ಕೈ ಹಿಡಿಯಲಿದ್ದಾರೆ ಎಂದರು. ಯಡಿಯೂರಪ್ಪ ಮಾತನಾಡಿ, ರಾಜ್ಯದಲ್ಲಿ 26 ಸೀಟು ಗೆಲ್ಲುವ ಭರವಸೆ ವ್ಯಕ್ತಪಡಿಸಿದರು. ವಿಜಯೇಂದ್ರ ಮಾತನಾಡಿ, ಕಾಂಗ್ರೆಸ್ ನ‌ ಸುಳ್ಳು ಭರವಸೆಗಳಿಗೆ ಜನ ತಕ್ಕ ಉತ್ತರ ನೀಡಲಿದ್ದಾರೆ ಎಂದರು.

    ಶಿವಮೊಗ್ಗ ಪಕ್ಷೇತರ ಅಭ್ಯರ್ಥಿ ಕೆ.ಎಸ್. ಈಶ್ವರಪ್ಪ ಶಿವಮೊಗ್ಗ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕುಟುಂಬದವರ ಜೊತೆ ಆಗಮಿಸಿ ಮತದಾನ ಮಾಡಿದರು.

    ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ತಮ್ಮ ಊರಾದ ಕಂಚಿಕಾನ್ ಶಾಲೆಯಲ್ಲಿ ಮತದಾನ ಮಾಡಿದರು. ಬಳಿಕ ಮಾತನಾಡಿದ ಅವರು, ಪ್ರಚಾರ ಸಂದರ್ಭದಲ್ಲಿ ಬಿಜೆಪಿ ನೀಡಿದ ಭರವಸೆಗಳಿಗೆ ಮತದಾರರು ಸ್ಪಂದಿಸಿದ್ದಾರೆ. ಪ್ರಥಮ ಮತ ಚಲಾಯಿಸಲು ತಾಯಂದಿರು ಮುಂದೆ ಬಂದಿದ್ದಾರೆ. ಒಂದು ಲಕ್ಷ ಲೀಡ್ ಬಂದರೆ ಮೋದಿಯವರನ್ನು ಕೊಲ್ಲೂರಿಗೆ ಕರೆಸುವುದಕ್ಕೆ ಈಗಲೂ ಬದ್ಧವಾಗಿದ್ದೇವೆ ಎಂದರು.

    ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿಯವರು ತಾಯಿ ಸುನಂದಾ ಹಾಗೂ ಮಗಳು ಮಹಿಮಾ ಕೊಡ್ಗಿ ಜೊತೆಗೂಡಿ ಬಂದು ಅಮಾಸೆಬೈಲು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತ ಚಲಾಯಿಸಿದರು.

    ಕೆರಾಡಿ ಗ್ರಾಮದ ಬೆಳ್ಳಾಲದ ಮೂಡುಮುಂದ ಮತಗಟ್ಟೆಯಲ್ಲಿ ಮಾಜೀ ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಮತ ಚಲಾಯಿಸಿದರು. ಈ ಸಂದರ್ಭ ಮಾತನಾಡಿದ ಅವರು, ಈ ಬಾರಿ ಮತದಾರರು ಪರಿವರ್ತನೆಯ ಬಗ್ಗೆ ಚಿಂತಿಸಿದ್ದಾರೆ. ಸುಳ್ಳುಗಳಿಂದ ಜನರನ್ನು ವಂಚಿಸುತ್ತಿರುವುದನ್ನು ಜನ ಅರ್ಥ ಮಾಡಿಕೊಂಡಿದ್ದಾರೆ. ಹಾಗಾಗಿ ಮತದಾರರು ಕಾಂಗ್ರೆಸ್ ಕೈ ಹಿಡಿಯಲಿದ್ದಾರೆ ಎಂದರು.

    ಬೈಂದೂರು ವಿಧಾನಸಭಾ ಕ್ಷೇತ್ರದ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಒಂದಾದ ಹಳ್ಳಿಹೊಳೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಸುಳುಗೋಡು ಮತಗಟ್ಟೆ ಸಂಖ್ಯೆ 139ರಲ್ಲಿ 96 ವರ್ಷ ಪ್ರಾಯದ ವಯೋವೃದ್ಧೆ ಮತದಾನ ಮಾಡಿದರು. ಹಿರಿಯರಿಗೆ ಮನೆಯಲ್ಲಿಯೇ ಮತದಾನ ಮಾಡುವ ಅವಕಾಶವಿದ್ದರೂ ಮತಗಟ್ಟೆಗೆ ಬಂದು ಮತ ಚಲಾಯಿಸಿದ್ದರ ಬಗ್ಗೆ ಪ್ರತಿಕ್ರಿಯಿಸಿ, ಮೊದಲಿನಿಂದಲೂ ಮತಗಟ್ಟೆಯಲ್ಲಿಯೇ ಬಂದು ಮತ ಚಲಾಯಿಸಿದ್ದು, ಅದು ಖುಷಿ ಎನ್ನುತ್ತಾರೆ ಅವರ ಮನೆಯವರು.

    ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 246 ಮತಗಟ್ಟೆಗಳಿದ್ದು ಅದರಲ್ಲಿ 70 ಸೂಕ್ಷ್ಮ ಮತಗಟ್ಟೆ ಇದೆ. ಅದರಲ್ಲಿ 19 ಮತಗಟ್ಟೆ ನಕ್ಸಲ್ ಪೀಡಿತ ಮತಗಟ್ಟೆ ಇದ್ದು, ನಕ್ಸಲ್ ಪೀಡಿತ ಮತಗಟ್ಟೆಗಳಲ್ಲಿ ಕೇಂದ್ರ ಸಶಕ್ತ ಮೀಸಲು ಪಡೆ ನಿಯೋಜಿಸಲಾಗಿದ್ದು. ಶಾಂತಿಯುತ ಮತದಾನ ನಡೆದಿದೆ. ಮತಗಟ್ಟೆಗಳಲ್ಲಿ ಕುಡಿಯುವ ನೀರು, ವೈದ್ಯಕೀಯ ಸೌಲಭ್ಯವನ್ನು ಒದಗಿಸಲಾಗಿದ್ದು, ಬಿಸಿಲಿನ ಬೇಗೆಗೆ ಒಆರ್ಎಸ್ (ORS) ಎನರ್ಜಿ ಪಾನೀಯದ ವ್ಯವಸ್ಥೆ ಮಾಡಲಾಗಿದೆ. ಮತದಾರರು ನಿರ್ಭತಿಯಿಂದ ಹುಮ್ಮಸ್ಸಿನಿಂದ ಮತ ಚಲಾಯಿಸಿದರು. ಒಟ್ಟಾರೆಯಾಗಿ ಬೆಳಿಗ್ಗೆಯಿಂದಲೇ ಮತದಾನ ಆರಂಭವಾಗಿದ್ದು, ಬೆಳಿಗ್ಗೆ ನೀರಸ ಮತದಾನ ನಡೆಯುತ್ತಿದೆ ಎನ್ನಲಾಗಿದೆ.

  • ಬೈಂದೂರು :ನವದುರ್ಗೆಯರ ಮತ ಅಭಿಯಾನ : ಕಿರಿಮಂಜೇಶ್ವರದಲ್ಲಿ ಮತದಾನ

    ಬೈಂದೂರು :ನವದುರ್ಗೆಯರ ಮತ ಅಭಿಯಾನ : ಕಿರಿಮಂಜೇಶ್ವರದಲ್ಲಿ ಮತದಾನ

    ಕುಂದಾಪುರ ಮಿರರ್ ಸುದ್ದಿ…

    ಬೈಂದೂರು: ಭಾರತೀಯ ಜನತಾ ಪಕ್ಷದ ವತಿಯಿಂದ ನವದುರ್ಗೆಯರ ಮತದಾನ ಅಭಿಯಾನಕ್ಕೆ ಬೈಂದೂರು ವಿಧಾನಸಭಾ ಕ್ಷೇತ್ರದ ಕಿರಿಮಂಜೇಶ್ವರ ಗ್ರಾಮದ ಮತಗಟ್ಟೆ ಸಂಖ್ಯೆ 95ರಲ್ಲಿ ಚಾಲನೆ ದೊರಕಿತು.

    ಈ ಮತಗಟ್ಟೆಯಲ್ಲಿ ನವದುರ್ಗೆಯರೆನ್ನಿಸಿಕೊಂಡ ಜಾನಕಿ, ಮಹಾಲಕ್ಸ್ಮಿ, ಪಾರ್ವತಿ, ಲಕ್ಸ್ಮಿ, ಮಾಲತಿ, ರೇವತಿ, ಸವಿತಾ, ವಿಶಾಲ, ಮಮತಾ, ಜ್ಯೋತಿ, ಗೀತಾ, ಪಾರ್ವತಿ, ಹೇಮಾ ಶಿವಮೊಗ್ಗ ಲೋಕಸಭೆಯ ಬಿಜೆಪಿ ಅಭ್ಯರ್ಥಿಗೆ ಮೊದಲ ಸರತಿಯಲ್ಲಿ ನಿಂತು ಮತದಾನ ಮಾಡಿದರು.

  • ತೆಕ್ಕಟ್ಟೆ :ಎಳವೆಯಿಂದಲೇ ಪರಿಸರದ ಬಗ್ಗೆ ಕಾಳಜಿ ಬೆಳೆಸಿಕೊಳ್ಳಿ: ರವೀಂದ್ರ ಕೋಟ

    ತೆಕ್ಕಟ್ಟೆ :ಎಳವೆಯಿಂದಲೇ ಪರಿಸರದ ಬಗ್ಗೆ ಕಾಳಜಿ ಬೆಳೆಸಿಕೊಳ್ಳಿ: ರವೀಂದ್ರ ಕೋಟ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ನಿಸರ್ಗದ ಮಡಿಲಲ್ಲಿ ಪ್ರತೀ ವರ್ಷ ಶಿಬಿರವನ್ನು ಕಳೆಯುತ್ತಿದ್ದೀರಿ. ನಿಸರ್ಗ ನೆರಳನ್ನು, ಗಾಳಿಯನ್ನು ನೀಡಿ ನಿಮ್ಮನ್ನು ತಂಪಾಗಿಸಿದೆ. ಪರಿಸರದ ಬಗೆಗೆ ಕಾಳಜಿ ಉಳ್ಳವರಾಗಿ. ಎಲ್ಲೆಂದರಲ್ಲಿ ಕಸವನ್ನು ಎಸೆಯುವುದನ್ನು ತಡೆಯಿರಿ. ನಿಮ್ಮ ಭವಿಷ್ಯಕ್ಕೆ ಪರಿಸರ ಬೇಕೇ ಬೇಕು. ಎಳವೆಯಿಂದಲೇ ಪರಿಸರದ ಬಗೆಗೆ ಕಾಳಜಿ ಬೆಳೆಸಿಕೊಳ್ಳಿ. ಇದರಿಂದ ನಿಮ್ಮ ಭವಿಷ್ಯ ಉಜ್ವಲವಾಗಲಿದೆ ಎಂದು ಪತ್ರಕರ್ತ ರವೀಂದ್ರ ಕೋಟ ಶಿಬಿರವನ್ನುದ್ಧೇಶಿಸಿ ಮಾತನ್ನಾಡಿದರು.

    ಯಶಸ್ವೀ ಕಲಾವೃಂದ ಕೊಮೆ-ತೆಕ್ಕಟ್ಟೆ, ಧಮನಿ ಹಾಗೂ ದಿಮ್ಸಾಲ್ ಸಂಸ್ಥೆಗಳ ಸಹಯೋಗದಲ್ಲಿ 24ನೇ ದಿನದ ‘ರಜಾರಂಗು-24’ ಶಿಬಿರವು ಮೇ 4 ರಂದು ತೆಕ್ಕಟ್ಟೆಯಲ್ಲಿ ನಡೆದ ಸಮಾರಂಭವನ್ನುದ್ದೇಶಿಸಿ ರವೀಂದ್ರ ಮಾತನ್ನಾಡಿದರು.

    ರಂಗ ನಿರ್ದೇಶಕ ನಾಗೇಶ್ ಕೆದೂರು, ಕೈಲಾಸ ಕಲಾಕ್ಷೇತ್ರದ ಅಧ್ಯಕ್ಷ ಹೆರಿಯ ಮಾಸ್ಟರ್, ಶಿಬಿರಾರ್ಥಿ ಶಶಾಂಕ್, ಉಪಸ್ಥಿತರಿದ್ದರು. ಚಿಣ್ಣರೇ ಸಭಾ ಕಾರ್ಯಕ್ರಮದ ಎಲ್ಲಾ ನಿರ್ವಹಣೆಯನ್ನು ಪೂರೈಸಿದರು.

  • ಕೋಟ :ಯಕ್ಷಗಾನ ಕಲೆವಿಶ್ವಗಾನ ಕಲೆಯಾಗಿ ಗುರುತಿಸಿಕೊಂಡಿದೆ – ಯಕ್ಷ ವಿಮರ್ಶಕ ಎಚ್. ಸುಜಯೀಂದ್ರ ಹಂದೆ

    ಕೋಟ :ಯಕ್ಷಗಾನ ಕಲೆವಿಶ್ವಗಾನ ಕಲೆಯಾಗಿ ಗುರುತಿಸಿಕೊಂಡಿದೆ – ಯಕ್ಷ ವಿಮರ್ಶಕ ಎಚ್. ಸುಜಯೀಂದ್ರ ಹಂದೆ

    ಕೋಟ ಸುರೇಶ್‍ ಅವರಿಗೆ ಯಕ್ಷಸೌರಭ ಕಲಾರಂಗದ ಪ್ರಶಸ್ತಿ ಪ್ರದಾನ

    ಕುಂದಾಪುರ ಮಿರರ್ ಸುದ್ದಿ…
    ಕೋಟ: ಯಕ್ಷಗಾನ ಶ್ರೀಮಂತ ಕಲೆ ಅದನ್ನು ಮುಂದಿನ ತಲೆಮಾರಿಗೆ ಅರ್ಥಪೂರ್ಣವಾಗಿ ಕೊಂಡ್ಯೋಯುವ ಕೆಲಸ ಆಗಬೇಕಿದೆ ಎಂದು ಯಕ್ಷಗಾನ ವಿಮರ್ಶಕ ಎಚ್ ಸುಜಯೀಂದ್ರ ಹಂದೆ ನುಡಿದರು.

    ಶನಿವಾರ ಕೋಟದ ಯಕ್ಷಸೌರಭ ಶ್ರೀ ಹಿರೇಮಹಾಲಿಂಗೇಶ್ವರ ಕಲಾರಂಗ ಕೋಟ ಇದರ ಒಂಭತ್ತನೆ ವರ್ಷದ ವಾರ್ಷಿಕೋತ್ಸವ ರಂಗಾರ್ಪಣಾ 2024ರ ಕಾರ್ಯಕ್ರಮದಲ್ಲಿ ಅಭಿನಂದನಾ ನುಡಿಗಳನ್ನಾಡಿ ಯಕ್ಷಗಾನ ವಿಶ್ಚದೆಲ್ಲೆಡೆ ವಿಶ್ವಗಾನವಾಗಿ ಪಸರಿಸಿಕೊಂಡಿದೆ. ಬೇರೆ ಕಲೆಗಳಿಗಿಂತ ವಿಶಿಷ್ಠ ಭಕ್ತಿ ಭಾವದಿಂದ ನೋಡುವ ಯಕ್ಷಗಾನ ಶ್ರೇಷ್ಠತೆ ಪಡೆದುಕೊಂಡಿದೆ.

    ಅದರಲ್ಲಿ ಬಡಗು ತೆಂಕು ಮೇಳೈಸಿದರೂ ನಡು ತಿಟ್ಟಿಗೆ ವಿಶಿಷ್ಟವಾಗಿ ಗುರುತಿಸಿಕೊಂಡಿದೆ. ಸಾಂಪ್ರದಾಯಿಕ ವೇಷಭೂಣ ಹಾವ ಭಾವಗಳಿಂದ ತನ್ನದೆ ಆದ ವೈಶಿಷ್ಟ್ಯತೆ ಪಡೆದುಕೊಂಡಿದೆ. ಈ ನಡುವೆ ಯಕ್ಷಗಾನ ಬಡವಾಗುತ್ತಿರುವುದು ಬೇಸರದಾಯಕ ವಿಚಾರವಾಗಿದೆ. ಬೆರಳೆಣಿಕೆಯ ಕಲಾವಿದರು ಯಕ್ಷಗಾನದ ಮೌಲ್ಯಗಳನ್ನು ಉಳಿಸಿಕೊಂಡು ಬರುತ್ತಿದ್ದಾರೆ. ಈ ದಿಸೆಯಲ್ಲಿ ಯಕ್ಷಗಾನದ ಮೂಲಕ ಮೊಳಹಳ್ಳಿ,ಶಿರಿಯಾರರ ಶೈಲಿಯನ್ನು ಕಲಾರಸಿಕರಿಗೆ ಧಾರೆ ಎರೆಯುತ್ತಿದ್ದಾರೆ. ಇಂಥಹ ಮಹಾನ್ ಕಲಾವಿದರಿಗೆ ಯಕ್ಷಸೌರಭ ಪ್ರಶಸ್ತಿ ನೀಡುತ್ತಿರುವುದು ಶ್ಲಾಘನೀಯ ಕಾರ್ಯ ಎಂದು ಪ್ರಶಂಸೆ ನೀಡಿದರಲ್ಲದೆ ಹವ್ಯಾಸಿ ಯಕ್ಷ ತಂಡಗಳು ಯಕ್ಷಗಾನದ ಮೌಲ್ಯಕ್ಕೆ ವಿಶೇಷ ಆಸಕ್ತಿ ನೀಡುತ್ತಿವೆ. ಇದು ಆಶಾದಾಯಕ ಹಾಗೇ ಕೋಟ ಸುರೇಶರಂತಹ ಮಹಾನ್ ಕಲಾವಿದರು ಡಾ.ಕೋಟ ಶಿವರಾಮ ಕಾರಂತ, ಕೋಟ ವೈಕುಂಠರಂತೆ ಜಗತ್ ಪ್ರಸಿದ್ಧಿ ಪಡೆಯಲಿ ಎಂದು ಹಾರೈಸಿ ಇತ್ತೀಚಿಗಿನ ದಿನಗಳಲ್ಲಿ ಪ್ರಸಿದ್ಧ ಕಲಾವಿದರು ಯಕ್ಷಲೋಕದಿಂದ ಇನ್ನಿಲದಂತ್ತಾಗುತ್ತಿರುವುದು ಬೇಸರ ನೀಡಿದೆ. ಕಲಾವಿದರು ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸಬೇಕೆಂದು ಕರೆ ಇತ್ತರು.

    ಕಾರ್ಯಕ್ರಮವನ್ನು ಮಯ್ಯ ಯಕ್ಷಶ್ರೀ ಪ್ರತಿಷ್ಠಾನ ಸಂಸ್ಥಾಪಕ ಋಷಿಕುಮಾರ್ ಮಯ್ಯ ಉದ್ಘಾಟಿಸಿದರು.

    ಇದೇ ವೇಳೆ ಯಕ್ಷಸೌರಭ ಕಲಾರಂಗದ ಪ್ರಶಸ್ತಿಯನ್ನು ಕೋಟ ಸುರೇಶ್ ಇವರಿಗೆ ಸಂಸ್ಕೃತಿ ವಿಶ್ಚ ಪ್ರತಿಷ್ಠಾನ ಉಡುಪಿ ಇದರ ಸ್ಥಾಪಕ ವಿಶ್ವನಾಥ ಶೆಣೈ ಪ್ರದಾನಿಸಿದರು.

    ಸೌರಭ ಸಂಮಾನವನ್ನುವ ಹಿರಿಯ ಹವ್ಯಾಸಿ ಕಲಾವಿದ ಮಹಾಬಲ ಭಂಢಾರಿ ಕೋಡಿ, ಪ್ರಸಂಗಕರ್ತ ಕಲಾವಿದ ಮಹಾಬಲ ಹೇರಿಕುದ್ರು, ಹವ್ಯಾಸಿ ಕಲಾವಿದ ಜಯ ಕಡೆಕಾರ್ ಇವರುಗಳಿಗೆ ನೀಡಲಾಯಿತು.

    ವಿಶೇಷವಾಗಿ ಗುರುವಂದನೆಯನ್ನು ಯಕ್ಷಗುರು ಪ್ರಸಾದ್ ಕುಮಾರ್ ಮೊಗೆಬೆಟ್ಟು ಇವರಿಗೆ ಸಮರ್ಪಿಸಲಾಯಿತು. ಇತ್ತೀಚಿಗೆ ಅಗಲಿದ ಯಕ್ಷಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಹಾಗೂ ಹವ್ಯಾಸಿ ಕಲಾವಿದ ಮಟಪಾಡಿ ಪ್ರಭಾಕರ್ ಆಚಾರ್ ಇವರುಗಳಿಗೆ ನುಡಿನಮನ ಸಲ್ಲಿಸಲಾಯಿತು.

    ಸಭೆಯ ಅಧ್ಯಕ್ಷತೆಯನ್ನು ಮಣೂರು ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ ಕುಂದರ್ ವಹಿಸಿದ್ದರು.

    ಮುಖ್ಯ ಅಭ್ಯಾಗತರಾಗಿ ನಿವೃತ್ತ ಬ್ಯಾಂಕ್ ಅಧಿಕಾರಿ ಭುವನ್ ಪ್ರಸಾದ ಹೆಗ್ಡೆ,ವಿದ್ಯುತ್ ಗುತ್ತಿಗೆದಾರ ಕೆ.ಆರ್.ನಾಯಕ್ ಉಪಸ್ಥಿತರಿದ್ದರು.

    ಯಕ್ಷಸೌರಭದ ಅಧ್ಯಕ್ಷ ರಾಘವೇಂದ್ರ ಕರ್ಕೇರ ಸ್ವಾಗತಿಸಿ ಪ್ರಾಸ್ತಾವನೆ ಸಲ್ಲಿಸಿದರು. ಕಾರ್ಯಕ್ರಮವನ್ನು ಮಂಜುನಾಥ್ ಆಚಾರ್ ನಿರೂಪಿಸಿದರು. ಕಾರ್ಯದರ್ಶಿ ಶ್ರೀನಾಥ ಉರಾಳ ವಂದಿಸಿದರು. ನಂತರ ಯಕ್ಷಸೌರಭದ ಸದಸ್ಯರಿಂದ ಶ್ರೀ ದೇವಿ ಮಹಾತ್ಮೆಯಕ್ಷಗಾನ ಪ್ರದರ್ಶನಗೊಂಡಿತು.

  • ಕೋಟ :ಗುರುಗಳಿಗೆ ಗೌರವ ಸಲ್ಲಿಸುವುದು ಶ್ರೇಷ್ಢವಾದ ಕಾರ್ಯ – ಆನಂದ್ ಸಿ ಕುಂದರ್

    ಕೋಟ :ಗುರುಗಳಿಗೆ ಗೌರವ ಸಲ್ಲಿಸುವುದು ಶ್ರೇಷ್ಢವಾದ ಕಾರ್ಯ – ಆನಂದ್ ಸಿ ಕುಂದರ್

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಗುರುಗಳ ಬಗ್ಗೆ ವಿಶೇಷ ಗೌರವ ಹಾಗೂ ಅವರ ನೆನಪಿನ ಮೂಲಕ ಶಿಷ್ಯ ವರ್ಗ ಗೌರವ ಸಲ್ಲಿಸುವ ಕಾರ್ಯ ಶ್ರೇಷ್ಠವಾದದ್ದು ಎಂದು ಮಣೂರು ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ ಕುಂದರ್ ನುಡಿದರು.

    ಭಾನುವಾರ ಕೋಟ ಮಣೂರು ಕೆ.ಸಿ ಕುಂದರ್ ಸಭಾಂಗಣದಲ್ಲಿ ಪಡುಕರೆ ಸರಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಹಿಂದಿನ ವಿದ್ಯಾರ್ಥಿಗಳು ಹಮ್ಮಿಕೊಂಡ ಪುನರ್ ಮಿಲನ ರಜತ ಸಂಭ್ರಮ ಕಾರ್ಯಕ್ರಮದಲ್ಲಿ ಮಾತನಾಡಿ ಶೈಕ್ಷಣಿಕ ಜೀವನದ ಪರಿಭಾಷೆಗೆ ಮುನ್ನುಡಿ ಬರೆದ ಶಿಕ್ಷಕರು ತಮ್ಮ ಶಿಷ್ಯವೃಂದಕ್ಕೆ ಬದುಕಿನ ದಾರಿದೀಪ ನೀಡಿ ಆ ವಿದ್ಯಾರ್ಥಿಗಳಿಂದ ಗೌರವ ಸಲ್ಲಿಸಿಕೊಳ್ಳುವುದೇ ಬಹುದೊಡ್ಡ ಭಾಗ್ಯವಾಗಿದೆ. ಶಾಲಾ ಜೀವನವನ್ನು ಮತ್ತೆ ನೆನೆಪಿಸಿ ಆ ಮೂಲಕ ಆಗಿನ ಗುರುಗಳಿಗೆ ವಿಶೇಷ ಗೌರವ ಕಾಣಿಕೆ ಸಲ್ಲಿಸಿದ ಕಾರ್ಯ ನಿಜಕ್ಕೂ ಸಂತೋಷ ನೀಡಿದೆ ಇಂಥಹ ಕಾರ್ಯಕ್ರಮಗಳು ಆಗಾಗ ನಡೆದರೆ ಆ ಗುರುಗಳಿಗೆ ನೀಡುವ ಬಹುದೊಡ್ಡ ಗೌರವವಾಗಿದೆ ಎಂದು ಪುನರ್ ಮಿಲನ ಕಾರ್ಯಕ್ರಮಕ್ಕೆ ಶುಭಹಾರೈಸಿದರು.

    ಈ ವೇಳೆ 1995-99ರವರೆಗೆ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಭವಾನಿ ಟೀಚರ್, ಗಾಯಿತ್ರಿ, ಸಹದೇವಿ ಕೋಟ್ಯಾನ್, ಬಸವ ಪೂಜಾರಿ, ಗಜೇಂದ್ರ ಶೆಟ್ಟಿ, ಸಂಜೀವ ಶೆಟ್ಟಿ, ರಾಜೀವ ಶೆಟ್ಟಿ, ಪ್ರಸಿಲ್ಲಾ, ಹರಿದಾಸ್ ಕಿಣಿ, ಕೃಷ್ಣ ಮಾಸ್ಟರ್, ಜ್ಞಾನೇಶ್ಚರಿ,ಶೇಖರ್ ಶೆಟ್ಟಿ, ನಾಗರತ್ನ, ಲಿನೇಖ ಟೀಚರ್, ಶೇಕರಪ್ಪ, ರುದ್ರಾಚಾರ್, ಜ್ಯೋತಿ, ವಿಠ್ಠಲ್ ವಿ ಗಾಂವ್ಕರ್, ರಾಮಚಂದ್ರ ಜೋಶಿ, ನಾಗೇಶ್ ಶ್ಯಾನುಭಾಗ್, ವಿಜಯ ಕುಮಾರ್, ರೇಖಾ ಸಿ ನಾಯಕ್, ಉಮಾಮದೇವಿ ಇವರುಗಳಿಗೆ ಗುರುವಂದನೆ ಸಲ್ಲಿಸಲಾಯಿತು.

    ಕಾರ್ಯಕ್ರಮದಲ್ಲಿ ವಿಶೇಷವಾಗಿ ಆಗಿನ ಕಾಲದಲ್ಲಿ ಐಸ್‍ಕ್ಯಾಂಡಿ ವ್ಯಾಪಾರಿ ಸುಬ್ಬಣ್ಣ ಗಾಣಿಗ ಇವರಿಗೆ ವಿಶೇಷ ಸನ್ಮಾನ ನೀಡಲಾಯಿತು.

    ಈ ವೇಳೆ ಶಿಷ್ಯವೃಂದದಿಂದ ಅನಿಸಿಕೆ, ಗುರುಗಳ ನೆನಪಿನ ಬುತ್ತಿ ವೇದಿಕೆಯಲ್ಲಿ ಅನಾವರಣಗೊಂಡಿತು.

    ಕಾರ್ಯಕ್ರಮದಲ್ಲಿ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಮಂಜುನಾಥ್ ಕೆಎಸ್, ಪ್ರೌಢಶಾಲಾ ವಿಭಾಗದ ಶಿಕ್ಷಕ ರಾಮದಾಸ್ ನಾಯಕ್ , ಉಪಸ್ಥಿತರಿದ್ದರು. ಸನ್ಮಾನ ಪತ್ರವನ್ನು ಪ್ರೀತಿಕಾ, ಚಂದ್ರಶೇಖರ್ ವಾಚಿಸಿದರು. ಹಳೆವಿದ್ಯಾರ್ಥಿ ವಿಮಲ ಸ್ವಾಗತಿಸಿದರು. ಕಾರ್ಯಕ್ರಮವನ್ನು ಸರಿತಾ ನಿರೂಪಿಸಿದರು. ಲಕ್ಷ್ಮೀ ವಂದಿಸಿದರು. ನಾಗರಾಜ್ ಪಡುಕರೆ ಗಿಡಗಳನ್ನು ವಿತರಿಸಿದರು.

  • ಕೋಟ ಹಂದೆ ದೇಗುಲದ ಜಾತ್ರಾ ಮಹೋತ್ಸವದ ಸ್ವಚ್ಛತಾ ಕಾರ್ಯ

    ಕೋಟ ಹಂದೆ ದೇಗುಲದ ಜಾತ್ರಾ ಮಹೋತ್ಸವದ ಸ್ವಚ್ಛತಾ ಕಾರ್ಯ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಇಲ್ಲಿನ ಕೋಟದ ಹಂದೆ ಮಹಾಗಣಪತಿ ಮಹಾವಿಷ್ಣು ದೇಗುಲದ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ಸ್ವಚ್ಛತಾ ಕಾರ್ಯ ಭಾನುವಾರ ನಡೆಯಿತು.

    ಕೋಟದ ಪಂಚವರ್ಣ ಯುವಕ ಮಂಡಲ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಹಂದಟ್ಟು ಮಹಿಳಾ ಬಳಗ ಕೋಟ, ವಿಪ್ರ ಮಹಿಳಾ ಬಳಗ ಸಾಲಿಗ್ರಾಮ, ಮಣೂರು ಫ್ರೆಂಡ್ಸ್ ಸಹಯೋಗದೊಂದಿಗೆ 206ನೇ ಭಾನುವಾರದ ಪರಿಸರಸ್ನೇಹಿ ಅಭಿಯಾನದ ಅಂಗವಾಗಿ ಶ್ರೀ ದೇಗುಲವನ್ನು ಸ್ವಚ್ಛಗೊಳಿಸಲಾಯಿತು.

    ದೇಗುಲದ ಅಧ್ಯಕ್ಷ ಅಮರ್ ಹಂದೆ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿದರು.

    ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್, ಮಹಿಳಾಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ, ಮಣೂರು ಫ್ರೆಂಡ್ಸ್ ಅಧ್ಯಕ್ಷ ದಿನೇಶ್ ಆಚಾರ್, ಪಂಚವರ್ಣ ಮಹಿಳಾ ಮಂಡಲದ ಸಂಚಾಲಕಿ ಸುಜಾತ ಬಾಯರಿ, ಹಂದಟ್ಟು ಮಹಿಳಾ ಬಳಗದ ಪುಷ್ಭಾ ಕೆ ಹಂದಟ್ಟು ಮತ್ತಿತರರು ಇದ್ದರು.

  • ಹೆಮ್ಮಾಡಿಯ ಜನತಾ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿ- ಪೋಷಕರ ಸಮಾಗಮ

    ಹೆಮ್ಮಾಡಿಯ ಜನತಾ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿ- ಪೋಷಕರ ಸಮಾಗಮ

    ಕುಂದಾಪುರ ಮಿರರ್ ಸುದ್ದಿ…

    ಹೆಮ್ಮಾಡಿ :ಜನತಾ ಪದವಿಪೂರ್ವ ಕಾಲೇಜು ಹೆಮ್ಮಾಡಿಯಲ್ಲಿ ವಿದ್ಯಾರ್ಥಿ- ಪೋಷಕರ ಸಮಾಗಮ ನಡೆಯಿತು. ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರು ಹಾಗೂ ಕಾಲೇಜಿನ ಪ್ರಾಂಶುಪಾಲರಾದ ಗಣೇಶ ಮೊಗವೀರರವರು ವಹಿಸಿ ಮಾತನಾಡಿ 2024-25ನೇ ಶೈಕ್ಷಣಿಕ ವರ್ಷದ ಸಂಪೂರ್ಣ ಕಾರ್ಯಚಟುವಟಿಕೆಗಳ ಕುರಿತು ಮಾತನಾಡಿದರು ಹಾಗೂ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಈಗಾಗಲೇ ನಡೆದ ಎರಡು ಕಿರು ಪರೀಕ್ಷೆಗಳ ಉತ್ತರ ಪತ್ರಿಕೆಯನ್ನು ಪೋಷಕರಿಗೆ ವಿತರಿಸಿ ವಿದ್ಯಾರ್ಥಿ ಕಲಿಕಾ ಪ್ರಗತಿಯ ಕುರಿತು ಚರ್ಚಿಸಲಾಯಿತು.ಈ ಸಂದರ್ಭದಲ್ಲಿ ವಿದ್ಯಾರ್ಥಿ ಪೋಷಕರು ಮಾತನಾಡಿ ಗುಣಮಟ್ಟದ ಶಿಕ್ಷಣದ ಕುರಿತಾಗಿ ಕಾಲೇಜಿನ ಶೈಕ್ಷಣಿಕ ಚಟುವಟಿಕೆಗಳ ಕುರಿತು ಹರ್ಷ ವ್ಯಕ್ತಪಡಿಸಿದರು.

    ಸಮಾರಂಭದಲ್ಲಿ ಕಾಲೇಜಿನ ಉಪ ಪ್ರಾಂಶುಪಾಲರಾದ ರಮೇಶ ಪೂಜಾರಿ, ವಿದ್ಯಾರ್ಥಿ ಪೋಷಕರು, ಬೋಧಕ/ಬೋಧಕೇತರ ವೃಂದದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಉಪನ್ಯಾಸಕ ಉದಯ ನಾಯ್ಕ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.