Category: ಸುದ್ದಿ

  • ಚಿತ್ರಪಾಡಿ- ಗಿರಿ ಫ್ರೆಂಡ್ಸ್ ಆಶ್ರಯದಲ್ಲಿ ಶಿಕ್ಷಕರ ದಿನಾಚರಣೆ, ಗುರುವಂದನೆ ಮತ್ತು ಪ್ರತಿಭಾ ಪುರಸ್ಕಾರ

    ಚಿತ್ರಪಾಡಿ- ಗಿರಿ ಫ್ರೆಂಡ್ಸ್ ಆಶ್ರಯದಲ್ಲಿ ಶಿಕ್ಷಕರ ದಿನಾಚರಣೆ, ಗುರುವಂದನೆ ಮತ್ತು ಪ್ರತಿಭಾ ಪುರಸ್ಕಾರ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಗಿರಿಫ್ರೆಂಡ್ಸ್ ಚಿತ್ರಪಾಡಿ ಸಾಲಿಗ್ರಾಮ ಇವರ ಆಶ್ರಯದಲ್ಲಿ ಭಾನುವಾರದಂದು ಚಿತ್ರಪಾಡಿ ಶಾಲೆಯ ಸಭಾಂಗಣದಲ್ಲಿ ಗುರುವಂದನೆ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭ ನಡೆಯಿತು.

    ಈ ಸಂದರ್ಭದಲ್ಲಿ ನಿವೃತ್ತ ಮುಖ್ಯ ಶಿಕ್ಷಕರಾದ ನಿರ್ಮಲ ಇವರಿಗೆ ಗುರುವಂದನೆ ಸಲ್ಲಿಸಲಾಯಿತು.

    2022-23 ರ ಸಾಲಿನ ರಾಜ್ಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ನರೇಂದ್ರ ಕುಮಾರ್ ಕೋಟ ಇವರನ್ನು ಸನ್ಮಾನಿಸಲಾಯಿತು.

    ಎಸ್‍ಎಸ್‍ಎಲ್‍ಸಿಯಲ್ಲಿ 80 ಶೇಕಡಕ್ಕಿಂತ ಹೆಚ್ಚು ಅಂಕಗಳಿಸಿದ ಸ್ಥಳೀಯ 12 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಲ್ಲಿಸಲಾಯಿತು. ಚಿತ್ರಪಾಡಿ ಶಾಲೆಯ ಖೋ ಖೋ ವಿಜೇತ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.

    ಮುಖ್ಯ ಅಭ್ಯಾಗತರಾಗಿ ನಿವೃತ್ತ ಮುಖ್ಯ ಶಿಕ್ಷಕ ಪಿ. ಶ್ರೀಪತಿ ಹೇರ್ಳೆ ಪಾರಂಪಳ್ಳಿ ಹಾಗೂ ಸ.ಹಿ. ಪ್ರಾ. ಶಾಲೆ ಚಿತ್ರಪಾಡಿಯ ಮುಖ್ಯ ಶಿಕ್ಷಕಿ ಶಾಲಿನಿ,ಲೆಕ್ಕಪರಿಶೋಧಕ ಮಾಧವ ಪೈ ಉಪಸ್ಥಿತರಿದ್ದರು.

    ಗಿರಿ ಫ್ರೆಂಡ್ಸ್ ಅಧ್ಯಕ್ಷ ಮಂಜುನಾಥ್ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಸ್ಥಾಪಕ ಅಧ್ಯಕ್ಷ ಸತ್ಯನಾರಾಯಣ ನಾಯರಿ ಯವರು ಪ್ರಾಸ್ತಾವಿಕ ಮಾತನ್ನಾಡಿದರು. ಗೌರವಾಧ್ಯಕ್ಷರಾದ ದಿನೇಶ್ ಆಚಾರ್ಯ ಸ್ವಾಗತಿಸಿದರು, ರಾಮ ನಾಯರಿ ಪ್ರಾರ್ಥನೆಗೈದರು, ಸವಿತಾ ಆಚಾರ್ಯ ಕಾರ್ಯಕ್ರಮವನ್ನು ನಿರೂಪಿಸಿದರು. ಕಾರ್ಯದರ್ಶಿ ಸತೀಶ್ ಆಚಾರ್ಯ ವಂದಿಸಿದರು.

  • ಕುಂದಾಪುರ :ಸಮಾಜ ಸೇವಕ ಮೊಹಮ್ಮದ್ ರಫೀಕ್ ಬಿ. ಎಸ್. ಎಫ್. ಅವರಿಗೆ ಸನ್ಮಾನ

    ಕುಂದಾಪುರ :ಸಮಾಜ ಸೇವಕ ಮೊಹಮ್ಮದ್ ರಫೀಕ್ ಬಿ. ಎಸ್. ಎಫ್. ಅವರಿಗೆ ಸನ್ಮಾನ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ :ಏನ್ ಏನ್ ಓ ಕಮ್ಯೂನಿಟಿ ಸೆಂಟರ್ ಕುಂದಾಪುರ ಇವರ ಆಶ್ರಯದಲ್ಲಿ ಸಮಾಜ ಸೇವಕ
    ಮೊಹಮ್ಮದ್ ರಫೀಕ್ ಬಿ. ಎಸ್. ಎಫ್. ಇವರನ್ನು ಏನ್ ಏನ್ ಓ ಕಮ್ಯೂನಿಟಿ ಸೆಂಟರ್ ಕಚೇರಿ ಯಲ್ಲಿ ಸನ್ಮಾನಿಸಲಾಯಿತು

    ಈ ಸಂದರ್ಭದಲ್ಲಿ ಏನ್ ಏನ್ ಓ ಕಮ್ಯುನಿಟಿ ಸೆಂಟರ್ ಕುಂದಾಪುರ ದ ಉಪಾಧ್ಯಕ್ಷ ಅಬ್ದುಲ್ ಖಾದರ್ ಮೂಡ್ ಗೋಪಾಡಿ. ಪ್ರದಾನ ಕಾರ್ಯದರ್ಶಿ ಹುಸೇನ್ ಹೈಕಾಡಿ. ಸಲಹೆಗಾರರಾದ ಅಬು ಮೊಹಮ್ಮದ್, ಸದ್ಯಸ್ಯರಾದ ಹನೀಫ್ ಗುಲ್ವಾಡಿ, ಉಸ್ಮಾನ್ ಪಳ್ಳಿ,ಝಹಿರ್ ಅಹ್ಮದ್ ಗಂಗೊಳ್ಳಿ, ಎಸ್. ಎಮ್.ಕೆ.ಮನ್ಸೂರ್ ಕೋಡಿ ಮೊದಲಾದವರು ಉಪಸ್ಥಿತರಿದ್ದರು.

  • ಕೋಟ ಅಮೃತೇಶ್ವರಿ ದೇಗುಲದಲ್ಲಿ ಶರನ್ನವರಾತ್ರಿ ಧಾರ್ಮಿಕ, ಸಾಂಸ್ಕ್ರತಿಕ ಕಾರ್ಯಕ್ರಮ

    ಕೋಟ ಅಮೃತೇಶ್ವರಿ ದೇಗುಲದಲ್ಲಿ ಶರನ್ನವರಾತ್ರಿ ಧಾರ್ಮಿಕ, ಸಾಂಸ್ಕ್ರತಿಕ ಕಾರ್ಯಕ್ರಮ

    ಕುಂದಾಪುರ ಮಿರರ್ ‌ಸುದ್ದಿ…

    ಕೋಟ: ಇಲ್ಲಿನ ಕೋಟ ಅಮೃತೇಶ್ವರಿ ಹಲವು ಮಕ್ಕಳ ತಾಯಿ ದೇವಸ್ಥಾನ ಇಲ್ಲಿ ಶರನ್ನವರಾತ್ರಿ ಅಂಗವಾಗಿ ಎರಡನೇ ದಿನದ ಪೂಜಾ ವಿಧಿ ವಿಧಾನಗಳು ವೈಭವದಿಂದ ಜರಗಿತು.

    ಎರಡನೆ ದಿನದ ಪೂಜಾ ಸೇವಾಕರ್ತರಾಗಿ ವಾಸು ಕರ್ಕೇರ ಮತ್ತು ಮಕ್ಕಳು, ಮೂಕಾಂಬಿಕಾ’ ಕೋಡಿ ಹೊಸಬೆಂಗ್ರೆ, ಪ್ರಕಾಶ್ ಶೆಟ್ಟಿ ಹೋಟೆಲ್ ಶ್ರೀ ರೇಣುಕಾದರ್ಶಿನಿ ಹಾವೇರಿ ದುರ್ಗಾಹೋಮ, ಅನ್ನಸಂತರ್ಪಣೆ ಕಾರ್ಯದಲ್ಲಿ ಭಾಗಿಯಾದರು.

    ಧಾರ್ಮಿಕ ವಿಧಿವಿಧಾನಗಳನ್ನು ವೇ.ಮೂ ಮಧುಸೂದನ ಬಾಯರಿ ನೇತ್ರತ್ವದಲ್ಲಿ ನಡೆಯಿತು.

    ಶ್ರೀ ದೇವಳದ ಆಡಳಿತಾಧಿಕಾರಿ ಪ್ರಶಾಂತ್ ಕುಮಾರ್ ಶೆಟ್ಟಿ, ಆಡಳಿತ ಮಂಡಳಿ ಅಧ್ಯಕ್ಷ ಆನಂದ್ ಸಿ ಕುಂದರ್ ,ಸದಸ್ಯರಾದ ಸತೀಶ್ ಹೆಗ್ಡೆ,ಚಂದ್ರ ಪೂಜಾರಿ,ಸುಬ್ರಾಯ ಆಚಾರ್ಯ ,ಕೋಟ ಗ್ರಾ.ಪಂ ಸದಸ್ಯ ಚಂದ್ರ ಆಚಾರ್,ದೇವಳದ ಮ್ಯಾನೇಜರ್ ಗಣೇಶ್ ಹೊಳ್ಳ ಇದ್ದರು.ಶರನ್ನವರಾತ್ರಿ ಅಂಗವಾಗಿ ನೂರಾರು ಭಕ್ತರು ದೇವಿಯ ದರ್ಶನ ಪಡೆದರು.ಶ್ರೀದೇವಿ ಮಹಾಗೌರಿ ರೀತಿಯಲ್ಲಿ ಶೃಂಗರಿಸಲಾಗಿತ್ತು.ದೇಗುಲದ ಅರ್ಚಕ ದಾಮೋದರ ಜೋಗಿ,ಗಿರೀಶ್ ಜೋಗಿ,ದೀಕ್ಷಿತ್ ಜೋಗಿ ಮತ್ತಿತರರು ದೇವಿಯ ಪೂಜಾ ಕಾರ್ಯದಲ್ಲಿ ಭಾಗಿಯಾದರು.ಸಂಜೆ ಪಂಚವರ್ಣ ಮಹಿಳಾ ಮಂಡಳ ಭಜನಾ ತಂಡ, ಕೋಟ ಇವರಿಂದ ಭಜನಾ ಕಾರ್ಯಕ್ರಮ,ರಾತ್ರಿ ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ ಇಲ್ಲಿನ ಕಲಾವಿದರಿಂದ ಭೀಷ್ಮಪರ್ವ ಯಕ್ಷಗಾನ ಪ್ರದರ್ಶನಗೊಂಡಿತು.

  • ಕುಂದಾಪುರ ಹಾಗೂ ಬೈಂದೂರು ಕ್ಷೇತ್ರ :ಅಂಗವೈಕಲ್ಯತೆಯಿರುವ ಮಕ್ಕಳ ಪಾಲಕರ ಸಮಾಲೋಚನಾ ಸಭೆ

    ಕುಂದಾಪುರ ಹಾಗೂ ಬೈಂದೂರು ಕ್ಷೇತ್ರ :ಅಂಗವೈಕಲ್ಯತೆಯಿರುವ ಮಕ್ಕಳ ಪಾಲಕರ ಸಮಾಲೋಚನಾ ಸಭೆ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ :ದಿ ಕನ್ಸನ್ರ್ಡ್ ಫಾರ್ ವರ್ಕಿಂಗ್ ಚಿಲ್ಡ್ರನ್ ನೇತೃತ್ವದಲ್ಲಿ ಕುಂದಾಪುರ ಹಾಗೂ ಬೈಂದೂರು ಕ್ಷೇತ್ರ: ಅಂಗವೈಕಲ್ಯತೆಯಿರುವ ಮಕ್ಕಳ ಪಾಲಕರ ಸಮಾಲೋಚನಾ ಸಭೆ ಕುಂದಾಪುರ ತಾಲೂಕು ಪಂಚಾಯತ್‍ನ ಸಭಾಭವನದಲ್ಲಿ ಆಯೋಜಿಸಲಾಗಿತ್ತು.

    ಶಾಸಕ ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ಅಂಗವೈಕಲ್ಯತೆ ಹೊಂದಿರುವವರಿಗೆ ಸಿಗುವ ಸವಲತ್ತುಗಳನ್ನು ಪಡೆಯಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡಲಾಗುವುದು. ಈಗಾಗಲೇ ಅಂಗವೈಕಲ್ಯತೆ ಹೊಂದಿರುವ ಮಕ್ಕಳ ಪೋಷಕರು ಸೂಚಿಸಿರುವ ಮನವಿಗಳು ಹಾಗೂ ಮಾಡಿರುವ ಶಿಫಾರಸ್ಸುಗಳನ್ನು ಈಡೇರಿಸಲು ಸರ್ಕಾರದ ಗಮನ ಸಳೆಯಲಾಗುವುದು. ಸಂಬಂಧಪಟ್ಟ ಇಲಾಖೆಗಳು ಕೂಡಾ ಮಾನವಿಯ ನೆಲೆಯಲ್ಲಿ ಕಾರ್ಯನಿರ್ವಹಿಸಬೇಕು ಎಂದರು.

    ಬೈಂದೂರು ಕ್ಷೇತ್ರದ ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಮಾತನಾಡಿ ಅಂಗವೈಕಲ್ಯತೆ ಎದುರಿಸುತ್ತಿರುವ ಮಕ್ಕಳ ಬೇಡಿಕೆಯನ್ನು ಗಮನಿಸಿದ್ದೇನೆ. ಗೋಳಿಹೊಳೆಯ ಸಮೀಪ ವಿಕಲಚೇತನ ಮಕ್ಕಳನ್ನು ಹೊತ್ತುಕೊಂಡು ಹಳ್ಳ ದಾಟಬೇಕು, ಇಲ್ಲಿ ಕಾಲುಸಂಕ ನಿರ್ಮಾಣಕ್ಕೆ ಆಧ್ಯತೆಯಲ್ಲಿ ಒತ್ತು ನೀಡಲಾಗುವುದು ಎಂದರು.

    ಕುಂದಾಪುರ-ಬೈಂದೂರು ತಾಲೂಕಿನಲ್ಲಿ ಸುಮಾರು 274 ಮಕ್ಕಳು ಅಂಗವೈಕಲ್ಯತೆಯಿಂದ ಬಳಲುತ್ತಿದ್ದಾರೆ. ನಾಡ ಗ್ರಾಮದಲ್ಲಿ 17, ಕಾವ್ರಾಡಿ ಗ್ರಾಮದಲ್ಲಿ 13, ಹೊಸಾಡು, ಹಕ್ಲಾಡಿ ಗ್ರಾಮ, ಶಂಕರನಾರಾಯಣ ಗ್ರಾಮದಲ್ಲಿ 12 ಮಕ್ಕಳು ಅಂಗವೈಕಲ್ಯತೆಯಿಂದ ಬಳಲುತ್ತಿದ್ದಾರೆ. ಈ ಕುಟುಂಬಗಳು ತೀವ್ರ ಬಡತನವನ್ನು ಹೊಂದಿದೆ. ಅಂಗವೈಕಲ್ಯತೆಗೆ ಇರುವ ಮಕ್ಕಳಿಗೆ ಅಂಗವೈಕಲ್ಯತೆಯ ಅನುಪಾತಕ್ಕೆ ಅನುಸಾರವಾಗಿ ಬರುವ ಪ್ರಸ್ತುತ ಮಾಸಾಶನ ರೂ.800-1400. ಪ್ರತಿ ಮಗುವಿನ ಸಮಸ್ಯೆಗನುಗುಣವಾಗಿ ಪ್ರತಿ ತಿಂಗಳು ಔಷಧಕ್ಕೆ ಕನಿಷ್ಠ 1000-5000ಕ್ಕೂ ಮಿಕ್ಕಿ ಆಗುತ್ತದೆ. ಈಗ ಬರುತ್ತಿರುವ ಮಾಸಾಶನ ಯಾವುದೇ ಖರ್ಚಿಗೂ ಕೂಡಾ ಸಾಕಾಗುತ್ತಿಲ್ಲ. ಅಂಗವೈಕಲ್ಯತೆಯಿಂದ ಬಳಲುವ ಮಕ್ಕಳನ್ನು ನೋಡಿಕೊಳ್ಳಲು ನಿತ್ಯವು ಒಬ್ಬರ ಅವಶ್ಯಕತೆ ಇರುತ್ತದೆ. ಏಕ ಪೋಷಕರಿರುವ ಅಥವಾ ಒಬ್ಬರ ದುಡಿಮೆಯಿಂದಲೇ ನಡೆಯುವಂತಹ ಕುಟುಂಬಗಳು ತುಂಬಾ ಸಮಸ್ಯೆ ಅನುಭವಿಸುತ್ತಿವೆ. ಅದ್ದರಿಂದ ವೈಕಲ್ಯತೆಯ ಅನುಪಾತಕ್ಕೆ ಅನುಸಾರವಾಗಿ ಮಾಸಾಸನವನ್ನು ಹೆಚ್ಚಿಸಬೇಕು. ಗ್ರಾಮ ಪಂಚಾಯತ್ ಅನುದಾನದಲ್ಲಿ ನೀಡುವ ಶೇ.5% ಅಂಗವಿಕಲರಿಗೆ ನೀಡುವ ಅನುದಾನದಲ್ಲಿ ಮಕ್ಕಳಿಗೆ ಅಧ್ಯತವಾರು ಅನುದಾನ ನೀಡಬೇಕು, ಪ್ರತ್ಯೇಕವಾದ ವಿಶೇಷ ಅನುದಾನ ನೀಡಬೇಕು, ಎಪಿಎಲ್ ಮತ್ತು ಬಿಪಿಎಲ್ ಪಡಿತರ ಚೀಟಿ ಹೊಂದಿರುವರಿಗೂ ಮಾಸಾಶನ ಸಿಗುವಂತಾಗಬೇಕು, ದೈಹಿಕವಾಗಿ ಸಂಪೂರ್ಣ ಅಂಗವಿಕಲತೆ ಇರುವ ಮಕ್ಕಳನ್ನು ನೋಡಿಕೊಳ್ಳಲು ಪೋಷಕರಿಗೆ ಪೋಷಣಾಭತ್ಯೆ ನೀಡುವಂತಾಗಬೇಕು, ಮಗುವಿನ ಪರಿಸ್ಥಿತಿ ಸೂಕ್ಷ್ಮವಾಗಿ ನೋಡಿ ಸೂಕ್ತವಾದ ರೀತಿಯ ಅಂಗವೈಕಲ್ಯತೆಯ ಪ್ರಮಾಣಪತ್ರ ನೀಡಬೇಕು, ಪ್ರಾಥಮಿಕ, ತಾಲೂಕು ಆಸ್ಪತ್ರೆ, ಜನೌಷಧಿ ಕೇಂದ್ರಗಳಲ್ಲಿ ವಿವಿಧ ರೀತಿಯ ಅಂಗವೈಕಲ್ಯತೆ ಇರುವವರಿಗೆ ನೀಡುವ ಔಷಧಿಗಳು ಸಿಗುವಂತಾಗಬೇಕು,ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಅಗತ್ಯವಿರುವ ಸೂಕ್ತ ಥೆರಪಿ ನೀಡುವಂತಾಗಬೇಕು, ಗ್ರಹಿಕೆ ಹಾಗೂ ಸಂವೇದನಾ ಶಕ್ತಿ ಇಲ್ಲದಿರುವ ಮಕ್ಕಳಿಗೆ ಪ್ಯಾಡ್‍ಗಳನ್ನು ಸರ್ಕಾರಿ ಆಸ್ಪತ್ರೆಗಲ್ಲಿ ಉಚಿತವಾಗಿ ನೀಡುವಂತಾಗಬೇಕು, ಇಂತಹ ಮಕ್ಕಳನ್ನು ಶಾಲೆಗೆ ಕಳುಹಿಸಲು ತಗಲುವ ಪ್ರಯಾಣ ವೆಚ್ಚವನ್ನು ಶಿಕ್ಷಣ ಇಲಾಖೆ ಹಾಗೂ ಅಂಗವಿಕಲರ ಕಲ್ಯಾಣ ಇಲಾಖೆ ಜಂಟಿಯಾಗಿ ಭರಿಸುವಂತಾಗಬೇಕು, ಎಂಡೋ ಸಲ್ಫಾನ್ ಪೀಡಿತ ಪ್ರದೇಶದ ವ್ಯಾಪ್ತಿಯಲ್ಲಿರುವ ಅಂಗವಿಕಲತೆ ಇರುವವರಿಗೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸಂಬಂಧಪಟ್ಟ ಪ್ರಮಾಣ ಪತ್ರ ಸಿಗುವಂತಾಗಬೇಕು ಎನ್ನುವ ಪರಿಹಾರಕ್ಕೆ ಶಿಫಾರಸ್ಸುಗಳನ್ನು ಕುಂದಾಪುರ, ಬೈಂದೂರು ಕ್ಷೇತ್ರದ ಶಾಸಕರು ಹಾಗೂ ಜಿಲ್ಲಾ ಆರೋಗ್ಯಾಧಿಕಾರಿ, ಅಂಗವಿಕಲ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ತಿಳಿಸಲಾಯಿತು.

    ಸಭೆಯಲ್ಲಿ ಅಂಗವೈಕಲ್ಯತೆ ಎದುರಿಸುವ ಮಕ್ಕಳೊಂದಿಗೆ ಆಗಮಿಸಿದ ಪೋಷಕರು ತಮ್ಮ ಅಳಲನ್ನು ತೋಡಿಕೊಂಡರು. ದುಬಾರಿ ಔಷಧಿಗಳಿಗೆ ತಿಂಗಳಿಗೆ 10ಸಾವಿರದ ತನಕ ವೆಚ್ಚವಾಗುತ್ತದೆ, ಪಿಜಿಯೋ ಥೆರಪಿಗಾಗಿ ಬಾಡಿಗೆ ವಾಹನದಲ್ಲಿ 20-30 ಕಿ.ಮೀ ದೂರ ಕ್ರಮಿಸಬೇಕಾಗುತ್ತದೆ. ಕೆಲವೊಂದು ಕಡೆ ವಿ.ಎಗಳು ಸರಿಯಾಗಿ ಸ್ಪಂದನ ಮಾಡುತ್ತಿಲ್ಲ ಎಂಬಿತ್ಯಾದಿ ವಿಚಾರಗಳನ್ನು ಶಾಸಕರುಗಳ ಗಮನಕ್ಕೆ ತಂದರು.

    ಡಾ.ಪ್ರೇಮಾನಂದ ಅವರು ಮಾತನಾಡಿ ಸರ್ಕಾರಿ ಆಸ್ಪತ್ರೆ ಹಾಗೂ ಜನೌಷಧಿ ಕೇಂದ್ರಗಳಲ್ಲಿಯೂ ಅಂಗವೈಕಲ್ಯತೆಗೆ ಸಂಬಂಧಪಟ್ಟ ಜನರಿಕ್ ಔಷಧಗಳು ಲಭ್ಯವಿದೆ. ಖಾಸಗಿ ಆಸ್ಪತ್ರೆಗಳಲ್ಲಿ ವೈದ್ಯರಲ್ಲಿ ಜನರಿಕ್ ಔಷಧಿಗಳನ್ನೇ ಬರೆದುಕೊಡುವಂತೆ ವಿನಂತಿಸಬೇಕು ಎಂದರು.

    ಜಿಲ್ಲಾ ಆರೋಗ್ಯಾಧಿಕಾರಿ ಡಾ.ನಾಗಭೂಷಣ, ಕುಂದಾಪುರ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಶಶಿಧರ್, ಬೈಂದೂರು ತಾಲೂಕು ಕಾರ್ಯನಿರ್ವಹಣಾಧಿಕಾರಿ ಭಾರತಿ, ಅಂಗವಿಕಲ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ರತ್ನ, ಶ್ಯಾಮಲಾ, ಭಾಗೀರತಿ ಉಪಸ್ಥಿತರಿದ್ದರು.
    ಸಿ.ಡಬ್ಲ್ಯೂ.ಸಿ ನಮ್ಮ ಭೂಮಿ ಸಂಸ್ಥೆಯ ಸಂಯೋಜಕ ಶ್ರೀನಿವಾಸ ಗಾಣಿಗ ಹಾಗೂ ಸಂಯೋಜಕರಾದ ಕೃಪಾ ಎಂ.ಎಂ ಅವರು ಅಂಗವೈಕಲ್ಯತೆ ಇರುವ ಮಕ್ಕಳು ಎದುರಿಸುವ ಸಮಸ್ಯೆಯನ್ನು ಶಾಸಕರು ಮತ್ತು ಅಧಿಕಾರಿಗಳಿಗೆ ವಿವರಿಸಿದರು.

  • ಆನೆಗುಡ್ಡೆ – ಯಶಸ್ವಿ ಕಲಾವೃಂದದ ಸಾಂಪ್ರದಾಯಿಕ ಹೂವಿನಕೋಲು ಅಭಿಯಾನಕ್ಕೆ ಚಾಲನೆ

    ಆನೆಗುಡ್ಡೆ – ಯಶಸ್ವಿ ಕಲಾವೃಂದದ ಸಾಂಪ್ರದಾಯಿಕ ಹೂವಿನಕೋಲು ಅಭಿಯಾನಕ್ಕೆ ಚಾಲನೆ

    ಕುಂದಾಪುರ ಮಿರರ್ ಸುದ್ದಿ…

    ಕೋಟ: : ಯಶಸ್ವಿ ಕಲಾವೃಂದ ಕೊಮೆ, ತೆಕ್ಕಟ್ಟೆ ಇದರ ಸಾಂಪ್ರದಾಯಿಕ ಹೂವಿನಕೋಲು ಅಭಿಯಾನದ ಉದ್ಘಾಟನೆಯು ಶ್ರೀ ಸಿದ್ಧಿವಿನಾಯಕ ದೇವಸ್ಥಾನ ಆನೆಗುಡ್ಡೆಯಲ್ಲಿ ಹೂವಿನಕೋಲು ಪ್ರದರ್ಶನವನ್ನು ನೀಡುವುದರ ಮೂಲಕ ನಡೆಯಿತು. ಪ್ರಾಚಾರ್ಯ ದೇವದಾಸ ರಾವ್ ಕೂಡ್ಲಿ, ಯಕ್ಷಗುರುಗಳಾದ ಲಂಬೋದರ ಹೆಗಡೆ ಮತ್ತು ಹರೀಶ್ ಪೂಜಾರಿ ಕಾವಡಿಯವರ ಹಿಮ್ಮೇಳದಲ್ಲಿ ಪ್ರದರ್ಶನವನ್ನು ನೀಡಲಾಯಿತು.

    ಹೂವಿನಕೋಲು ಒಂದು ಸಾಂಪ್ರದಾಯಿಕ ಕಲೆಯಾಗಿದ್ದು ಇದೀಗ ಮರೆಯಾಗುತ್ತಿದೆ. ಇಂತಹ ಸುಂದರ ಕಲೆಯನ್ನು ಮತ್ತೆ ಮುನ್ನೆಲೆಗೆ ತರಲು ಇಂತಹ ಸಂಸ್ಥೆಗಳು ಯತ್ನಿಸುತ್ತಿರುವುದು ಶ್ಲಾಘನೀಯ ವಿಚಾರ ಎಂದು ಹರಸಿ ದೇವಳದ ಸಿಬ್ಬಂದಿಯಾದ ರಾಜಾರಾಮ ಉಪಾಧ್ಯಾಯ ಇವರು ಮಾತನಾಡಿದರು. ಉದ್ಘಾಟನಾ ಕಾರ್ಯಕ್ರಮದಲ್ಲಿ ದೇವಳದ ಧರ್ಮದರ್ಶಿ ಶ್ರೀರಮಣ ಉಪಾಧ್ಯಾಯ, ನಟೇಶ್ ಕಾರಂತ್, ಯಕ್ಷದೇಗುಲದ ಸಂಚಾಲಕರಾದ ಸುದರ್ಶನ ಉರಾಳ, ಯಶಸ್ವಿ ಕಲಾವೃಂದದ ಸಂಚಾಲಕರಾದ ವೆಂಕಟೇಶ ವೈದ್ಯ, ಉಪನ್ಯಾಸಕರಾದ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ ಉಪಸ್ಥಿತರಿದ್ದರು.

    ಪ್ರತಿದಿನಕ್ಕೆ ಹದಿನೈದು ಮನೆಗಳಿಗೆ ಭೇಟಿ ನೀಡುವ ಈ ತಂಡವು ಸುಮಾರು ಇಪ್ಪತ್ತು ಪ್ರಸಂಗಗಳನ್ನು ತನ್ನ ಪ್ರದರ್ಶನದಲ್ಲಿ ಅಳವಡಿಸಿಕೊಂಡಿದೆ ಎಂದು ಸಂಚಾಲಕರು ತಿಳಿಸಿದರು.

  • ಕೋಟ ಅಮೃತೇಶ್ವರಿ ದೇಗುಲದಲ್ಲಿ ಶರನ್ನವರಾತ್ರಿ ಮೊದಲ ದಿನದ ಧಾರ್ಮಿಕ ವೈಭವ

    ಕೋಟ ಅಮೃತೇಶ್ವರಿ ದೇಗುಲದಲ್ಲಿ ಶರನ್ನವರಾತ್ರಿ ಮೊದಲ ದಿನದ ಧಾರ್ಮಿಕ ವೈಭವ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಇಲ್ಲಿನ ಕೋಟ ಅಮೃತೇಶ್ವರಿ ಹಲವು ಮಕ್ಕಳ ತಾಯಿ ದೇವಸ್ಥಾನ ಇಲ್ಲಿ ಶರನ್ನವರಾತ್ರಿ ಅಂಗವಾಗಿ ಮೊದಲ ದಿನದ ಪೂಜಾ ವಿಧಿ ವಿಧಾನಗಳು ವೈಭವದಿಂದ ಜರಗಿತು.

    ಮೊದಲ ದಿನದ ಪೂಜಾ ಸೇವಾಕರ್ತರಾಗಿ ಮಾಜಿ ಸಚಿವ ಕೋಟ ಶ್ತೀನಿವಾಸ ಪೂಜಾರಿ ಕುಟುಂಬಿಕರ ಪರವಾಗಿ ಪತ್ನಿ ಶಾಂತಾ ಶ್ರೀನಿವಾಸ್ ಪೂಜಾರಿ ಅಲ್ಲದೆ ಮಣೂರು ಪಡುಕರೆ ಗೋವೆನ್ ಮರೀನ್ ಫ್ರೆಶ್ ಎಕ್ಸ್‍ಪೋರ್ಟ್ ಇದರ ಪಾಲುದಾರ ಬಿಜು ನಾಯರ್ ಚಂಡಿಕಾ ಸಪ್ತಶತಿ ಪಾರಾಯಣ, ದುರ್ಗಾಹೋಮ, ಅನ್ನಸಂತರ್ಪಣೆ ಕಾರ್ಯದಲ್ಲಿ ಭಾಗಿಯಾದರು.

    ಧಾರ್ಮಿಕ ವಿಧಿವಿಧಾನಗಳನ್ನು ವೇ.ಮೂ ಮಧುಸೂದನ ಬಾಯರಿ ನೇತ್ರತ್ವದಲ್ಲಿ ನಡೆಯಿತು.

    ಶ್ರೀ ದೇವಳದ ಆಡಳಿತಾಧಿಕಾರಿ ಪ್ರಶಾಂತ್ ಕುಮಾರ್ ಶೆಟ್ಟಿ, ಆಡಳಿತ ಮಂಡಳಿ ಅಧ್ಯಕ್ಷ ಆನಂದ್ ಸಿ ಕುಂದರ್ ,ಸದಸ್ಯರಾದ ಸತೀಶ್ ಹೆಗ್ಡೆ,ಚಂದ್ರ ಪೂಜಾರಿ, ಸುಬ್ರಾಯ ಆಚಾರ್ಯ ,ಕೋಟ ಗ್ರಾ.ಪಂ ಸದಸ್ಯ ಭುಜಂಗ ಗುರಿಕಾರ, ದೇವಳದ ಮ್ಯಾನೇಜರ್ ಗಣೇಶ್ ಹೊಳ್ಳ ಇದ್ದರು. ಶರನ್ನವರಾತ್ರಿ ಅಂಗವಾಗಿ ಶ್ರೀ ದೇವಳವನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ಶ್ರೀದೇವಿ ಸಂತಾನಭಾಗ್ಯದಾತೆಯ ರೀತಿಯಲ್ಲಿ ಶೃಂಗರಿಸಲಾಗಿತ್ತು. ದೇಗುಲದ ಅರ್ಚಕ ದಾಮೋದರ ಜೋಗಿ, ಗಿರೀಶ್ ಜೋಗಿ, ದೀಕ್ಷಿತ್ ಜೋಗಿ ಮತ್ತಿತರರು ದೇವಿಯ ಪೂಜಾ ಕಾರ್ಯದಲ್ಲಿ ಭಾಗಿಯಾದರು. ಸಂಜೆ ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ ಜರಗಿತು.ಅನ್ನಸಂತರ್ಪಣೆ ಕಾರ್ಯಕ್ರಮ,ಪ್ರಸಾದ ವಿತರಣೆ ಜರಗಿತು.

  • ಬ್ರಹ್ಮಾವರ: ಸಹಕಾರಿ ಸಂಘಗಳ ಮೇಲೆ ಸರ್ಕಾರಗಳು ನಂಬಿಕೆ ಇಟ್ಟಾಗ ಗ್ರಾಮೀಣ ಜನರ ಆರ್ಥಿಕ ಭದ್ರತೆ ಸಾಧ್ಯ – ಎಂ.ಎನ್.ಆರ್.

    ಬ್ರಹ್ಮಾವರ: ಸಹಕಾರಿ ಸಂಘಗಳ ಮೇಲೆ ಸರ್ಕಾರಗಳು ನಂಬಿಕೆ ಇಟ್ಟಾಗ ಗ್ರಾಮೀಣ ಜನರ ಆರ್ಥಿಕ ಭದ್ರತೆ ಸಾಧ್ಯ – ಎಂ.ಎನ್.ಆರ್.

    ಮಟಪಾಡಿಯಲ್ಲಿ ನವರತ್ನ ಮಿನಿ ಸಭಾಂಗಣ, 9ನೇ ಶಾಖೆ ಲೋಕಾರ್ಪಣೆ

    ಕುಂದಾಪುರ ಮಿರರ್ ಸುದ್ದಿ…


    ಬ್ರಹ್ಮಾವರ : ಇಲ್ಲಿನ ತಾಲೂಕಿನ ಮಟಪಾಡಿ ಗ್ರಾಮದಲ್ಲಿ ನಿರ್ಮಿಸಿದ ಬ್ರಹ್ಮಾವರ ವ್ಯವಸಾಯ ಸೇವಾ ಸಹಕಾರಿ ಸಂಘದ ಹವಾನಿಯಂತ್ರಿತ 9ನೇಯ ಶಾಖೆ ಮತ್ತು ನವರತ್ನ ಮಿನಿ ಸಭಾಂಗಣವನ್ನು ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮಂಗಳೂರು ಇದರ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಉದ್ಘಾಟಿಸಿದರು.

    ಬಳಿಕ ಮಾತನಾಡಿದ ಅವರು, ಸಹಕಾರಿ ಕ್ಷೇತ್ರದಲ್ಲಿ ಬಹುದೊಡ್ಡ ಸವಾಲು ಇರುವುದು ಕಾರ್ಪೋರೇಟ್ ಬ್ಯಾಂಕ್ ಗಳ ಜೊತೆಗೆ ಪೈಪೋಟಿ ನಡೆಸುವುದು. ಆದರೆ ಸಹಕಾರಿ ಬ್ಯಾಂಕ್ ಗಳಲ್ಲಿ ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರ ಒಂದು ಬಿಡಿಗಾಸನ್ನೂ ಡೆಪಾಸಿಟ್ ಇಡುವುದಿಲ್ಲ. ಬದಲಾಗಿ ಕಮರ್ಷಿಯಲ್ ಬ್ಯಾಂಕಿನಲ್ಲಿ ಕರೆಂಟ್ ಎಕೌಂಟಿನಲ್ಲಿ ಇಡ್ತಾರೆ.‌ ಸರ್ಕಾರಗಳು ಸಹಕಾರಿ ಬ್ಯಾಂಕುಗಳನ್ನು ನಂಬಿದರೆ ಕಮರ್ಷಿಯಲ್ ಬ್ಯಾಂಕ್ ಗಳ ಜೊತೆ ಪೈಪೋಟಿ ಮಾಡಬಹುದು ಎಂದರು.

    ಎಲ್ಲಾ ಸವಾಲುಗಳ ನಡುವೆ ಸಹಕಾರಿ ಬ್ಯಾಂಕುಗಳ ಶಾಖೆಗಳು ಗ್ರಾಮ ಮಟ್ಟದಲ್ಲಿ ಸ್ಥಾಪನೆಯಾಗಬೇಕಿದೆ. ಆ ಮುಇಲಕ ಗ್ರಾಮೀಣ ಜನರ ಆರ್ಥಿಕ ಭದ್ರತೆಗೆ ಹೆಗಲು ಕೊಡಬೇಕಿದೆ ಎಂದರು.

    ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬ್ರಹ್ಮಾವರ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಇರ್ಮಾಡಿ ಕೆ. ತಿಮ್ಮಪ್ಪ ಹೆಗ್ಡೆ ವಹಿಸಿ ಪ್ರಾಸ್ತಾವಿಕ ಮಾತುಗಳ್ನಾಡಿದರು.

    ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳಿ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ, ಉಡುಪಿ ವಿಧಾನ ಸಭಾ ಕ್ಷೇತ್ರದ ಶಾಸಕ ಯಶ್ ಪಾಲ್ ಎ.ಸುವರ್ಣ, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ, ಇಂದ್ರಾಳಿ, ಮಂಗಳೂರು ದ.ಕ.ಜಿ.ಕೇ.ಸ.ಬ್ಯಾಂಕ್ ನಿರ್ದೇಶಕ ಐ.ದೇವಿಪ್ರಸಾದ್ ಶೆಟ್ಟಿ, ಅಧ್ಯಕ್ಷರಾದ ಇರ್ಮಾಡಿ ಕೆ. ತಿಮ್ಮಪ್ಪ ಹೆಗ್ಡೆ, ಮಾಜಿ ಅಧ್ಯಕ್ಷ ರಾದ ರಾಮಣ್ಣ ಅಡಿಗ, ವೆಂಕಟ್ರಾಯ ನಾಯಕ್ ಸನ್ಮಾನಿಸಿ, ಗೌರವಿಸಲಾಯಿತು.

    ಸಭಾಭವನ ನಿರ್ಮಾಣ ಮಾಡಿದ ಚಂದ್ರಶೇಖರ ನಾಯರಿ ಇವರನ್ನು ಈ ಸಂದರ್ಭ ಗೌರವಿಸಲಾಯಿತು. ನೂತನ ಸ್ವಸಹಾಯ ಸಂಘ “ನವರತ್ನ”, ಪಡಿತರ ಗೋದಾಮು, ನವರತ್ನ ಮಿನಿ ಸಭಾಂಗಣ, ಭದ್ರತಾ ಕೊಠಡಿ, ಅಧಿಕಾರಿಗಳ ಕೊಠಡಿ, ಕಡತಗಳ ಕೊಠಡಿ, ಕಂಪ್ಯೂಟರ್ ಉದ್ಘಾಟನೆಗೊಳಿಸಲಾಯಿತು.

    ಉಡುಪಿ ಮಾಜಿ ಶಾಸಕ ಕೆ. ರಘಪತಿ ಭಟ್, ಉಡುಪಿ ತಾ.ವ್ಯ.ಉ.ಸಹಕಾರ ಮಾರಾಟ ಸಂಘದ ಅಧ್ಯಕ್ಷ ಬಿ.ಅಶೋಕ್ ಕುಮಾರ್ ಮೈರ್ಮಾಡಿ, ಮಂಗಳೂರು ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಅಶೋಕ್ ಕುಮಾರ್ ಶೆಟ್ಟಿ ಬೆಳ್ಳಂಪಳ್ಳಿ, ಮಂಗಳೂರು ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ರಾಜೇಶ್ ರಾವ್ ಪಾಂಗಳ, ಕುಂದಾಪುರ ಸಹಕಾರಿ ಸಂಘಗಳ ಸಹಾಯಕ ನಿಬಂಧಕರಾದ‌ ಅರುಣ್ ಕುಮಾರ್ ‌ಎಸ್.ವಿ., ಹಂದಾಡಿ ಗ್ರಾ.ಪಂ.ಅಧ್ಯಕ್ಷೆ ಶೋಭಾ ಪೂಜಾರಿ, ನಿರ್ದೇಶಕರಾದ ರಾಜೇಶ್ ಶೆಟ್ಟಿ ಬಿರ್ತಿ, ಗಣೇಶ್ ಪ್ತಸಾದ್ ಶೆಟ್ಟಿ, ಕಮಲಾಕ್ಷ ಹೆಬ್ಬಾರ್, ಸದಾನಂದ ಪೂಜಾರಿ, ರಾಜೇಶ್ ಮರಕಾಲ, ಉಲ್ಲಾಸ್ ನಾಯಕ್, ನಳಿನಿ ಪ್ರದೀಪ್ ರಾವ್, ನಾಗವೇಣಿ ಪಂಡರಿನಾಥ್, ಸಂಜೀವ ನಾಯ್ಕ್, ಪ್ರಕಾಶ್, ಮೋಹನ್ ಶೆಟ್ಟಿ ಉಪಸ್ಥಿತರಿದ್ದರು.

    ಬ್ರಹ್ಮಾವರ ಸೇವಾ ಸಹಕಾರಿ ಸಂಘದ ನಿರ್ದೇಶಕ ಜ್ಞಾನ ವಸಂತ ಶೆಟ್ಟಿ ಸ್ವಾಗತಿಸಿದರು, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಹೆಚ್. ಸುಭಾಶ್ಚಂದ್ರ ಶೆಟ್ಟಿ ವಂದಿಸಿದರು. ಸತೀಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

  • ಕಾರ್ಕಡ ಗೆಳೆಯರ ಬಳಗದ ಕಾರಂತ ಪುರಸ್ಕಾರ ಸ್ವೀಕರಿಸಿ ಸಾಹಿತಿ ವೈದೇಹಿ – ಪ್ರಾಮಾಣಿಕ, ಅನುಭವದ ರೂಪ ಸಾಹಿತ್ಯ

    ಕಾರ್ಕಡ ಗೆಳೆಯರ ಬಳಗದ ಕಾರಂತ ಪುರಸ್ಕಾರ ಸ್ವೀಕರಿಸಿ ಸಾಹಿತಿ ವೈದೇಹಿ – ಪ್ರಾಮಾಣಿಕ, ಅನುಭವದ ರೂಪ ಸಾಹಿತ್ಯ

    ಕುಂದಾಪುರ ಮಿರರ್ ಸುದ್ದಿ…

    ಕೋಟ :ಪ್ರಾಮಾಣಿಕವಾಗಿ, ಅನುಭವಕ್ಕೆ ಸರಿಯಾಗಿ ಬರೆಯುವ ಸ್ವಭಾವದರಾಗಿದ್ದ ಕಾರಂತರು ನನ್ನ ಸಾಹಿತ್ಯ ಕ್ಷೇತ್ರಕ್ಕೆ ದೀಕ್ಷೆ, ಬರಹಕ್ಕೆ ಶಕ್ತಿ ನೀಡಿದವರು ಎಂದು ಸಾಹಿತಿ ವೈದೇಹಿ ಹೇಳಿದರು.

    ಸಾಲಿಗ್ರಾಮ ಕಾರ್ಕಡದ ಗೆಳೆಯರ ಬಳಗದ ವತಿಯಿಂದ ಶನಿವಾರ ನಡೆದ ಡಾ.ಕೋಟ ಶಿವರಾಮ ಕಾರಂತರ ಜನ್ಮದಿನಾಚರಣೆ, ಕಾರಂತ ಸಂಸ್ಮರಣೆ, ಕಾರಂತ ಪುರಸ್ಕಾರ ಸಮಾರಂಭದಲ್ಲಿ ಕಾರ್ಕಡ ಗೆಳೆಯರ ಬಳಗದ ಕಾರಂತ ಪುರಸ್ಕಾರ ಸ್ವೀಕರಿಸಿ ಮಾತನಾಡಿದರು.

    ಕಾರಂತರು ಸ್ತ್ರೀಯರ ಜೀವನ, ಸಂವೇದನೆಯನ್ನು ತಮ್ಮ ಕಾದಂಬರಿಗಳ ಮೂಲಕ ಎಲ್ಲರಿಗೂ ತಿಳಿಸುವ ಪ್ರಯತ್ನವನ್ನು ಮಾಡಿರುವ ನೋಬೆಲ್‌ ಪುರಸ್ಕಾರಕ್ಕೂ ಅರ್ಹರಾಗಿದ್ದರು. ಕಾರಂತರ ಈ ಪುರಸ್ಕಾರ ಸ್ತ್ರೀ ಕುಲಕ್ಕೆ ನೀಡಿರುವ ಪುರಸ್ಕಾರ ಎಂದರು.

    ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸಿದ್ದರು.

    ಕುಂದಾಪುರ ಶಾಸಕ ಕಿರಣ್‌ ಕೊಡ್ಗಿ ಉದ್ಘಾಟಿಸಿ ಕಾರಂತರ ವ್ಯಕ್ತಿತ್ವವನ್ನು ಇಂತಹ ಕಾರ್ಯಕ್ರಮಗಳ ಮೂಲಕ ನೆನಪಿಸುತ್ತಿರುವುದು ಶ್ಲಾಘನೀಯ ಎಂದರು.

    ಮಂಗಳೂರಿನ ಕಲ್ಕೂರ ಪ್ರತಿಷ್ಟಾನದ ಎಸ್.ಪ್ರದೀಪ್‌ ಕುಮಾರ್‌ ಕಲ್ಕೂರ ಕಾರಂತರ ಭಾವಚಿತ್ರಕ್ಕೆ ನುಡಿನಮನ ಸಲ್ಲಿಸಿದರು. ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಕಾರಂತರ ಸಂಸ್ಮರಣೆ ಮಾಡಿದರು.

    ಕರ್ಣಾಟಕ ಬ್ಯಾಂಕ್‌ನ ಉಡುಪಿ ಪ್ರಾದೇಶಿಕ ಕಚೇರಿಯ ಎ.ಜಿ.ಎಂ ರಾಜಗೋಪಾಲ, ಕಾರಂತ ಪ್ರತಿಷ್ಟಾನದ ಕಾರ್ಯಾಧ್ಯಕ್ಷ ಆನಂದ ಸಿ ಕುಂದರ್‌, ಕೋಟ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಶಂಕರ ಎ ಕುಂದರ್‌, ಕೋಟ ವಿವೇಕ ಹಿಂದಿನ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಿ.ರಮಾನಂದ ಭಟ್‌, ಕೋಟ ಸಿ.ಎ ಬ್ಯಾಂಕ್‌ ಅಧ್ಯಕ್ಷ ಜಿ.ತಿಮ್ಮ ಪೂಜಾರಿ, ಸಾಲಿಗ್ರಾಮ ಪಟ್ಟಣ ಪಂಚಾಯಿತಿ ಸದಸ್ಯ ರಾಜು ಪೂಜಾರಿ ಕಾರ್ಕಡ, ಕಲಾ ಸಾಹಿತಿ ಮಂಗಳೂರಿನ ಎಚ್‌.ಜನಾರ್ಧನ ಹಂದೆ ಇದ್ದರು.

    ಗೆಳೆಯರ ಬಳಗದ ಅಧ್ಯಕ್ಷ ಕೆ.ತಾರಾನಾಥ ಹೊಳ್ಳ ಸ್ವಾಗತಿಸಿದರು. ಕಾರ್ಯದರ್ಶಿ ಕೆ.ಶೀನ ವರದಿ ವಾಚಿಸಿದರು. ಮಂಜುನಾಥ ಉಪಾಧ್ಯ ಸನ್ಮಾನಿತರ ಪರಿಚಯ ನೀಡಿದರು. ಉಪಾಧ್ಯಕ್ಷ ಕೆ.ಶಶಿಧರ್‌ ಮಯ್ಯ ಕಾರ್ಯಕ್ರಮ ನಿರೂಪಿಸಿದರು. ನಂತರ ಕೆ.ಚಂದ್ರಕಾಂತ ನಾಯರಿ ಹಾಗೂ ಸ್ಥಳೀಯ ಪ್ರತಿಭೆಗಳಿಂದ ಗಾನ ನಮನ, ಕಾರ್ಕಳ ಶಶಿಕಾಂತ ಶೆಟ್ಟಿ ತಂಡದವರಿಂದ ಬಡಗು ಶೈಲಿಯ ದ್ರೌಪದಿ ಪ್ರತಾಪ ಯಕ್ಷಗಾನ ನಡೆಯಿತು.

  • ಸಾಲಿಗ್ರಾಮ ಶ್ರೀ ಗುರು ನರಸಿಂಹ ದೇವಸ್ಥಾನಕ್ಕೆ ಸಚಿವ ಚೆಲುವರಾಯ ಸ್ವಾಮಿಯವರ ಪತ್ನಿ ಧನಲಕ್ಷ್ಮಿಯವರು ಭೇಟಿ

    ಸಾಲಿಗ್ರಾಮ ಶ್ರೀ ಗುರು ನರಸಿಂಹ ದೇವಸ್ಥಾನಕ್ಕೆ ಸಚಿವ ಚೆಲುವರಾಯ ಸ್ವಾಮಿಯವರ ಪತ್ನಿ ಧನಲಕ್ಷ್ಮಿಯವರು ಭೇಟಿ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಸಾಲಿಗ್ರಾಮ ಶ್ರೀ ಗುರು ನರಸಿಂಹ ದೇವಸ್ಥಾನಕ್ಕೆ ಕರ್ನಾಟಕ ಕೃಷಿ ಮತ್ತು ತೋಟಗಾರಿಕೆ ಸಚಿವ ಚೆಲುವರಾಯ ಸ್ವಾಮಿಯವರ ಪತ್ನಿ ಧನಲಕ್ಷ್ಮಿಯವರು ಭೇಟಿ ನೀಡಿ ದೇವರ ದರ್ಶನ ಪಡೆದು, ಅಷ್ಟೋತ್ತರ ನಾಮಾವಳಿ ಅರ್ಚನೆಯನ್ನು ಸಲ್ಲಿಸಿದರು.

    ದೇವಳದ ಆಡಳಿತ ಮಂಡಳಿಯ ಅಧ್ಯಕ್ಷ ಡಾ.ಕೆ.ಎಸ್.ಕಾರಂತರು ಕ್ಷೇತ್ರದ ವತಿಯಿಂದ ಪ್ರಸಾದವನ್ನು ನೀಡಿ ಶುಭ ಹಾರೈಸಿದರು.

    ಈ ಸಂದರ್ಭದಲ್ಲಿ ಕಾರ್ಯದರ್ಶಿ ಲಕ್ಷ್ಮೀನಾರಾಯಣ ತುಂಗ, ಪೂರ್ವಾಧ್ಯಕ್ಷ ಎ.ಜಗದೀಶ ಕಾರಂತ, ಪ್ರಬಂಧಕ ನಾಗರಾಜ ಹಂದೆ , ರಾಜ್ಯ ಕೃಷಿ ಇಲಾಖೆಯ ಕುಂದಾಪುರ ವಿಭಾಗದ ಉನ್ನತಾಧಿಕಾರಿ ರೂಪ ಮಾಡ ,ಕಿರಿಮಂಜೇಶ್ವರ ಅಗಸ್ತ್ಯೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯ ಪರುಶರಾಮ್ ಭಟ್ ಮತ್ತಿತರರು ಉಪಸ್ಥಿತರಿದ್ದರು.

  • ಬ್ರಹ್ಮಾವರ :ರಾಜ್ಯ ಸರ್ಕಾರದಿಂದ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಬೆಂಬಲ: ಸಚಿವ ಚೆಲುವರಾಯ ಸ್ವಾಮಿ

    ಬ್ರಹ್ಮಾವರ :ರಾಜ್ಯ ಸರ್ಕಾರದಿಂದ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಬೆಂಬಲ: ಸಚಿವ ಚೆಲುವರಾಯ ಸ್ವಾಮಿ

    ಬ್ರಹ್ಮಾವರದಲ್ಲಿ ಕೃಷಿ ಆಹಾರ ಸಸ್ಯ ಮೇಳ ಮತ್ತು ಉದ್ಯೋಗ ಮಾಹಿತಿ ಶಿಬಿರ

    ಕುಂದಾಪುರ ಮಿರರ್ ಸುದ್ದಿ…
    ಕುಂದಾಪುರ: ರಾಜ್ಯ ಸರ್ಕಾರವು ರಾಜ್ಯದ ರೈತರಿಗೆ ಕೃಷಿ ಚಟುವಟಿಕೆಗಳನ್ನು ಲಾಭದಾಯಕವಾಗಿ ಮಾಡಲು ಸಂಪೂರ್ಣ ಬೆಂಬಲ ಮತ್ತು ಅಗತ್ಯವಿರುವ ಎಲ್ಲಾ ರೀತಿಯ ನೆರವು ನೀಡುತ್ತಿದೆ ಎಂದು ರಾಜ್ಯದ ಕೃಷಿ ಸಚಿವ ಚೆಲುವರಾಯ ಸ್ವಾಮಿ ಹೇಳಿದರು.

    ಅವರು ಇಂದು ಬ್ರಹ್ಮಾವರದ ಚೇರ್ಕಾಡಿಯಲ್ಲಿ, ಐ.ಸಿ.ಎ.ಆರ್, ಕೃಷಿ ವಿಜ್ಞಾನ ಕೇಂದ್ರ, ಬ್ರಹ್ಮಾವರ, ತೋಟಗಾರಿಕಾ ಇಲಾಖೆ ಉಡುಪಿ ಜಿಲ್ಲೆ, ಶ್ರೀ ಜ್ಞಾನಶಕಿ ಕ್ರೀಡಾ ಮತ್ತು ಕಲಾಸಂಘ (ರಿ), ರೋಟರಿ ರಾಯಲ್ ಬ್ರಹ್ಮಾವರ, ಲಯನ್ಸ್ ಕ್ಲಬ್ ಬಾರ್ಕೂರು -ಬ್ರಹ್ಮಾವರ ದ ಸಹಯೋಗದಲ್ಲಿ ನಡೆದ ಕೃಷಿ ಆಹಾರ ಸಸ್ಯ ಮೇಳ ಮತ್ತು ಉದ್ಯೋಗ ಮಾಹಿತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.

    ಕೃಷಿ ಚಟುವಟಿಕೆಯನ್ನು ಆಸಕ್ತಿ, ಶ್ರದ್ಧೆ ಮತ್ತು ಪ್ರಾಮಾಣಿಕತೆಯಿಂದ ಮಾಡಿದಲ್ಲಿ ಅತ್ಯಂತ ಲಾಭದಾಯಕವಾಗಿ ಮಾಡಬಹುದಾಗಿದ್ದು, ಇದಕ್ಕೆ ರಾಜ್ಯದಲ್ಲೇ ಹಲವು ಯಶಸ್ವಿ ಕೃಷಿಕರ ನಿದರ್ಶನಗಳಿವೆ. ಲಾಭದಾಯಕವಾಗುವುದರ ಜೊತೆಗೆ ಕೃಷಿಯು ಹಲವು ಮಂದಿಗೆ ಉದ್ಯೋಗ ಒದಗಿಸುವ ಕ್ಷೇತ್ರ ಸಹಾ ಆಗಿದ್ದು, ಕೃಷಿಯಿಂದ ಸ್ವಾಭಿಮಾನ ಮತ್ತು ಸ್ವಾವಲಂಬಿ ಜೀವನ ನಡೆಸಲು ಸಾಧ್ಯವಾಗಲಿದೆ ಎಂದರು.

    ರಾಜ್ಯಾದ್ಯಂತ ಈ ಬಾರಿಯ ಮುಂಗಾರು ಹಂಗಾಮಿನಲ್ಲಿ ರೈತರಿಗೆ ಬಿತ್ತನೆ ಬೀಜ ಮತ್ತು ರಸಗೊಬ್ಬರದ ಕೊರತೆಯಾಗದಂತೆ ಸಮರ್ಪಕವಾಗಿ ವಿತರಿಸಲಾಗಿದೆ ಅಲ್ಲದೇ ನಕಲಿ ಬೀಜ ಮಾರಾಟಗಾರರು ಮತ್ತು ರಸಗೊಬ್ಬರ ಮಾರಾಟಕ್ಕೆ ಕಡಿವಾಣ ಹಾಕಲಾಗಿದೆ. ಕೃಷಿ ಯಂತ್ರಧಾರೆ ಕೇಂದ್ರಗಳನ್ನು ಬೃಹತ್ ಪ್ರಮಾಣದಲ್ಲಿ ತೆರೆಯಲು ಅನುದಾನ ಮೀಸಲಿಡಲಾಗಿದೆ. ಸಿರಿಧಾನ್ಯ ಬೆಳೆಯುವ ರೈತರಿಗೆ ಹೆಕ್ಟೇರ್ ಗೆ 10000 ರೂ ಸಹಾಯಧನ ನೀಡಲಾಗುತ್ತಿದೆ. ರಾಜ್ಯದ ಎಲ್ಲಾ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯಗಳ ಮೂಲಕ ರೈತರಿಗೆ ಅವರ ಜಮೀನಿನ ಮಣ್ಣಿನ ಸಾರಾಂಶ ಬೆಳೆಯಬಹುದಾದ ಬೆಳೆಗಳು, ಹವಾಮಾನ ಆಧಾರಿತವಾಗಿ ಬೆಳೆಯಬಹುದಾದ ಬೆಳೆಗಳು, ಕಡಿಮೆ ನೀರಿನಲ್ಲಿ ಬೆಳೆಯಬಹುದಾದ ಮತ್ತು ಹೆಚ್ಚು ಇಳುವರಿ ನೀಡುವಂತಹ ಬೆಳೆಯಬಹುದಾದ ಬೆಳೆಗಳ ಬಗ್ಗೆ ಕಾಲಕಾಲಕ್ಕೆ ಮಾಹಿತಿಯನ್ನು ನೀಡಲಾಗುತ್ತಿದೆ ಎಂದರು.

    ಕೃಷಿಯ ಬೆಳವಣಿಗೆಯ ಮೂಲಕ ರಾಜ್ಯದ ಮತ್ತು ರಾಜ್ಯದ ಜನತೆಯ ಆರ್ಥಿಕ ಬೆಳವಣಿಗೆ ಸಾಧ್ಯವಾಗಲಿದ್ದು ಅದಕ್ಕಾಗಿ ರಾಜ್ಯಾದ್ಯಂತ ಕೃಷಿ ಬೆಳವಣಿಗೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದರು.

    ಉಡುಪಿ ಜಿಲ್ಲೆಯಲ್ಲಿನ ರೈತರು ವರ್ಷದ ಎಲ್ಲಾ ಕಾಲದಲ್ಲೂ ಕೃಷಿ ಚಟುವಟಿಕೆ ನಡೆಸಲು ಅನುಕೂಲವಾಗುವಂತೆ ಅಗತ್ಯವಿರುವ ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸುವ ಕುರಿತಂತೆ ಸಣ್ಣ ನೀರಾವರಿ ಸಚಿವರು ಮತ್ತು ಉಪ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಈ ಭಾಗದಲ್ಲಿ ಯೋಜನೆಗಳನ್ನು ಅನುಷ್ಠಾನ ಮಾಡಲಾಗುವುದು ಎಂದ ಸಚಿವರು ಬ್ರಹ್ಮಾವರದಲ್ಲಿ ಕೃಷಿ ಕಾಲೇಜು ಆರಂಭಿಸುವ ಕುರಿತಂತೆ ಅಧಿಕಾರಿಗಳು ಮತ್ತು ಕೃಷಿ ವಿಶ್ವವಿದ್ಯಾಲಯದ ಅಧಿಕಾರಿಗಳೊಂದಿಗೆ ಚರ್ಚಿಸಿ, ಸಕಾರಾತ್ಮಕ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

    ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ ಮಾತನಾಡಿ, ಈ ಭಾಗದಲ್ಲಿ ಕೃಷಿ ಕಾಲೇಜು ಸ್ಥಾಪನೆಯ ಅಗತ್ಯತೆಯ ಬಗ್ಗೆ ತಿಳಿಸಿದರು. ಕೃಷಿ ವಿಜ್ಞಾನಿಗಳು ಮಾಡುವ ಯಶಸ್ವಿ ಪ್ರಯೋಗಗಳು ಪ್ರಯೋಗಶಾಲೆಯಿಂದ ರೈತರ ಜಮೀನುಗಳಿಗೆ ಬರಬೇಕು, ರೈತರು ಕೃಷಿ ವಿಜ್ಞಾನಿಗಳು ನೀಡುವ ಸಲಹೆಗಳನ್ನು ಸ್ವೀಕರಿಸಿ, ಅವುಗಳನ್ನು ತಮ್ಮ ಜಮೀನುಗಳಲ್ಲಿ ಅಳವಡಿಸಿಕೊಳ್ಳುವ ಮೂಲಕ ಕೃಷಿಯನ್ನು ಲಾಭದಾಯಕವನ್ನಾಗಿ ಮಾಡಿಕೊಳ್ಳಬೇಕು ಎಂದರು.

    ಶಾಸಕ ಯಶ್ಪಾಲ್ ಸುವರ್ಣ ಮಾತನಾಡಿ, ಬ್ರಹ್ಮಾವರ ಕೃಷಿ ಕೇಂದ್ರದ ಆವರಣದಲ್ಲಿನ 350 ಎಕ್ರೆ ಪ್ರದೇಶದಲ್ಲಿ ಕೃಷಿ ಕಾಲೇಜು ಮತ್ತು ಕೃಷಿ ಅಭಿವೃದ್ಧಿಗೆ ಸಂಬ೦ಧಿಸಿದ ಚಟುವಟಿಕೆಗಳನ್ನು ಆರಂಭಿಸುವ ಮೂಲಕ ಜಿಲ್ಲೆಯಲ್ಲಿ ಕೃಷಿಗೆ ಹೆಚ್ಚಿನ ಬೆಂಬಲ ನೀಡಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಪ್ರಯೋಜನಗಳನ್ನು ರೈತರು ಪಡೆದುಕೊಳ್ಳಬೇಕು ಎಂದರು.

    ಕಾರ್ಯಕ್ರಮದಲ್ಲಿ ಚೇರ್ಕಾಡಿ ಗ್ರಾ.ಪಂ. ಅಧ್ಯಕ್ಷ ನಾರಾಯಣ ನಾಯ್ಕ, ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಕುಲಪತಿ ಡಾ.ಆರ್.ಸಿ. ಜಗದೀಶ್, ಬ್ರಹ್ಮಾವರ ವಲಯ ಕೃಷಿ ತೋಟಗಾರಿಕಾ ಸಂಶೋಧನಾ ಕೇಂದ್ರದ ಸಹ ಸಂಶೋಧನಾ ನಿರ್ದೇಶಕ ಡಾ.ಲಕ್ಷ್ಮಣ, ಹಿರಿಯ ವಿಜ್ಞಾನಿ ಡಾ.ಬಿ.ಧನಂಜಯ, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಸೀತಾ ಮತ್ತಿತರರು ಉಪಸ್ಥಿತರಿದ್ದರು.

    ಪ್ರಗತಿಪರ ಕೃಷಿಕರು ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಲಾಯಿತು. ಅಖಿಲ್ ಹೆಗ್ಡೆ ಸ್ವಾಗತಿಸಿದರು.