Category: ಸುದ್ದಿ

  • ಕುಂದಾಪುರ :ದಿನೇಶ್ ಹೆಗ್ಡೆ ಟ್ರಸ್ಟ್ ನಿಂದ ಹದಿಹರೆಯದ ತರಬೇತಿ

    ಕುಂದಾಪುರ :ದಿನೇಶ್ ಹೆಗ್ಡೆ ಟ್ರಸ್ಟ್ ನಿಂದ ಹದಿಹರೆಯದ ತರಬೇತಿ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ‘ಎಂ ದಿನೇಶ್ ಹೆಗ್ಡೆ ಜಯರತ್ನ ಟ್ರಸ್ಟ್’ ಇವರ ಆಶ್ರಯದಲ್ಲಿ ಗೋಳಿಯಂಗಡಿ ಸರಕಾರಿ ಪದವಿಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ಮಕ್ಕಳ ಪೋಷಕರಿಗೆ “ಲೈಂಗಿಕ ಅಪರಾಧಗಳಿಂದ ಮಕ್ಕಳನ್ನು ರಕ್ಷಿಸುವ ಕಾಯ್ದೆ” ಹಾಗೂ ಹದಿಹರೆಯದ ವಯಸ್ಸು ಮತ್ತು ವರ್ತನೆ ಎಂಬ ವಿಷಯದ ಕುರಿತಾಗಿ ಕಾರ್ಯಾಗಾರವನ್ನು ನಡೆಸಿಕೊಡಲಾಯಿತು.

    ಈ ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕ ರಾಘವೇಂದ್ರ ಗಾಣಿಗ, ಎಸ್. ಡಿ. ಎಂ .ಸಿ .ಅಧ್ಯಕ್ಷ ಸುಧಾ ಪ್ರಭು, ಎಸ್ ಡಿ ಎಂ ಸಿ ಸದಸ್ಯರಾದ ಬಾಬಣ್ಣ, ಗೋವಿಂದ, ದಿನಕರ ಪೂಜಾರಿ, ಸರೋಜ, ರತ್ನ, ಪ್ರೇಮ, ಸಹ ಶಿಕ್ಷಕರು ವಿದ್ಯಾರ್ಥಿಗಳು, ಪೋಷಕರು ಭಾಗವಹಿಸಿದ್ದರು. ಸಂಪನ್ಮೂಲ ವ್ಯಕ್ತಿ ಗಿರೀಶ್ ಎಂ ಎನ್. ಕಾರ್ಯಗಾರ ನಡೆಸಿಕೊಟ್ಟರು.

  • ಕುಂದಾಪುರ :ಪರಿಸರ ಪ್ರೇಮಿ ಭರತ್ ಬಂಗೇರ ನಿವಾಸಕ್ಕೆ ವೃಕ್ಷಮಾತೆ ಪದ್ಮಶ್ರೀ ತುಳಸಿ ಗೌಡ ಭೇಟಿ

    ಕುಂದಾಪುರ :ಪರಿಸರ ಪ್ರೇಮಿ ಭರತ್ ಬಂಗೇರ ನಿವಾಸಕ್ಕೆ ವೃಕ್ಷಮಾತೆ ಪದ್ಮಶ್ರೀ ತುಳಸಿ ಗೌಡ ಭೇಟಿ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ಸಾವಿರಾರು ಗಿಡಗಳನ್ನ ನೆಟ್ಟು ಮರವನ್ನಾಗಿಸಿದ ವೃಕ್ಷಮಾತೆ ಬಿರುದಾಂಕಿತರಾದ ಪದ್ಮಶ್ರೀ ಪುರಸ್ಕೃತ ತುಳಸಿ ಗೌಡ ಬೀಜಾಡಿಯಲ್ಲಿ ಪರಿಸರ ಪ್ರೇಮಿ ಭರತ್ ಬಂಗೇರ ನಿವಾಸಕ್ಕೆ ಭೇಟಿ ನೀಡಿ ಸವಿನೆನಪಿಗಾಗಿ ಗಿಡವೊಂದನ್ನು ನೆಟ್ಟರು. ಅವರನ್ನ ಪುಂಡಲೀಕ ಬಂಗೇರ ಕುಟುಂಬದವರು ಅತ್ಯಂತ ಗೌರವದಿಂದ ಸ್ವಾಗತಿಸಿ ಗೌರವಿಸಿದರು.

    ಈ ಸಂದರ್ಭ ಗಣೇಶ್ ಪುತ್ರನ್, ಪುಂಡಲಿಕ್ ಬಂಗೇರ,ಹಿರಿಯರಾದ ಗುಲಾಬಿ ಸುವರ್ಣ, ಕಲ್ಪನಾ ಭಾಸ್ಕರ್, ಭರತ್ ಬಂಗೇರ, ಸರಸ್ವತಿ ಪುತ್ರನ್, ಮಾಲತಿ ಬಂಗೇರ ,ಲೋಹಿತ್ ಬಂಗೇರ, ಪ್ರಜ್ಞಾ ಲೋಹಿತ್, ಮೇಘ ಭರತ್ ಮತ್ತು ಕುಟುಂಭಸ್ತರು ಉಪಸ್ಥಿತರಿದ್ದರು.

  • ಕೋಡಿಯ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರ ದಿನಾಚರಣೆ, ವಾರ್ಷಿಕೋತ್ಸವ ಹಾಗೂ ಬ್ಯಾರೀಸ್ ನಾಲೆಡ್ಜೆ ಕ್ಯಾಂಪಸ್ ಉದ್ಘಾಟನೆ

    ಕೋಡಿಯ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರ ದಿನಾಚರಣೆ, ವಾರ್ಷಿಕೋತ್ಸವ ಹಾಗೂ ಬ್ಯಾರೀಸ್ ನಾಲೆಡ್ಜೆ ಕ್ಯಾಂಪಸ್ ಉದ್ಘಾಟನೆ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ : ರಸ್ತೆಯಲ್ಲಿ ಯಾರ ವಿರುದ್ದವೋ ಮಾತನಾಡುವುದರಿಂದ ದೇಶಪ್ರೇಮ ಜಾಗೃತವಾಗುವುದಿಲ್ಲ. ಸಮಾಜದಲ್ಲಿ ಶಾಂತಿ-ಸಾಮರಸ್ಯ, ಭಾವೈಕ್ಯಕತೆ ಹಾಗೂ ಬಂಧುತ್ವದ ಮೂಲಕ ನಮ್ಮ ರಾಷ್ಟ್ರೀಯತೆಯನ್ನು ಉದ್ದೀಪನಗೊಳಿಸುವ ಸಂಸ್ಕಾರಯುತ ಶಿಕ್ಷಣ ಸಂಸ್ಥೆಗಳನ್ನು ಹುಟ್ಟು ಹಾಕುವುದೇ ನಿಜವಾದ ದೇಶಪ್ರೇಮ ಎಂದು ಕರ್ನಾಟಕ ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ಅಭಿಪ್ರಾಯಪಟ್ಟರು.

    ಇಲ್ಲಿಗೆ ಸಮೀಪದ ಕೋಡಿಯ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಭಾನುವಾರ ನಡೆದ ಸಂಸ್ಥಾಪಕರ ದಿನಾಚರಣೆ, ವಾರ್ಷಿಕೋತ್ಸವ ಹಾಗೂ ‘ ಬ್ಯಾರೀಸ್ ನಾಲೆಡ್ಜೆ ಕ್ಯಾಂಪಸ್ ‘ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

    ಶಾಸಕರು, ಸಂಸದರು, ಮಂತ್ರಿಗಳು, ವ್ಯಾಪಾರಸ್ಥರು, ಉದ್ಯಮಿಗಳು, ಅಧಿಕಾರಿಗಳು ಬಲಿಷ್ಠರಾಗೋದರಿಂದ ದೇಶ ಬಲಿಷ್ಠವಾಗೋದಿಲ್ಲ. ಭವಿಷ್ಯದ ಕನಸಿನ ಗುರಿ ಸಾಧನೆಗಾಗಿ ತರಗತಿ ಹಾಗೂ ಕ್ರೀಡಾಂಗಣದಲ್ಲಿ ವಿದ್ಯಾರ್ಥಿಗಳು ಸೃಜನಶೀಲರಾದಾಗ ದೇಶ ಬಲಿಷ್ಠವಾಗುತ್ತದೆ. ಜನರ ಎಲ್ಲ ಕಷ್ಟಗಳು ಸರ್ಕಾರದಿಂದ ಪರಿಹಾರವಾಗೋದಿಲ್ಲ, ಮಕ್ಕಳಲ್ಲಿ ಇಚ್ಛಾ ಶಕ್ತಿ ಇದ್ದಾಗ ಮಾತ್ರ ಪೋಷಕರ ಸಂಕಷ್ಟಗಳು ಪರಿಹಾರವಾಗುತ್ತದೆ. ಸ್ವಾಭಿಮಾನದ ಬದುಕು, ತಾಳ್ಮೆ, ಸಹೋದರತೆಯ ಭಾವನೆಗಳನ್ನು ಒಳಗೊಂಡ ಧಾರ್ಮಿಕ ಹಾಗೂ ಲೌಕಿಕ ಶಿಕ್ಷಣಗಳು ಮಾತ್ರ ಕ್ರಾಂತಿಕಾರಿ ಬದಲಾವಣೆಗಳಿಗೆ ಕಾರಣವಾಗುತ್ತದೆ. ಅಪಮಾನ, ನಿಂದನೆ, ಟೀಕೆಗಳನ್ನು ಸಹಿಸಿಕೊಂಡಾಗ ಮಾತ್ರ ಸಮಾಜಮುಖಿಯಾಗಿ ಎತ್ತರದ ಸ್ಥಾನ ಪಡೆಯಲು ಸಾಧ್ಯ. ಸಾಮಾಜಿಕ ಜಾಲತಾಣಗಳ ಆರೋಗ್ಯಕರವಲ್ಲದ ಟೀಕೆಗಳನ್ನು ನಿರ್ಲಕ್ಷ್ಯ ಮಾಡಬೇಕು. ಸಂಸ್ಕಾರಯುತವಾದ ಶಿಕ್ಷಣ ದೊರಕಿದಾಗ ಮಾತ್ರ ವ್ಯಕ್ತಿ ಉತ್ತಮ ಪ್ರಜೆಯಾಗಲು ಸಾಧ್ಯ. ಉನ್ನತ ಶಿಕ್ಷಣ ಪಡೆದವರೆಲ್ಲ ಆದರ್ಶ ಬದುಕನ್ನು ಬಾಳುತ್ತಿಲ್ಲ. ಎಷ್ಟೋ ಐಎಎಸ್ ಪದವಿ ಪಡೆದುಕೊಂಡವರು ಭ್ರಷ್ಟಾಚಾರದ ಆರೋಪಗಳನ್ನು ಎದುರಿಸುತ್ತಿದ್ದಾರೆ. ಸಮಾಜ ಘಾತಕ ಕೃತ್ಯಗಳನ್ನು ಮಾಡುವವರು ಉನ್ನತ ಶಿಕ್ಷಣವನ್ನ ಪಡೆದುಕೊಂಡವರು ಆಗಿದ್ದಾರೆ. ದೇಶದ ಭವಿಷ್ಯಕ್ಕಾಗಿ ಒಳ್ಳೆಯ ಶಿಕ್ಷಣ ಸಂಸ್ಥೆಗಳ ಅಗತ್ಯ ಇದೆ. ಈ ನಿಟ್ಟಿನಲ್ಲಿ ಕೋಡಿಯ ಬ್ಯಾರೀಸ್ ಗ್ರೂಪ್ಸ್ ಅವರ ಶೈಕ್ಷಣಿಕ ಸೇವೆ ಅನುಕರಣೀಯ ಎಂದರು.

    ಬಾರೀಸ್ ಎಜುಕೇಶನ್ ಲೋಗೋ ಅನಾವರಣ ಮಾಡಿ ಮಾತನಾಡಿದ ರಾಜ್ಯ ಕಾನೂನು, ಸಂಸದೀಯ ವ್ಯವಹಾರ ಹಾಗೂ ಪ್ರವಾಸೋದ್ಯಮ ಸಚಿವ ಎಚ್‌.ಕೆ.ಪಾಟೀಲ್ ಅವರು, ಶ್ರೀಮಂತಿಕೆ ಕನಸನ್ನು ನನಸು ಮಾಡೋದಿಲ್ಲ. ದೈವಿಕ ಪ್ರೇರಣೆ ಹಾಗೂ ಬದ್ಧತೆಗಳು ಮಾತ್ರ ಕನಸನ್ನು ಆರಳಿಸುತ್ತದೆ. ಸಾಮಾನ್ಯ ವಿದ್ಯಾರ್ಥಿಗೂ ಯೋಗ್ಯ ಶಿಕ್ಷಣವನ್ನು ನೀಡಿ ಅವರನ್ನು ಪ್ರತಿಭಾನ್ವೀತರನ್ನಾಗಿಸುವುದೇ ಶಿಕ್ಷಣದ ನಿಜವಾದ ಆಶಯ. ಸ್ವಚ್ಚಂದ ಹಾಗೂ ನೈಸರ್ಗಿಕ ಪ್ರಕೃತಿಯ ವಾತಾವರಣಗಳು, ಸಂಸ್ಕಾರಯುತ ಶಿಕ್ಷಣವನ್ನು ಪ್ರೇರೇಪಿಸುತ್ತದೆ. ಮಕ್ಕಳ ಭವಿಷ್ಯವನ್ನು ಅವರೇ ರೂಪಿಸಿಕೊಳ್ಳಬೇಕು. ಅವಕಾಶವಾದಿಗಳಾಗದೆ, ಆಶಾವಾದಿಗಳಾಗಬೇಕು. ಶ್ರಮ ಮತ್ತು ಓದು ಪ್ರತಿಯೊಬ್ಬರ ಬದುಕನ್ನು ರೂಪಿಸುತ್ತದೆ. ಡಾ.ಅಂಬೇಡ್ಕರ್, ಡಾ.ಅಬ್ದುಲ್ ಕಲಂ ಅವರ ಜೀವನದ ಯಶೋಗಾಥೆ ನಮ್ಮ ಮಕ್ಕಳಿಗೆ ಆದರ್ಶವಾಗಬೇಕು. ಅಡ್ಡದಾರಿಗಳು ನಮ್ಮ ಭವಿಷ್ಯದ ಕನಸುಗಳನ್ನು ನುಚ್ಚುನೂರು ಮಾಡುತ್ತದೆ ಎನ್ನುವ ನಿತ್ಯಸತ್ಯಗಳು ಮನನವಾಗಬೇಕು. ನಮ್ಮ ದೇಶದ ಶಾಶ್ವತ ಆಸ್ತಿಗಳಾದ ಮಕ್ಕಳು ಹಾಗೂ ಯುವ ಸಮುದಾಯವನ್ನು ಸರಿದಾರಿಯಲ್ಲಿ ನಡೆಸಿಕೊಂಡುಹೋಗುವ ಜವಾಬ್ದಾರಿಯನ್ನು ಎಲ್ಲರೂ ಬದ್ಧತೆಯಿಂದ ನಿರ್ವಹಿಸಬೇಕು ಎಂದರು.

    ಧ್ವಜಾರೋಹಣ ನೆರವೇರಿಸಿದ ಶಾಸಕ ಎ.ಕಿರಣ್‌ಕುಮಾರ ಕೊಡ್ಗಿ ಮಾತನಾಡಿದರು. ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಅಬ್ದುಲ್ ರೆಹಮಾನ್ ಬ್ಯಾರಿ ಅಧ್ಯಕ್ಷತೆ ವಹಿಸಿದ್ದರು. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ತುಲಸಿ ಗೌಡ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮೂಸಬ್ಬ ಪಿ ಬ್ಯಾರಿ ಅವರನ್ನು ಗೌರವಿಸಲಾಯಿತು. ಪಂದ್ಯಾಟದಲ್ಲಿ ವಿಜೇತರಾದವರಿಗೆ ಹಾಗೂ ಶೈಕ್ಷಣಿಕ ಸಾಧನೆ ಮಾಡಿದವರನ್ನು ಅಭಿನಂದಿಸಲಾಯಿತು.

    ಬ್ಯಾರೀಸ್ ಸೀಸೈಡ್ ಪಬ್ಲಿಕ್ ಸ್ಕೂಲ್‌ ಮುಖ್ಯ ಶಿಕ್ಷಕಿ ಅಶ್ವಿನಿ ಶೆಟ್ಟಿ ಸ್ವಾಗತಿಸಿದರು, ಕೆ.ಮೊಹ್ದೀನ್ ಬ್ಯಾರಿ ಎಜುಕೇಶನ್ ಟ್ರಸ್ಟ್‌ನ ಆಡಳಿತ ಟ್ರಸ್ಟಿ ಸೈಯದ್ ಮೊಹಮ್ಮದ್ ಬ್ಯಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಬ್ಯಾರೀಸ್ ಅನುದಾನಿತ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಜಯಶೀಲ ಶೆಟ್ಟಿ ಹಾಗೂ ಬ್ಯಾರೀಸ್ ಶಿಕ್ಷಕರ ತರಬೇತಿ ಕಾಲೇಜಿನ ಪ್ರಾಂಶುಪಾಲೆ ಡಾ.ಫಿರ್ದೋಸ್ ವರದಿ ಮಂಡಿಸಿದರು, ಬ್ಯಾರೀಸ್ ಪಿ.ಯು ಕಾಲೇಜಿನ ಉಪನ್ಯಾಸಕಿ ಝಿಯಾನ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಬ್ಯಾರೀಸ್ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಶಮೀರ್ ವಂದಿಸಿದರು, ಉಪನ್ಯಾಸಕರಾದ ಪ್ರೊ.ಹಯವದನ ಹಾಗೂ ಸಂದೀಪ್‌ ಶೆಟ್ಟಿ ನಿರೂಪಿಸಿದರು.

  • ಕೋಟ ಅಮೃತೇಶ್ವರೀ ದೇಗುಲಕ್ಕೆ ದುಬೈ ಉದ್ಯಮಿ ಡಾ.ಬಿ.ಆರ್ ಶೆಟ್ಟಿ ಭೇಟಿ

    ಕೋಟ ಅಮೃತೇಶ್ವರೀ ದೇಗುಲಕ್ಕೆ ದುಬೈ ಉದ್ಯಮಿ ಡಾ.ಬಿ.ಆರ್ ಶೆಟ್ಟಿ ಭೇಟಿ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಪುರಾಣಪ್ರಸಿದ್ಧ ಕೋಟದ ಅಮೃತೇಶ್ವರೀ ಹಲವು ಮಕ್ಕಳ ತಾಯಿ ದೇಗುಲಕ್ಕೆ ದುಬೈನ ಪ್ರಸಿದ್ಧ ಉದ್ಯಮಿ ಡಾ.ಬಿ.ಆರ್ ಶೆಟ್ಟಿ ಭೇಟಿ ನೀಡಿ ಶ್ರೀದೇವಿಯ ದರ್ಶನ ಪಡೆದರು.

    ಈ ಸಂದರ್ಭದಲ್ಲಿ ದೇಗುಲದ ವ್ಯವಸ್ಥಾಪಕ ಗಣೇಶ್ ಹೊಳ್ಳ ಶಾಲು ಹೋದಿಸಿ ಶ್ರೀಕ್ಷೇತ್ರದ ಮಹತ್ವವನ್ನು ತಿಳಿ ಪಡಿಸಿ ಪ್ರಸಾದ ವಿತರಿಸಿದರು.

    ವಿಶ್ವದಲ್ಲೇ ಈ ರೀತಿಯ ದೇಗುಲವನ್ನು ಸಂದರ್ಶಿಸಲ್ಲಿಲ್ಲ ನೋಡಿಯೂ ಇಲ್ಲ ಇದೊಂದು ಅತೀ ಸಂತೋಷದ ಕ್ಷಣವಾಗಿದೆ ಕೋಟ ಎಂಬ ಪರಿಸರ ಹಲವು ಮಕ್ಕಳನ್ನು ಒಡಲಲ್ಲಿ ಇರಿಸಿಕೊಂಡು ದೃಶ್ಯದ ಬಗ್ಗೆ ಮಾಧ್ಯಮಕ್ಕೆ ವಿವರಿಸಿದರು.
    ಈ ವೇಳೆ ರಾಜ್ಯ ಕರಕುಶಲ ನಿಗಮದ ಮಾಜಿ ಅಧ್ಯಕ್ಷ ಡಾ.ಬಿ.ರಾಘವೇಂದ್ರ ಶೆಟ್ಟಿ , ದೇಗುಲದ ಆಡಳಿತ ಮಂಡಳಿಯ ಮಾಜಿ ಟ್ರಸ್ಟಿ ಚಂದ್ರ ಪೂಜಾರಿ ಚಂದ್ರ ಆಚಾರ್ ,ರಾಷ್ಟ್ರೀಯ ಮಾನವ ಹಕ್ಕು ರಾಜ್ಯ ಸಮಿತಿ ಕಾರ್ಯದರ್ಶಿ ದಿನೇಶ್ ಗಾಣಿಗ,ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್, ಅರ್ಚಕ ಕೃಷ್ಣ ಜೋಗಿ,ದೇವರಾಜ್ ಜೋಗಿ, ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷ ಲಲಿತಾ ಪೂಜಾರಿ, ಕಾರ್ಯದರ್ಶಿ ವಸಂತಿ ಹಂದಟ್ಟು, ಕಾರ್ಯಾಧ್ಯಕ್ಷ ರವೀಂದ್ರ ಕೋಟ, ಸಾಮಾಜಿಕ ಕಾರ್ಯಕರ್ತ ನಿತ್ಯಾನಂದ ಕೊಠಾರಿ ಮತ್ತಿತರರು ಉಪಸ್ಥಿತರಿದ್ದರು.

  • ಹುಣ್ಸೆಮಕ್ಕಿ :ಡಾ. ಜಿ. ರಾಮಕೃಷ್ಣ ಆಚಾರ್ ಚಾರಿಟೇಬಲ್ ಟ್ರಸ್ಟ್ (ರಿ.)ಮೂಡುಬಿದ್ರೆ ಇದರ ನೂತನ ಶಾಖಾ ಕಛೇರಿ ಉದ್ಘಾಟನೆ

    ಹುಣ್ಸೆಮಕ್ಕಿ :ಡಾ. ಜಿ. ರಾಮಕೃಷ್ಣ ಆಚಾರ್ ಚಾರಿಟೇಬಲ್ ಟ್ರಸ್ಟ್ (ರಿ.)ಮೂಡುಬಿದ್ರೆ ಇದರ ನೂತನ ಶಾಖಾ ಕಛೇರಿ ಉದ್ಘಾಟನೆ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ಕನಸು ನನಸುಗೊಳಿಸುವ ಉದ್ದೇಶದಿಂದ ಊರು ಬಿಟ್ಟು ಹೋದ ಬಳಿಕ ಹುಟ್ಟೂರ ಸಂಪರ್ಕ ಇರಲಿಲ್ಲ. ಹುಟ್ಟೂರಿಗೆ ಇನ್ನಷ್ಟು ಹತ್ತಿರವಾಗಬೇಕು, ದುಡಿಮೆಯ ಒಂದು ಪಾಲನ್ನು ನನ್ನೂರಿನ ಜನತೆಗೆ ಕೊಡಬೇಕು ಎನ್ನುವ ಉದ್ದೇಶದಿಂದ ಡಾ. ಜಿ. ರಾಮಕೃಷ್ಣ ಆಚಾರ್ ಚಾರಿಟೇಬಲ್ ಟ್ರಸ್ಟ್ (ರಿ) ಕೆಲಸ ಮಾಡಲಿದೆ. ಇದು ನನ್ನ ಜೀವನದ ಮಹತ್ವದ ಕ್ಷಣ ಎಂದು ಉದ್ಯಮಿ ಡಾ. ಜಿ. ರಾಮಕೃಷ್ಣ ಆಚಾರ್ ಹೇಳಿದರು.

    ಇಲ್ಲಿನ ಹುಣ್ಸೆಮಕ್ಕಿ ಸಮೀಪದ ತಲ್ಮಕ್ಕಿ ಸಮೃದ್ದಿ ಕಾಂಪ್ಲೆಕ್ಸ್‌ನಲ್ಲಿ ಭಾನುವಾರ ಡಾ. ಜಿ. ರಾಮಕೃಷ್ಣ ಆಚಾರ್ ಚಾರಿಟೇಬಲ್ ಟ್ರಸ್ಟ್ (ರಿ) ಮೂಡುಬಿದ್ರೆ ಇದರ ನೂತನ ಶಾಖಾ ಕಛೇರಿ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

    ಸಾಧಿಸುವ ಛಲವಿದ್ದರೆ ಏನಾದರೂ ಸಾಧಿಸಬಹುದು. ಅತ್ಯಂತ ಕಡು ಬಡತನದಿಂದ‌ ನಾನು ಬರಿಗೈಯ್ಯಲ್ಲಿ ಊರು ಬಿಟ್ಟು ಹೋದವನು. ಸ್ವ ಪರಿಶ್ರಮದಿಂದಲೇ ಇಂದು ದೊಡ್ಡ ಮಟ್ಟದ ವ್ಯವಹಾರ ನಡೆಸುತ್ತಿದ್ದೇನೆ. ಈಗಾಗಲೇ‌ ಮೂಡುಬಿದ್ರೆಯಲ್ಲಿರುವ ನನ್ನ ಸಂಸ್ಥೆಯ ಹೆಸರಿನಲ್ಲಿ ವರ್ಷಕ್ಕೆ‌ 3 ರಿಂದ‌ 5 ಕೋಟಿ ರೂ. ನಷ್ಟು ನೆರವು ನೀಡುತ್ತಿದ್ದೇವೆ. ಈ ಕೆಲಸವನ್ನು ನನ್ನ ಹುಟ್ಟೂರ ಜನರಿಗೂ ವಿಸ್ತರಿಸುವ‌ ನಿಟ್ಟಿನಲ್ಲಿ ಟ್ರಸ್ಟ್ ಕಚೇರಿ ತೆರೆದಿದ್ದೇವೆ. ಊರು ಬೆಳೆಯಬೇಕಾದರೆ‌ ಹಣ‌ ಮುಖ್ಯವಲ್ಲ. ಆ ಊರಿನ ಸಂಪನ್ಮೂಲ ಅಭಿವೃದ್ದಿ ಮಾಡುವುದು ಬಹಳ ಮುಖ್ಯವಾಗಿರುತ್ತದೆ. ಕೇವಲ ನೆರವು ಮಾತ್ರವಲ್ಲದೇ ಮಹಿಳೆಯರನ್ನು ಸ್ವಾವಲಂಬಿಗಳಾಗಿ ಮಾಡುವತ್ತ ಟ್ರಸ್ಟ್ ಕೆಲಸ ಮಾಡಲಿದೆ ಎಂದರು.

    ನೂತನ‌ ಕಚೇರಿ ಉದ್ಘಾಟಿಸಿ ಮಾತನಾಡಿದ ನಿವೃತ್ತ ಮುಖ್ಯೋಪಾಧ್ಯಾಯ ಸುಬ್ಬಣ್ಣ ಶೆಟ್ಟಿ, ನೋವು ಅನುಭವಿಸುತ್ತಿರುವವರ ಕಣ್ಣೀರು ಒರೆಸುವ ಕೆಲಸ ನಿಜಕ್ಕೂ ಪುಣ್ಯದ ಕೆಲಸ ಎಂದರು.

    ಇದೇ ಸಂದರ್ಭ 3 ಗ್ರಾಮ ಪಂಚಾಯತ್ ವ್ಯಾಪ್ತಿಯ 5 ಗ್ರಾಮಗಳ ಅಶಕ್ತರಿಗೆ ವಿವಾಹ, ಶೈಕ್ಷಣಿಕ, ವೈದ್ಯಕೀಯ ನೆರವನ್ನು ಹಸ್ತಾಂತರಿಸಲಾಯಿತು.

    ಮುಖ್ಯ ಅತಿಥಿಗಳಾಗಿ ಉದ್ಯಮಿ ದಿನೇಶ್ ಹೆಗ್ಡೆ ಮೊಳಹಳ್ಳಿ, ಸುಜ್ಞಾನ ಎಜ್ಯುಕೇಶನ್ ಟ್ರಸ್ಟ್ ಪ್ರವರ್ತಕ ರಮೇಶ್ ಶೆಟ್ಟಿ ಉಪಸ್ಥಿತರಿದ್ದರು.

    ಟಸ್ಟ್ ನ‌ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಅಧ್ಯಕ್ಷ ಅರುಣ್ ಕುಮಾರ್ ಹೆಗ್ಡೆ ಸ್ವಾಗತಿಸಿದರು. ಉಮೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ಧನ್ಯವಾದವಿತ್ತರು.

  • ಕಾಳಾವರ :ದೈಹಿಕ ಶಿಕ್ಷಣ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಅರುಣ್ ಕುಮಾರ್ ರಿಗೆ ಬೀಳ್ಕೊಡುಗೆ.

    ಕಾಳಾವರ :ದೈಹಿಕ ಶಿಕ್ಷಣ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಅರುಣ್ ಕುಮಾರ್ ರಿಗೆ ಬೀಳ್ಕೊಡುಗೆ.

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ :ಸರ್ಕಾರಿ ಪ್ರೌಢಶಾಲೆ ಕಾಳಾವರದಲ್ಲಿ ಸುಮಾರು 19 ವರ್ಷಗಳ ಕಾಲ ದೈಹಿಕ ಶಿಕ್ಷಣ ಶಿಕ್ಷಕರಾಗಿ ಸೇವೆ ಸಲ್ಲಿಸಿ ಭಡ್ತಿ ಹೊಂದಿ ಹೊನ್ನಾವರ ತಾಲೂಕಿನ ಪರಿವೀಕ್ಷಣಾಧಿಕಾರಿಯಾಗಿ ವರ್ಗಾವಣೆ ಹೊಂದಿರುತ್ತಾರೆ. ಈ ಸಂದರ್ಭದಲ್ಲಿ ಶಾಲಾ ಶಿಕ್ಷಕ ವೃಂದ, ವಿದ್ಯಾರ್ಥಿಗಳು ಹಾಗೂ ಎಸ್ ಡಿ ಎಂ ಸಿ ಯವರ ಪರವಾಗಿ ಬೀಳ್ಕೊಡುಗೆ ಸಮಾರಂಭ ನಡೆಯಿತು.

    ಸಭೆಯ ಅಧ್ಯಕ್ಷತೆಯನ್ನು ಮುಖ್ಯೋಪಾಧ್ಯಾಯಿನಿಯಾಗಿ ಭಡ್ತಿ ಹೊಂದಿರುವ ಗಾಯತ್ರಿ ಅಡಿಗರು ವಹಿಸಿದ್ದರು. ಕಾಳಾವರ ಗ್ರಾಮ ಪಂಚಾಯಿತಿ ಸದಸ್ಯರಾದ ಜಯಪ್ರಕಾಶ್ ಶೆಟ್ಟಿಯವರು ಅರುಣ್ ಕುಮಾರ್ ರನ್ನು ಸನ್ಮಾನಿಸಿ ಶುಭ ಹಾರೈಸಿದರು.

    ವಿದ್ಯಾರ್ಥಿಗಳು ಶಿಕ್ಷಕ ಅರುಣ್ ಅವರ ಜೊತೆಗಿನ ಭಾವನಾತ್ಮಕ ಸಂಬಂಧ ಹಂಚಿಕೊಂಡಾಗ ಸಭೆಯಲ್ಲಿ ಚಪ್ಪಾಳೆ ಸದ್ದು ತೇಲಿ ಬಂತು. ಎಲ್ಲಾ ಶಿಕ್ಷಕರು ತಮ್ಮ ಸೇವೆಯ ಸಂದರ್ಭದ ವಿಶೇಷ ಘಟನೆಗಳನ್ನು ಹಂಚಿಕೊಂಡು ಭಾವುಕರಾದರು. ಸನ್ಮಾನಕ್ಕೆ ಉತ್ತರಿಸುತ್ತಾ ತಮ್ಮ ಸುಧೀರ್ಘ ಸೇವೆಯಲ್ಲಿ ಸಹಕರಿಸಿದ ಎಲ್ಲರನ್ನೂ ನೆನಪಿಸಿಕೊಂಡರು. ಸಭೆಯಲ್ಲಿ ಎಸ್ ಡಿ ಎಂ ಸಿ ಸದಸ್ಯರಾದ ಸತೀಶ್ ಜೋಗಿಯವರು ಉಪಸ್ಥಿತರಿದ್ದರು.

    ಶಿಕ್ಷಕ ಗಣೇಶ ಶೆಟ್ಟಿಗಾರ್ ವಂದಿಸಿದರು. ರವಿರಾಜ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಬಳಿಕ ಶಾಲಾ ವಿದ್ಯಾರ್ಥಿ , ವಿದ್ಯಾರ್ಥಿನಿಯರು ಕೇಕ್ ಕಟಿಂಗ್ ವ್ಯವಸ್ಥೆ ಮಾಡಿದ್ದು ಅನಿರೀಕ್ಷಿತವಾಗಿ ಅರುಣ್ ಕುಮಾರ್ ಪ್ರೀತಿ ಹಂಚಿಕೊಂಡಿದ್ದು ವಿಶೇಷವಾಗಿತ್ತು.

  • ಕುಂದಾಪುರ :ಸಮಾಜ ಸೇವಕ ಹುಸೇನ್ ಹೈಕಾಡಿ ಅವರಿಗೆ ಸನ್ಮಾನ

    ಕುಂದಾಪುರ :ಸಮಾಜ ಸೇವಕ ಹುಸೇನ್ ಹೈಕಾಡಿ ಅವರಿಗೆ ಸನ್ಮಾನ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ : ಜೆಸಿಐ ಕುಂದಾಪುರ ಸಿಟಿಯಾ ಪದ ಪ್ರದಾನ ಸಮಾರಂಭದಲ್ಲಿ ಸುಮಾರು 25 ವರ್ಷಗಳಿಂದ ಸಮಾಜ ಸೇವೆ ಯಲ್ಲಿ ತೊಡಗಿಸಿ ಕೊಂಡು ರಕ್ತದಾನ ಹಾಗು ರಕ್ತದಾನ ಶಿಬಿರ ಆಯೋಜನೆ ವಿವಿಧ ಸಂಘ ಸಂಸ್ಥೆ ಲಗಳ ಜೊತೆಗೂಡಿ ಮನೆ ನಿರ್ಮಾಣ, ಮದುವೆಗೆ ಸಹಕಾರ, ವೈದ್ಯಕೀಯಕ್ಕೆ ಸಹಕಾರ, ಶಿಕ್ಷಣದಲ್ಲಿ ವಂಚಿತರಾದವರನ್ನು ಮತ್ತೆ ಅವರನ್ನು ಕರೆ ತಂದು ಶಿಕ್ಷಣಕ್ಕೆ ಸಹಕಾರ, ಕೋವಿಡ್ 19 ಸಂದರ್ಭದಲ್ಲಿ ಸುಮಾರು 2ವರ್ಷಗಳ ಕಾಲ ಸುಮಾರು 15 ಸಾವಿರ ಜನರಿಗೆ ಹಸಿದವರಿಗೆ ಊಟ 7ಸಾವಿರ ಜನರಿಗೆ ಮಾಸ್ಕ್ ವಿತರಣೆ, 500 ಕುಟುಂಬ ಗಳಿಗೆ ರೇಶನ್ ಕಿಟ್ ಜೆಸಿಐ ಕುಂದಾಪುರ ಸಿಟಿಯಾ ಸಹಯೋಗದೊಂದಿಗೆ ವಿತರಣೆ, ವಿದ್ಯಾರ್ಥಿಗಳಿಗೆ ತರಬೇತಿ ಕಾರ್ಯಕ್ರಮ ಆಯೋಜನೆ, ಸಾಧನೆ ಗೈದಾ ಸಾಧಕರನ್ನು ಗೌರವಿಸುವ ಕಾರ್ಯಕ್ರಮ, ಹೀಗೆ ಹತ್ತು ಹಲವು ಸಮಾಜಮುಖಿ ಕಾರ್ಯಕ್ರಮ ಮಾಡಿದ ಹಾಗು ಭಾರತೀಯ ಜೇಸಿಸ್ ನ ವಲಯ 15 ರ ಎಸ್ ಎಮ್ ಎ ವೈಸ್ ಛೇರ್ಮನ್ ಆಗಿ ಆಯ್ಕೆಗೊಂಡ ಹುಸೇನ್ ಹೈಕಾಡಿಯವರಿಗೆ ಕೋಟೇಶ್ವರ ದ ಸುಮೇದಾ ಓಪನ್ ಪಾರ್ಕ್ ನ ಸಭಾಂಗಣದಲ್ಲಿ ಸನ್ಮಾನಿಸಲಾಯಿತು.

    ಈ ಸಂದರ್ಭದಲ್ಲಿ ಜನತಾ ಪಿ. ಯು.ಕಾಲೇಜ್ ನ ಆಡಳಿತ ನಿರ್ದೇಶಕರಾದ ಗಣೇಶ್ ಮೊಗವೀರ, ಜೆಸಿಐ ಇಂಡಿಯಾದ ರಾಷ್ಟ್ರೀಯ ಉಪಾಧ್ಯಕ್ಷರಾದ ಕೆ. ಕಾರ್ತಿಕೇಯ ಮಧ್ಯಸ್ತ, ವಲಯ ಉಪಾಧ್ಯಕ್ಷ ವಿಗ್ನೇಶ್ ಕಾರ್ಕಳ, ಪೂರ್ವ ಉಪಾಧ್ಯಕ್ಷ ಅಭಿಲಾಶ್, ನಿಕಟ ಪೂರ್ವ ಅಧ್ಯಕ್ಷ ಡಾ.ಸೋನಿ, ಪೂರ್ವ ಅಧ್ಯಕ್ಷರಾದ ರಾಘವೇಂದ್ರ ಚರಣ್ ನಾವಡ, ಜಯಚಂದ್ರ ಶೆಟ್ಟಿ, ನಾಗೇಶ್ ನಾವಡ, ಪ್ರಶಾಂತ್ ಹವಾಲ್ದಾರ್, ಶ್ರೀಧರ್ ಸುವರ್ಣ, ಮಂಜುನಾಥ್ ಕಾಮತ್, ವಿಜಯ ಬಂಡಾರಿ, ಗಿರೀಶ್ ಹೆಬ್ಬಾರ್, ಚಂದ್ರಕಾಂತ್, ಜೇಸಿರೇಟ್ ಅಧ್ಯಕ್ಷೆ ರೇಷ್ಮಾ ಕೋಟ್ಯಾನ್, ಯುವ ಜೇಸಿ ಛೇರ್ಮನ್ ಕಿರಣ್, ಸದಸ್ಯರಾದ ಜಯಶೀಲ ಪೈ, ಸರೋಜ, ಪ್ರೇಮ, ಅನಿತಾ ಡಿ ಸೋಜಾ, ರಾಘವೇಂದ್ರ ಶೇಟ್, ಜಗದೀಶ್, ವೇದಿಕೆಯಲ್ಲಿ ಉಪಸ್ಥಿತರಿದ್ದರು.

    ಜೆಸಿಐ ಕುಂದಾಪುರ ಸಿಟಿ ಯಾ ಅಧ್ಯಕ್ಷ ರಾಘವೇಂದ್ರ ಕುಲಾಲ್ ಹೆಮ್ಮಾಡಿ ಸ್ವಾಗತಿಸಿ, ಕಾರ್ಯದರ್ಶಿ ಮಹಾರುದ್ರ ವಂದಿಸಿದರು,

  • ಕುಂದಾಪುರ: ಮೂಡ್ಲಕಟ್ಟೆ ಐಎಂಜೆ ವಿಜ್ಞಾನ ಮತ್ತು ವಾಣಿಜ್ಯ ಸಂಸ್ಥೆಯಲ್ಲಿ ಯಂಗ್ ಲೀಡರ್ಸ್ ಅವಾರ್ಡ್ – ಎಸ್.ಆರ್.ಎಸ್. ಕಾಲೇಜಿನ ಕೃತಿ ಪ್ರಥಮ

    ಕುಂದಾಪುರ: ಮೂಡ್ಲಕಟ್ಟೆ ಐಎಂಜೆ ವಿಜ್ಞಾನ ಮತ್ತು ವಾಣಿಜ್ಯ ಸಂಸ್ಥೆಯಲ್ಲಿ ಯಂಗ್ ಲೀಡರ್ಸ್ ಅವಾರ್ಡ್ – ಎಸ್.ಆರ್.ಎಸ್. ಕಾಲೇಜಿನ ಕೃತಿ ಪ್ರಥಮ

    ಕುಂದಾಪುರ ಮಿರರ್ ಸುದ್ದಿ…
    ಕುಂದಾಪುರ: ಇಂದಿನ ಯುಗ ಸ್ಪರ್ಧಾತ್ಮಕ ಯುಗ, ವಿಶ್ವದಾದ್ಯಂತ ಸ್ಪರ್ಧೆ ಇರುತ್ತದ. ಸಂಸ್ಥೆ ಗಟ್ಟಿಯಾಗಿ ಬೆಳೆಸಲಿಕ್ಕೆ ಸಾಕಷ್ಟು ಸವಾಲುಗಳು ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಇರುತ್ತದೆ. ಸ್ಪರ್ಧೆಯಲ್ಲಿ ಭಾಗವಹಿಸುವುದು ಮುಖ್ಯ, ಯಾರು ಸೋಲುದಿಲ್ಲ, ಭಾಗವಹಿಸುವುದರ ಮೂಲಕ ನಮ್ಮಲ್ಲಿ ಆತ್ಮ ವಿಶ್ವಾಸ ಹೆಚ್ಚುವುದರ ಮೂಲಕ ಮುಂದಿನ ದಿನಗಳಲ್ಲಿ ಗೆಲುವಿಗೆ ಸಹಕಾರಿಯಾಗುತ್ತದೆ. ನಾವು ಲೀಡರ್ ಆಗಬೇಕಾದರೆ ನಮ್ಮಲ್ಲಿ ಸಂವಹನ ಕೌಶಲ್ಯವನ್ನು ನಮ್ಮ ಜೀವನದಲ್ಲಿ ಅಳವಡಿಸಬೇಕು ಎಂದು ಭಂಡಾರ್ಕಾರ್ಸ್ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ನಾರಾಯಣ ಶೆಟ್ಟಿ ಹೇಳಿದರು.
    ಕುಂದಾಪುರದ ಐಎಂಜೆ ವಿಜ್ಞಾನ ಮತ್ತು ವಾಣಿಜ್ಯ ಸಂಸ್ಥೆ ಮೂಡ್ಲಕಟ್ಟೆ, ಇಲ್ಲಿ ಸ್ವಾಮಿ ವಿವೇಕಾನಂದರ ಜನ್ಮದಿನದ ಆಚರಣೆಯೊಂದಿಗೆ ‘ಐ.ಎಂ.ಜೆ.ಐ. ಎಸ್.ಸಿ.ಯಂಗ್ ಲೀಡರ್ ಅವಾರ್ಡ್ 2024’ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
    ಮೊದಲ ಸುತ್ತಿನಲ್ಲಿ ನಡೆದ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಯ 22 ಕ್ಕೂ ಕಾಲೇಜಿನ 200 ಕ್ಕೂ ಹೆಚ್ಚಿನ ವಿದ್ಯಾರ್ಥಿಗಳ ಪೈಕಿ ಅಂತಿಮ ಹಂತದ ಸುತ್ತಿಗೆ ಆಯ್ಕೆಯಾದ 15 ಕಾಲೇಜಿನ 45 ವಿದ್ಯಾರ್ಥಿಗಳು ಅಂತಿಮ ಸುತ್ತಿನ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
    ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಲಯನ್ ನೀಲಕಂಠ ಎಂ ಹೆಗ್ಡೆ ಲಯನ್ಸ್ ಕ್ಲಬ್ ನ ಹಿಂದಿನ ಜಿಲ್ಲಾ ಗವರ್ನರ್ ಹಾಗೂ ಅಂತರಾಷ್ಟ್ರೀಯ ಪ್ರೇರಕ ತರಬೇತುದಾರರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, “ಸ್ವಾಮಿ ವಿವೇಕಾನಂದರು ಭಾರತ, ಭಾರತ ಸಂಸ್ಕೃತಿಯ ಕುರಿತು ಜಗತ್ತಿಗೆ ತಿಳಿಸಿದಂತಹ ಮಹಾಪುರುಷರು. ಸ್ವಾಮಿ ವಿವೇಕಾನಂದರ ತತ್ವ, ಆದರ್ಶಗಳನ್ನು ಅವರ ಬದುಕಿನ ಜೀವನವನ್ನು ಅರ್ಥೈಸಿಕೊಂಡರೆ ಇಡೀ ಜಗತ್ತನ್ನು ಅರ್ಥೈಸಿಕೊಂಡ ಹಾಗೆ. ವಿದ್ಯಾರ್ಥಿಗಳನ್ನು ಉತ್ತೇಜಿಸುವ ಕಾರ್ಯಕ್ರಮವನ್ನು ನಮ್ಮ ಈ ಸಂಸ್ಥೆ ಮಾಡಿರುವುದು ನಿಜಕ್ಕೂ ಶ್ಲಾಘನೀಯ. ವಿದ್ಯಾರ್ಥಿಗಳು ನಾಳೆಯ ಬದುಕಿನ ಕನಸನ್ನು ಕಟ್ಟಿಕೊಳ್ಳಿ. ಕೇವಲ ಗೆಲುವಿನ ಹಿಂದೆ ಅಲ್ಲ, ಗೆಲುವು ಸಿಗುವವರೆಗೂ ಪ್ರಯತ್ನ ಪಡಬೇಕು. ಹಾಗೆ ತಮ್ಮ ನಂಬಿಕೆ, ವಿಶ್ವಾಸಗಳು ಅರಿಷಡ್ವರ್ಗಗಳನ್ನು ಬಿಟ್ಟು ತತ್ವದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ ಮತ್ತು ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿದೆ ಅವಕಾಶಗಳನ್ನು ರೂಪಿಸಿಕೊಂಡು ಜೀವನವನ್ನು ಸಾರ್ಥಕ ಗೊಳಿಸಿ ಎಂದರು.
    ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. 5 ಸಾವಿರ ನಗದು ಪ್ರಥಮ ಬಹುಮಾನ ಎಸ್. ಆರ್. ಎಸ್. ಕಾಲೇಜು ಉಡುಪಿ ಇದರ ಕೀರ್ತಿ ಪಡೆದುಕೊಂಡರು. ಎರಡು ಸಾವಿರ ರೂಪಾಯಿ ನಗದು ಎರಡನೇ ಬಹುಮಾನ ಎಸ್ ಆರ್ ಎಸ್ ಕಾಲೇಜು ಉಡುಪಿ ಇದರ ಕೈತ್ಲಿನ್ , ಮೂರನೇ ಬಹುಮಾನ ಸಿದ್ಧಾರ್ಥ ಪಿಯು ಕಾಲೇಜ್ ಭಟ್ಕಳ ಇದರ ವಿದ್ಯಾರ್ಥಿನಿ ರಚನಾ ಆಚಾರ್ಯ ಪಡೆದುಕೊಂಡರು.
    ಬ್ರಾಂಡ್ ಬಿಲ್ಡಿಂಗ್ ನಿರ್ದೇಶಕ ಡಾ. ರಾಮಕೃಷ್ಣ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಉಪಪ್ರಾಂಶುಪಾಲ ಪ್ರೊ. ಜಯಶೀಲ ಕುಮಾರ್ ವರದಿ ವಾಚಿಸಿದರು. ಸಂಸ್ಥೆಯ ಪ್ರಾಂಶುಪಾಲೆ ಡಾ| ಪ್ರತಿಭಾ ಪಟೇಲ್ ಎಮ್.ಉಪಸ್ಥಿತರಿದ್ದರು.  ಉಪಪ್ರಾಂಶುಪಾಲ ಪ್ರೊ ಜಯಶೀಲ ಕುಮಾರ್ ಕಾರ್ಯಕ್ರಮದ ವರದಿ ವಾಚಿಸಿದರು. ಅಸಿಸ್ಟೆಂಟ್ ಪ್ರೊಫೆಸರ್ ಸುಮನ ಸಂಜೆಯ ಕಾರ್ಯಕ್ರಮ ನಿರೂಪಿಸಿದರು. ಸ್ವರ್ಣ ನಾರಾಯಣಿ ವಂದಿಸಿದರು.
  • ಕುಂದಾಪುರ: ರೈಲುನಿಲ್ದಾಣದಲ್ಲಿ ಪ್ರಯಾಣಿಕರ ಶೆಲ್ಟರ್ ಹಾಗೂ ವಿವಿಧ ಕೊಡುಗೆಗಳ ಉದ್ಘಾಟನೆ

    ಕುಂದಾಪುರ: ರೈಲುನಿಲ್ದಾಣದಲ್ಲಿ ಪ್ರಯಾಣಿಕರ ಶೆಲ್ಟರ್ ಹಾಗೂ ವಿವಿಧ ಕೊಡುಗೆಗಳ ಉದ್ಘಾಟನೆ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ : ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿಯು ಆಸಕ್ತಿ ವಹಿಸಿ ದಾನಿಗಳ ಮೂಲಕ ನಿಲ್ದಾಣಕ್ಕೆ ಅಗತ್ಯವಿರುವ ವಿವಿಧ ಸೌಕರ್ಯಗಳನ್ನು ಒದಗಿಸಿರುವುದು ಶ್ಲಾಘನೀಯ ಕಾರ್‍ಯ. ಮುಂದಿನ ದಿನಗಳಲ್ಲಿ ದಾನಿಗಳಿಂದ ಮಾತ್ರವಲ್ಲದೆ ಸರಕಾರದಿಂದಲೂ ಈ ನಿಲ್ದಾಣವನ್ನು ಉತ್ತಮವಾಗಿಸಲು ಸಚಿವರಲ್ಲಿಯೂ ಮನವಿ ಸಲ್ಲಿಸಲಾಗುವುದು ಎಂದು ಶಾಸಕ ಕಿರಣ್ ಕುಮಾರ್ ಕೊಡ್ಗಿ ಹೇಳಿದ್ದಾರೆ.

    ಶುಕ್ರವಾರ ಸಂಜೆ ಮೂಡ್ಲಕಟ್ಟೆಯ ರೈಲು ನಿಲ್ದಾಣದಲ್ಲಿ ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ಶ್ರೀ ರಾಮ್ ಗ್ರಾನೈಟ್ಸ್ ಕೊಡಮಾಡಿದ ಪ್ರಯಾಣಿಕರ ಶೆಲ್ಟರ್ ಸಹಿತ ವಿವಿಧ ಕೊಡುಗೆಗಳನ್ನು ಉದ್ಘಾಟಿಸಿ ಮಾತನಾಡಿದರು.

    ವಿವಿಧ ಕೊಡುಗೆಗಳನ್ನು ಉದ್ಘಾಟಿಸುತ್ತಿರುವುದು ಸಂತೋಷವಾಗುತ್ತಿದೆ. ರೈಲು ನಿಲ್ದಾಣ ಅತ್ಯಂತ ಚೊಕ್ಕಟವಾಗಿರಬೇಕು. ಫ್ಲಾಟ್‌ಫಾರ್ಮ್‌ಗಳು ಹಿರಿಯರಿಗೂ ಸಹ ಅನುಕೂಲ ಆಗುವಂತಿರಬೇಕು. ನಮ್ಮ ಊರು ಚೆಂದ ಇರಬೇಕಾದರೆ, ರೈಲು ನಿಲ್ದಾಣಗಳು ಉತ್ತಮವಾಗಿರಬೇಕು. ಅದಕ್ಕಾಗಿ ಹಿತರಕ್ಷಣಾ ಸಮಿತಿ ಶ್ರಮಿಸುತ್ತಿರುವುದು ಒಳ್ಳೆಯ ಕಾರ್‍ಯ ಎಂದು ಡಿಜಿಟಲ್ ನಾಮಫಲಕ ಕೊಡುಗೆಯಿತ್ತ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ ಸಿ. ಕುಂದರ್ ಹೇಳಿದರು.

    ಕೊಂಕಣ್ ರೈಲ್ವೆಯ ಪಿಆರ್‌ಒ ಸುಧಾ ಕೃಷ್ಣಮೂರ್ತಿ ಪ್ರಯಾಣಿಕರ ಪ್ರಯೋಜನಕ್ಕಾಗಿ ಹಿತರಕ್ಷಣಾ ಸಮಿತಿ ಹಾಗೂ ದಾನಿಗಳ ಸಹಕಾರದಿಂದ ಕುಂದಾಪುರ ನಿಲ್ದಾಣ ಅಭಿವೃದ್ಧಿಯಾಗುತ್ತಿದೆ. ಇನ್ನಷ್ಟು ಪ್ರಯಾಣಿಕರ ಶೆಲ್ಟರ್ ಅಗತ್ಯವಿದೆ. ಈ ನಿಲ್ದಾಣಕ್ಕೆ ಅಮೃತ್ ಭಾರತ್ ಯೋಜನೆ ಹಾಗೂ ಇಲ್ಲಿ ವಂದೇ ಭಾರತ್ ರೈಲು ನಿಲುಗಡೆ ಬಗ್ಗೆ ರೈಲ್ವೇ ಮಂಡಳಿ ತೀರ್ಮಾನ ಕೈಗೊಳ್ಳಬೇಕಿದೆ ಎಂದರು.
    ದೇಶದ 100 ಕಡೆಗಳಿಂದ ಅಯೋಧ್ಯೆಗೆ ರೈಲು ಸಂಚಾರ ಆರಂಭಗೊಳ್ಳಲಿದ್ದು, ಕರಾವಳಿಯಿಂದಲೂ ಆರಂಭಿಸಬೇಕು ಎನ್ನುವುದು ನಮ್ಮ ಬೇಡಿಕೆ. ಪೇಜಾವರ ಶ್ರೀಗಳ ಸಹಕಾರದೊಂದಿಗೆ, ಸಂಸದರು, ಶಾಸಕರು ಪ್ರಯತ್ನವೂ ಬೇಕಾಗಿದೆ. ಅಮೃತ್ ಭಾರತ್ ಯೋಜನೆಯಡಿ ಅಭಿವೃದ್ಧಿಯಾಗಲಿ ಎಂದು ಸಮಿತಿಯ ಅಧ್ಯಕ್ಷ ಸಮಿತಿಯ ಅ‘ಕ್ಷ ಗಣೇಶ್ ಪುತ್ರನ್ ಹಾಗೂ ಗೌತಮ್ ಶೆಟ್ಟಿ ಒತ್ತಾಯಿಸಿದರು.

    ಕೊಂಕಣ್ ರೈಲ್ವೆಯ ಸಹಾಯಕ ಸಂಚಾರಿ ನಿಯಂತ್ರಕ ವಿನಯ್, ದಾನಿಗಳಾದ ಶ್ರೀರಾಮ್ ಗ್ರಾನೈಟ್ಸ್ ಕೋಜು ರಾಮ್ ದೇವಸ್ಯ, ಐಲವ್ ಕುಂದಾಪ್ರ ನಾಮಫಲಕ ನೀಡಿದ ನೇಸರ ಸೈನ್ ಕ್ರಿಯೇಟರ್‍ಸ್ ಬೆಂಗಳೂರಿನ ಬಿ.ಎನ್. ನರಸಿಂಹ, ರೆಡ್‌ಕ್ರಾಸ್ ಚೇರ್‌ಮೆನ್ ಜಯಕರ್ ಶೆಟ್ಟಿ, ಕಾರ್‍ಯದರ್ಶಿ ಸೀತಾರಾಮ ಶೆಟ್ಟಿ, ಕೋಶಾಧಿಕಾರಿ ಶಿವರಾಮ ಶೆಟ್ಟಿ, ರೈಲ್ವೆ ಸಮಿತಿಯ ಗೌರವಾಧ್ಯಕ್ಷ ಕೆಂಚನೂರು ಸೋಮಶೇಖರ ಶೆಟ್ಟಿ, ಉಪಾಧ್ಯಕ್ಷ ರಾಜೇಶ ಕಾವೇರಿ, ಪ್ರಮುಖರಾದ ವಿವೇಕ್ ನಾಯಕ್, ರಾಘವೇಂದ್ರ ಶೇಟ್, ನಾಗರಾಜ ಆಚಾರ್, ಪ್ರವೀಣ್ ಕುಮಾರ್, ಉದಯ ಭಂಡಾರ್‌ಕಾರ್, ಧರ್ಮಪ್ರಕಾಶ್, ಸುಧಾಕರ ಶೆಟ್ಟಿ, ಕೆಂಚನೂರು ಕಿಶನ್, ಲಯನ್ಸ್‌ನ ರೀಜನಲ್ ಚೇರ್‌ಮೆನ್ ಏಕನಾಥ್ ಬೋಳಾರ್, ಕೋಟೇಶ್ವರ ರೋಟರಿ ಅಧ್ಯಕ್ಷ ಜಗದೀಶ ಮೊಗವೀರ, ಲಯನ್ಸ್ ಕ್ಲಬ್ ಅಮೃತಧಾರೆ ಅಧ್ಯಕ್ಷೆ ಆಶಾಲತಾ ಶಿವರಾಮ್ ಶೆಟ್ಟಿ, ಸರಸ್ವತಿ ಪುತ್ರನ್, ಕಲ್ಪನಾ ಭಾಸ್ಕರ್, ಮುಂಬಯಿ ಉದ್ಯಮಿ ಮರಾತೂರು ಸುರೇಶ್ ಶೆಟ್ಟಿ, ಮತ್ತಿತರರು ಉಪಸ್ಥಿತರಿದ್ದರು.

  • ಕೋಟ :ಜ.14ರಂದು ಬಾಳೆಬೆಟ್ಟು ಫ್ರೆಂಡ್ಸ್ , ಭಗತ್ ಸಿಂಗ್ ಯುವ ವೇದಿಕೆಯಿಂದ “ಸ್ಪರ್ಶ – 2024” ಕಾರ್ಯಕ್ರಮ

    ಕೋಟ :ಜ.14ರಂದು ಬಾಳೆಬೆಟ್ಟು ಫ್ರೆಂಡ್ಸ್ , ಭಗತ್ ಸಿಂಗ್ ಯುವ ವೇದಿಕೆಯಿಂದ “ಸ್ಪರ್ಶ – 2024” ಕಾರ್ಯಕ್ರಮ

    ಕುಂದಾಪುರ ಮಿರರ್ ಸುದ್ದಿ…

    ಕೋಟ :ಬಾಳೆಬೆಟ್ಟು ಫ್ರೆಂಡ್ಸ್ (ರಿ.)ಬಾಳೆಬೆಟ್ಟು
    ಭಗತ್ ಸಿಂಗ್ ಯುವ ವೇದಿಕೆ (ರಿ.)ಕೋಟ ಪ್ರಸ್ತುತಿಯಲ್ಲಿ ಜ.14ರಂದು ಭಾನುವಾರ ಸಂಜೆ 6ರಿಂದ ಸ್ಪರ್ಶ – 2024 ಸಾಮರಸ್ಯದ ಭಾವಕೋಶ ಕಾರ್ಯಕ್ರಮ ನಡೆಯಲಿದ್ದು , ಸಾಲಿಗ್ರಾಮದ ಪ್ರಖ್ಯಾತ ವೈದ್ಯರು, ಜನಾನುರಾಗಿ ಡಾ.ಪಿ.ಸಿ ಸುಧಾಕರ್ ರವರಿಗೆ ಹುಟ್ಟೂರ ಸನ್ಮಾನ ನಡೆಯಲಿದ್ದು ಹಲವು ರಾಜಕೀಯ ಮುಖಂಡರು ಮತ್ತು ಉದ್ಯಮಿಗಳು ಆಗಮಿಸಲಿದ್ದಾರೆ, ಹಾಗೂ ಕಾರ್ಯಕ್ರಮದ ಮುಖ್ಯ ಆಕರ್ಷಣೆಯಾಗಿ ಕಾಂತಾರ ಚಲನಚಿತ್ರ ನಾಯಕ ನಟಿ ಸಪ್ತಮಿ ಗೌಡ ಆಗಮಿಸಲಿದ್ದಾರೆ. ಸ್ಥಳೀಯ ಸಮಾಜ ಸೇವಕರು ಮತ್ತು ಕೃಷಿ ಕ್ಷೇತ್ರದ ಸಾಧಕರಿಗೆ ವಿಶೇಷ ಅಭಿನಂದನೆ ಹಾಗೂ ಪರಿಸರದ ಮಾದರಿ ಸಂಘಟನೆಗಳಿಗೆ ಗೌರವ ಸಮರ್ಪಣೆ ನಡೆಯಲಿದ್ದು, ಅಶಕ್ತರಿಗೆ ಸಹಾಯಧನ ವಿತರಣೆ ಮತ್ತು ವಿದ್ಯಾರ್ಥಿಗಳಿಗೆ ಸಹಾಯಧನ ವಿತರಣೆ ನಡೆಯಲಿದೆ.

    ಸ್ಥಳೀಯ ನೃತ್ಯ ತಂಡ KDC ಡ್ಯಾನ್ಸ್ ಧಮಾಕ ಮತ್ತು ಅಂಗನವಾಡಿ ಪುಟಾಣಿಗಳ ನೃತ್ಯ ವೈವಿಧ್ಯ,
    ನಂತರ ಶ್ರೀ ಅನಂತ ಪದ್ಮನಾಭ ಯಕ್ಷಗಾನ ಮಂಡಳಿ ಪೆರ್ಡೂರು ಮತ್ತು ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಕಾಲಮಿತಿ ಯಕ್ಷಗಾನ ಶಿವರಂಜಿನಿ
    ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.