Category: ಸುದ್ದಿ

  • ಕೋಟ :ಶಾಸಕ ಕಿರಣ್ ಕುಮಾರ್ ಕೊಡ್ಗಿ ಕೋಟ ಎ.ಪಿ.ಎಂ.ಸಿಗೆ ಭೇಟಿ

    ಕೋಟ :ಶಾಸಕ ಕಿರಣ್ ಕುಮಾರ್ ಕೊಡ್ಗಿ ಕೋಟ ಎ.ಪಿ.ಎಂ.ಸಿಗೆ ಭೇಟಿ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಕಿರಣ್ ಕುಮಾರ್ ಕೊಡ್ಗಿ ಗುರುವಾರ ಕೋಟ ಎ.ಪಿ ಎಂ ಸಿ ಸಂತೆ ಮಾರುಕಟ್ಟೆ ಪ್ರದೇಶಕ್ಕೆ ಭೇಟಿ ನೀಡಿದರು.

    ಕೋಟದಲ್ಲಿ ಕಳೆದ ಮೂರು ವರ್ಷಗಳ ಹಿಂದೆ ನಿರ್ಮಾಣಗೊಂಡು ಸಾರ್ವಜನಿಕರ ಸೇವೆ ಅಣಿಯಾದ ಈ ಮಾರುಕಟ್ಟೆ ದಿನದಿಂದ ದಿನಕ್ಕೆ ಅಭಿವೃದ್ಧಿ ಹೊಂದುತ್ತಿದ್ದು ಸುಮಾರು ೫೫ಲಕ್ಷ ರೂ ವೆಚ್ಚದಲ್ಲಿ ಕೃಷಿಕರಿಗೆ ಅನುಕೂಲಕ್ಜಾಗಿ ಮೂರು ಗೋದಾಮು ನಿರ್ಮಿಸಿದ್ದು ಶೀಘ್ರದಲ್ಲೇ ಟೆಂಡರ್ ಪ್ರಕ್ರಿಯೆಗೊಳ್ಳಲಿದೆ. ಅಲ್ಲದೆ ಮಾರುಕಟ್ಟೆ ಇನ್ನಷ್ಟು ಅಭಿವೃದ್ಧಿಗೊಳಿಸುವ ಕುರಿತಂತೆ ಸ್ಥಳೀಯ ಜನಪ್ರತಿನಿಧಿಗಳು,ಅಧಿಕಾರಿ ವರ್ಗ ಶಾಸಕರಲ್ಲಿ ಚರ್ಚಿಸಿದರು.

    ಈ ವೇಳೆ ಶಾಸಕರು ನೂತನ ಗೋದಾಮು ಅನ್ನು ಎ.ಪಿ.ಎಂ.ಸಿ ಅಧಿಕಾರಿಗಳ ಸಮ್ಮುಖದಲ್ಲಿ ಪರಿಶೀಲಿಸಿದರು. ಎ.ಪಿ ಎಂ ಸಿ ಕಾರ್ಯದರ್ಶಿ ಗಾಯಿತ್ರಿ.ಎಂ,ಆಡಳಿತಧಿಕಾರಿ ಗೋಪಾಲ ತಿಪ್ಪಣ್ಣ ಕಾಕನೂರ್, ಲೆಕ್ಕಧೀಕ್ಷಕ ರಾಜೀವ್ ಆರ್ ನಾಯ್ಕ್ ಎ.ಪಿ.ಎಂ ಸಿ ಮಾಜಿ ಉಪಾಧ್ಯಕ್ಷ ಕೃಷ್ಣ ಪೂಜಾರಿ ಪಿ,ಗುತ್ತಿಗೆದಾರ ರಜತ್ ಹೆಗ್ಡೆ,ನಾಗರಾಜ್ ಗಾಣಿಗ ಮತ್ತಿತರರು ಉಪಸ್ಥಿತರಿದ್ದರು.

  • ಉಡುಪಿ :ಕೋಟ್ಪಾ ದಳದಿಂದ ದಾಳಿ : ದಂಡ ವಸೂಲಿ

    ಉಡುಪಿ :ಕೋಟ್ಪಾ ದಳದಿಂದ ದಾಳಿ : ದಂಡ ವಸೂಲಿ

    ಕುಂದಾಪುರ ಮಿರರ್ ಸುದ್ದಿ…
    ಉಡುಪಿ: ಉಡುಪಿ ತಾಲೂಕಿನಲ್ಲಿ ಕೋಟ್ಪಾ ಕಾಯಿದೆಯನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ತಾಲೂಕು ತಂಬಾಕು ನಿಯಂತ್ರಣ ತನಿಖಾ ದಳದ ವತಿಯಿಂದ ಇಂದು ನಗರ ವ್ಯಾಪ್ತಿಯ ಪ್ರದೇಶಗಳಲ್ಲಿ ತಂಬಾಕು ಮಾರಾಟದ ಅಂಗಡಿ, ಹೋಟೆಲ್ ಹಾಗೂ ಬಾರ್ ಮತ್ತು ರೆಸ್ಟೋರೆಂಟ್‌ಗಳ ಮೇಲೆ ದಾಳಿ ನಡೆಸಿ ಸೆಕ್ಷನ್ 4, 6(ಎ) ಮತ್ತು 6(ಬಿ) ಅಡಿಯಲ್ಲಿ 16 ಪ್ರಕರಣಗಳನ್ನು ದಾಖಲಿಸಿ, 2,400 ರೂ. ದಂಡ ವಸೂಲಿ ಮಾಡಲಾಯಿತು.

    ಈ ಸಂದರ್ಭದಲ್ಲಿ ಉಡುಪಿ ತಾಲೂಕು ಆರೋಗ್ಯಾಧಿಕಾರಿ ಡಾ. ವಾಸುದೇವ ಉಪಾಧ್ಯಾಯ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ದೇವಪ್ಪ ಪಟಗಾರ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಚಂದ್ರಕಲಾ, ನಗರಸಭೆಯ ಹಿರಿಯ ಆರೋಗ್ಯ ನಿರೀಕ್ಷಕಿ ಶಶಿಕಲಾ, ಎನ್.ಟಿ.ಸಿ.ಪಿ ವಿಭಾಗದ ಜಿಲ್ಲಾ ಸಂಯೋಜಕಿ ಮಂಜುಳಾ ಶೆಟ್ಟಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

  • ಕುಂದಾಪುರ :ನೀಟ್ ಫಲಿತಾಂಶ – ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ನಿತೇಶ್ ಗೆ 564 ಅಂಕ

    ಕುಂದಾಪುರ :ನೀಟ್ ಫಲಿತಾಂಶ – ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ನಿತೇಶ್ ಗೆ 564 ಅಂಕ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ : ರಾಷ್ಟ್ರೀಯ ಪರೀಕ್ಷಾ ಮಂಡಳಿ ನಡೆಸಿದ ವೈದ್ಯಕೀಯ ಪ್ರವೇಶ ಪರೀಕ್ಷೆಯಲ್ಲಿ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ನಿತೇಶ್ 564 ಅಂಕಗಳನ್ನು ಪಡೆದು ಅರ್ಹತೆ ಪಡೆದಿದ್ದಾನೆ.

    ವಿದ್ಯಾರ್ಥಿಯ ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಉಪನ್ಯಾಸಕ ವರ್ಗದವರು ಅಭಿನಂದಿಸಿದ್ದಾರೆ.

  • ಕೋಟ – ಸಾಲಿಗ್ರಾಮ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಗಣೇಶ್ ಗಾಣಿಗ ಆಯ್ಕೆ

    ಕೋಟ – ಸಾಲಿಗ್ರಾಮ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಗಣೇಶ್ ಗಾಣಿಗ ಆಯ್ಕೆ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಸಾಲಿಗ್ರಾಮ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಗಣೇಶ್ ಗಾಣಿಗ ಚಿತ್ರಪಾಡಿ ಇವರು ಆಯ್ಕೆಯಾಗಿದ್ದಾರೆ.ಈ ಹಿಂದೆ ಅಧ್ಯಕ್ಷರಾಗಿ ಕಾರ್ಯನಿರ್ಹಸುತ್ತಿದ್ದ ತಾರಾನಾಥ್ ಹೊಳ್ಳ ಇತ್ತೀಚಿಗೆ ಅಕಾಲಿಕ ಮರಣದಿಂದ ಈ ಸ್ಥಾನ ತೆರವುಗೊಂಡಿದೆ .ಈ ಹಿನ್ನಲೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಗಣೇಶ್ ಗಾಣಿಗ ಆಯ್ಕೆಯಾಗಿದ್ದು, ಉಪಾಧ್ಯಕ್ಷರಾಗಿ ವಿಶ್ವನಾಥ್ ಐತಾಳ್ ಅವಿರೋಧ ಆಯ್ಕೆಯಾಗಿದ್ದಾರೆ.

  • ಕುಂದಾಪುರ: ನೀಟ್ ಫಲಿತಾಂಶ – ಕುಂದಾಪುರದ ಪ್ರಖ್ಯಾತ್ ಶೆಟ್ಟಿಗೆ 600 ಅಂಕ!

    ಕುಂದಾಪುರ: ನೀಟ್ ಫಲಿತಾಂಶ – ಕುಂದಾಪುರದ ಪ್ರಖ್ಯಾತ್ ಶೆಟ್ಟಿಗೆ 600 ಅಂಕ!

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ನೀಟ್ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಕುಂದಾಪುರದ ವಿದ್ಯಾರ್ಥಿ ಪ್ರಖ್ಯಾತ್ ಶೆಟ್ಟಿ 720ರಲ್ಲಿ 600 ಅಂಕಗಳನ್ನು ಗಳಿಸಿ ಸಾಧನೆ‌ ಮೆರೆದಿದ್ದಾನೆ.

    ಕುಂದಾಪುರ ತಾಲ್ಲೂಕಿನ ಕಾವ್ರಾಡಿ ಗ್ರಾಮದ ವಾಸಾಂಥಿಕಾ ಮುಂಬಾರು ನಿವಾಸಿಗಳಾದ ಪ್ರತಿಮಾ ಶೆಟ್ಟಿ ಹಾಗೂ ಹೆಚ್. ಪ್ರಭಾಕರ್ ಶೆಟ್ಟಿಯವರ ಪುತ್ರನಾಗಿರುವ ಪ್ರಖ್ಯಾತ್ ಶೆಟ್ಟಿ ಕಾರ್ಕಳದ ಕುಕ್ಕುಂದೂರಿನ ಕ್ರಿಯೇಟಿವ್ ಪಿ.ಯು. ಕಾಲೇಜಿನ ವಿದ್ಯಾರ್ಥಿಯಾಗಿದ್ದಾನೆ.

    ಪ್ರಖ್ಯಾತ್ ಶೆಟ್ಟಿಯ ಸಾಧನೆಗೆ ಕಾಲೇಜು ಆಡಳಿತ ಮಂಡಳಿ ಶುಭಾಶಯ ಸಲ್ಲಿಸಿದೆ.

  • ಕುಂದಾಪುರ: ಕೊರಗರ ಧರಣಿಗೆ ಮಣಿದ ಜಿಲ್ಲಾಡಳಿತ – ಜುಲೈ 5ರಂದು ಸಭೆ

    ಕುಂದಾಪುರ: ಕೊರಗರ ಧರಣಿಗೆ ಮಣಿದ ಜಿಲ್ಲಾಡಳಿತ – ಜುಲೈ 5ರಂದು ಸಭೆ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ಬುಧವಾರ ಬೆಳಿಗ್ಗೆಯಿಂದ ನಾಡಾ ಗ್ರಾಮ ಪಂಚಾಯತ್ ಕಚೇರಿ ಮುಂಭಾಗದಲ್ಲಿ ಉಡುಪಿ ಜಿಲ್ಲಾ ಕೊರಗ ಸಂಘಟನೆಗಳು ಹಾಗೂ ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ, ಉಡುಪಿ ಜಿಲ್ಲಾ ಸಂಘಟನಾ ಸಮಿತಿಯ ನೇತೃತ್ವದಲ್ಲಿ ಡಾ. ಮಹಮ್ಮದ್ ಫೀರ್ ವರದಿ ಜ್ಯಾರಿಗೆ ಆಗ್ರಹಿಸಿ ಆರಂಭಗೊಂಡಿದ್ದ ಧರಣಿ ಸತ್ಯಾಗ್ರಹಕ್ಕೆ ಉಡುಪಿ ಜಿಲ್ಲಾಡಳಿತ ಮಣಿದಿದೆ.

    ಉಡುಪಿ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬರುವಂತೆ ಆಗ್ರಹಿಸಿದ್ದ ಧರಣಿ ನಿರತರ ಆಗ್ರಹಕ್ಕೆ ಮಣಿದ ಪ್ರಭಾರ ಉಪವಿಭಾಗಾಧಿಕಾರಿ ಶೋಭಾಲಕ್ಷ್ಮಿ ಅವರು ಜಿಲ್ಲಾಧಿಕಾರಿಗಳ ಪರವಾಗಿ ಧರಣಿ ಸತ್ಯಾಗ್ರಹದ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿದರು.

    ಜುಲೈ 5ರಂದು ಬೆಳಿಗ್ಗೆ 11 ಘಂಟೆಗೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ನಾಡ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊರಗ ಸಮುದಾಯಗಳ ಭೂಮಿ ಹಕ್ಕುಗಳಿಗೆ ಸಂಬಂಧಿಸಿದಂತೆ ವಿಶೇಷ ಸಭೆ ನಡೆಸಿ ಬೇಡಿಕೆ ಈಡೇರಿಸುವ ಬಗ್ಗೆ ಲಿಖಿತ ರೂಪದಲ್ಲಿ ಭರವಸೆ ನೀಡಿರುವುದಾಗಿ ತಿಳಿಸಿದ್ದಾರೆ.

    ಜಿಲ್ಲಾಧಿಕಾರಿಗಳ ಭರವಸೆ ಮೇರೆಗೆ ಧರಣಿ ಸತ್ಯಾಗ್ರಹವನ್ನು ಜುಲೈ 5ರವರೆಗೆ ಹಿಂತೆಗೆದುಕೊಂಡಿದ್ದೇವೆ ಎಂದು ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಉಡುಪಿ ಜಿಲ್ಲಾ ಸಂಚಾಲಕ ಶ್ರೀಧರ ನಾಡಾ ತಿಳಿಸಿದ್ದಾರೆ.

  • ಹೆಮ್ಮಾಡಿ :ನೀಟ್ ಫಲಿತಾಂಶ-2023 – ಹೆಮ್ಮಾಡಿಯ ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಸಾಧನೆ

    ಹೆಮ್ಮಾಡಿ :ನೀಟ್ ಫಲಿತಾಂಶ-2023 – ಹೆಮ್ಮಾಡಿಯ ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಸಾಧನೆ

    ಕುಂದಾಪುರ ಮಿರರ್ ಸುದ್ದಿ…

    ಹೆಮ್ಮಾಡಿ: ವೈದ್ಯಕೀಯ ಪ್ರವೇಶ ಪರೀಕ್ಷೆಗೆ ರಾಷ್ಟ್ರ ಮಟ್ಟದಲ್ಲಿ ನಡೆಯುವ ನೀಟ್ ಪ್ರವೇಶ ಪರೀಕ್ಷೆಯ ಫಲಿತಾಂಶದಲ್ಲಿ ಹೆಮ್ಮಾಡಿಯ ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ಅಮರ್ ಪುರಾಣಿಕ್ 544/720, ಐಶ್ವರ್ಯ ಖಾರ್ವಿ 482/720, ತನಿಷಾ 459/720 ಅಂಕಗಳನ್ನು ಪಡೆದು ಅರ್ಹತೆಯನ್ನು ಪಡೆದಿರುತ್ತಾರೆ. ಕಾಲೇಜು ಪ್ರಾರಂಭದ ಪ್ರಥಮ ವರ್ಷದಲ್ಲಿಯೇ ವಿದ್ಯಾರ್ಥಿಗಳ ಈ ಸಾಧನೆಗೆ ಕಾಲೇಜಿನ ಆಡಳಿತಮಂಡಳಿ,ಪ್ರಾಂಶುಪಾಲರು, ಬೋಧಕ/ಬೋಧಕೇತರ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.

  • ಯುವ ಜನತೆಯಿಂದ ದೇಶ ಸದೃಢ : ಶೋಭಾ ಕರಂದ್ಲಾಜೆ

    ಯುವ ಜನತೆಯಿಂದ ದೇಶ ಸದೃಢ : ಶೋಭಾ ಕರಂದ್ಲಾಜೆ

    ಕುಂದಾಪುರ ಮಿರರ್ ಸುದ್ದಿ…

    ಉಡುಪಿ :ದೇಶವನ್ನ ಆರ್ಥಿಕವಾಗಿ ಮತ್ತು ಎಲ್ಲಾ ರಂಗದಲ್ಲಿ ವಿಶ್ವದಲ್ಲೇ ಸದೃಢ ರಾಷ್ಟ್ರವನ್ನಾಗಿರುವ ಜವಾಬ್ದಾರಿ ಇಂದಿನ ಯುವಜನರ ಮೇಲಿದೆ ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

    ಅವರು ಇಂದು ನಗರದ ಪೂರ್ಣಪ್ರಜ್ಞ ಕಾಲೇಜಿನ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪೂರ್ಣಪ್ರಜ್ಞ ಕಾಲೇಜು, ನೆಹರು ಯುವ ಕೇಂದ್ರ ಉಡುಪಿ, ಡಾ. ಜಿ.ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಅಜ್ಜರಕಾಡು ಹಾಗೂ ಎನ್.ಎಸ್.ಎಸ್ ಮಂಗಳೂರು ವಿಶ್ವವಿದ್ಯಾನಿಲಯ ಇವರ ಸಹಯೋಗದೊಂದಿಗೆ ನಡೆದ ಜಿಲ್ಲಾ ಮಟ್ಟದ ಯುವ ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    ದೇಶದಲ್ಲಿ ಯುವ ಶಕ್ತಿ ಹೆಚ್ಚಿನ ಸಂಖ್ಯೆಯಲ್ಲಿದ್ದು, ಇದರ ಸದ್ಬಳಕೆ ಆಗಬೇಕು, ಯುವ ಜನತೆ ಯಾವುದೇ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸಿದರೂ ಸಹ ಆ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡುವಂತಾಗಬೇಕು, ತಮ್ಮ ಅಭಿವೃಧ್ದಿಯ ಜೊತೆಗೆ ದೇಶದ ಅಭಿವೃಧ್ದಿಗೂ ಕೈ ಜೋಡಿಸಬೇಕು. ಮುಂದಿನ 25 ವರ್ಷಗಳಲ್ಲಿ ದೇಶದ ಸರ್ವತೋಮುಖ ಅಭಿವೃಧ್ದಿ ಯುವಜನರಿಂದ ಸಾಧ್ಯವಾಗಲಿದ್ದು, ವಿಶ್ವದಲ್ಲಿ ಎಲ್ಲಾ ರಂಗದಲ್ಲೂ ಭಾರತವನ್ನು ಮುಂಚೂಣಿಗೆ ತರುವ ತರುವ ಮಹತ್ತರ ಜವಾಬ್ದಾರಿ ಯುವ ಜನತೆಯದ್ದಾಗಿದೆ ಎಂದರು.

    ಶಾಸಕ ಯಶ್‌ಪಾಲ್ ಸುವರ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

    ನೆಹರು ಯುವ ಕೇಂದ್ರದ ನಿರ್ದೇಶಕ ನಟರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು.

    ಕಾಪು ಶಾಸಕ ಗುರ್ಮೆ ಸುರೇಶ್ ಪಿ ಶೆಟ್ಟಿ, ಡಾ. ಜಿ.ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಪ್ರಾಂಶುಪಾಲ ಡಾ.ಭಾಸ್ಕರ್ ಶೆಟ್ಟಿ, ಜಿಲ್ಲಾ ಯುವ ಅಧಿಕಾರಿ ಯಶ್ವಂತ್ ಯಾದವ್ ಮತ್ತಿತರರು ಉಪಸ್ಥಿತರಿದ್ದರು.

    ಪೂರ್ಣಪ್ರಜ್ಞ ಕಾಲೇಜಿನ ಪ್ರಾಂಶುಪಾಲ ಡಾ. ರಾಘವೇಂದ್ರ ಪ್ರತಿಜ್ಞಾ ವಿಧಿ ಭೋಧಿಸಿದರು.

    ಯುವ ಉತ್ಸವದಲ್ಲಿ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ದೇ, ಕವನ ಬರವಣಿಗೆ ಸ್ಪರ್ದೇ, ನೃತ್ಯ ಸ್ಪರ್ದೇ,ಭಾಷಣ ಸ್ಪರ್ದೇ ಮತ್ತಿತರ ಸ್ಪರ್ದೇಗಳು ನಡೆದವು.

  • ಕೋಟ ವಿವೇಕ ಬಾಲಕಿಯರ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿ ಸಂಸತ್ತಿಗೆ ನಡೆದ ಚುನಾವಣೆ

    ಕೋಟ ವಿವೇಕ ಬಾಲಕಿಯರ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿ ಸಂಸತ್ತಿಗೆ ನಡೆದ ಚುನಾವಣೆ

    ಇ.ವಿ.ಎಂ ಆ್ಯಪ್ ಬಳಸಿ ಚುನಾವಣಾ ಪ್ರಕ್ರೀಯೆ ಬಗ್ಗೆ ಜಾಗೃತಿ ಮೂಡಿಸಿದ ಶಿಕ್ಷಕರು

    ಕುಂದಾಪುರ ಮಿರರ್ ಸುದ್ದಿ…
    ಕೋಟ: ಕೋಟ ವಿವೇಕ ವಿದ್ಯಾ ಸಂಸ್ಥೆ, ಕೋಟ ವಲಯದ ಏಕೈಕ ಬಾಲಕಿಯರ ಪ್ರೌಢಶಾಲೆಯಾಗಿದ್ದು , ಸದಾ ಹೊಸತನದ ಪ್ರಯೋಗಶೀಲತೆಯ ನಡುವೆ ತನ್ನದೆ ಆದ ಪ್ರಸಿದ್ಧ ಪಡೆದ ಸಂಸ್ಥೆ ಆದರೆ ಇಲ್ಲಿನ ವಿವೇಕ ಬಾಲಕಿಯರ ಪ್ರೌಢಶಾಲೆಯಲ್ಲಿ ಇ.ವಿ.ಎಂ ಆ್ಯಪ್ ಬಳಸಿ ಶಾಲಾ ಸಂಸತ್ತಿನ ಚುನಾವಣೆ ನಡೆಸಿ ವಿದ್ಯಾರ್ಥಿಗಳಿಗೆ ಚುನಾವಣಾ ಪ್ರಕ್ರೀಯೆ ಬಗ್ಗೆ ಸವಿವರವಾಗಿ ಮಾಹಿತಿ ನೀಡಿ ವಿದ್ಯಾರ್ಥಿ ಸಂಸತ್ತು ರಚಿಸುವುದ ಜೊತೆಗೆ ನ್ಯಾಯಯುತ ಚುನಾವಣೆಯ ಬಗ್ಗೆ ಮಹತ್ವ ಸಾರಿತು.

    ಈ ವೇಳೆ ವಿದ್ಯಾರ್ಥಿಗಳಿಗೆ ಮತದಾನದ ಜಾಗೃತಿ, ಇ.ವಿ.ಎಂ. ಬಳಸುವ ವಿಧಾನ ತಿಳಿದು ವಿದ್ಯಾರ್ಥಿಗಳು ಸಂತೋಷದಿಂದ ಬ್ಯಾಲೆಟ್ ಯುನಿಟ್‍ನಲ್ಲಿ ಮತ ಚಲಾಯಿಸಿದರು. ತಮ್ಮ ಅಭ್ಯರ್ಥಿಯ ಮುಂದೆ ಬ್ಯಾಲೆಟ್ ಒತ್ತಿದಾಗ ಬೀಪ್ ಸೌಂಡ್ ಹಾಗೂ ತಮ್ಮ ಅಭ್ಯರ್ಥಿಯ ಹೆಸರು, ಪೋಟೋ ಕಾಣಿಸಿದಾಗ ತಮ್ಮ ಅಭ್ಯರ್ಥಿಗೆ ಮತ ಬಿದ್ದಿರುವುದನ್ನು ಖಾತರಿಪಡಿಸಿಕೊಂಡರು.

    ಈ ವಿನೂತನವಾದ ಪ್ರಯೋಗದ ಮೂಲಕ ವಿದ್ಯಾರ್ಥಿಗಳು ಚುನಾವಣಾ ಪ್ರಕ್ರಿಯೆಯ ಅನುಭವ ಪಡೆದರು. ವಿದ್ಯಾರ್ಥಿ ನಾಯಕಿಯ ಸ್ಥಾನಕ್ಕೆ ಎರಡು ವಿದ್ಯಾರ್ಥಿಗಳು, ಉಪನಾಯಕಿಯ ಸ್ಥಾನಕ್ಕೆ ಮೂರು ವಿದ್ಯಾರ್ಥಿಗಳು ಸ್ಪರ್ಧಿಸಿದ್ದು ಶಾಲಾನಾಯಕಿಯಾಗಿ ಅನ್ವಿತ ,ಉಪನಾಯಕಿಯಾಗಿ ಪ್ರತೀಕ್ಷಾ ಆಯ್ಕೆಯಾದರು.

    ಮುಖ್ಯಶಿಕ್ಷಕ ಜಗದೀಶ ಹೊಳ್ಳ ಮಾರ್ಗದರ್ಶನ ನೀಡಿದರು. ಸಮಾಜ ವಿಜ್ಞಾನ ಶಿಕ್ಷಕರಾದ ನರೇಂದ್ರ ಕುಮಾರ್ ಕೋಟ ಇವರು ಸಂಘಟಿಸಿದರು. ಸಹಶಿಕ್ಷಕರಾದ ರಾಧಾಕೃಷ್ಣ ಭಟ್, ಗಣೇಶ್ ಶೆಟ್ಟಿಗಾರ್, ನಾರಾಯಣಮೂರ್ತಿ, ಸುಮಂಗಲ, ಪುಷ್ಪಲತಾ, ಮಮತ, ವಿಜಯಲಕ್ಷ್ಮಿ, ಮಹಾಲಕ್ಷ್ಮಿ, ನಾಗರತ್ನ ಕುಸುಮಾ ಚುನಾವಣಾ ಅಧಿಕಾರಿಗಳಾಗಿ ಸಹಕರಿಸಿದರು.

  • ಸರ್ಕಾರಿ ಪ್ರೌಢಶಾಲೆ ಕಾಳಾವರದಲ್ಲಿ ಸಾರ್ವಜನಿಕ ಚುನಾವಣೆ ಮಾದರಿಯಲ್ಲಿ ನಾಯಕ ಹಾಗೂ ಉಪನಾಯಕ ಸ್ಥಾನಕ್ಕೆ ಚುನಾವಣೆ

    ಸರ್ಕಾರಿ ಪ್ರೌಢಶಾಲೆ ಕಾಳಾವರದಲ್ಲಿ ಸಾರ್ವಜನಿಕ ಚುನಾವಣೆ ಮಾದರಿಯಲ್ಲಿ ನಾಯಕ ಹಾಗೂ ಉಪನಾಯಕ ಸ್ಥಾನಕ್ಕೆ ಚುನಾವಣೆ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ :” ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು” ಎನ್ನುವ ಹಾಗೆ ಇಂದಿನ ಶಾಲಾ ಚುನಾವಣೆ ಮಕ್ಕಳಿಗೆ ಮುಂದಿನ ಸಾರ್ವಜನಿಕ ಚುನಾವಣೆಗೆ ಭಾಗವಹಿಸಲು ಸಹಕಾರಿಯಾಗುವ ನಿಟ್ಟಿನಲ್ಲಿ ಶಾಲಾ ನಾಯಕ ಸ್ಥಾನಕ್ಕೆ ಚುನಾವಣೆ ನಡೆಸಲಾಯಿತು. ಮುಖ್ಯೋಪಾಧ್ಯಾಯಿನಿ ಗಾಯತ್ರಿ ಅಡಿಗರ ನೇತೃತ್ವದಲ್ಲಿ ಶ್ರೀಲತಾರವರ ಯೋಜನೆಯಂತೆ ಚುನಾವಣೆ ನಡೆಸಲಾಯಿತು.

    ಮತದಾರರ ಪಟ್ಟಿ, ನಾಮಪತ್ರ ಸಲ್ಲಿಕೆ, ಚುನಾವಣೆ ಪ್ರಚಾರ, ಎಲ್ಲವೂ ಕಟ್ಟುನಿಟ್ಟಾಗಿ ಪಾಲಿಸಿ ಚುನಾವಣಾ ದಿನದ ಘೋಷಣೆ ಮಾಡಲಾಗಿತ್ತು. 10ನೆಯ ತರಗತಿಯಿಂದ ನಾಯಕ ಸ್ಥಾನಕ್ಕೆ ಮತ್ತು 9ನೆಯ ತರಗತಿಯಿಂದ ಉಪನಾಯಕ ಸ್ಥಾನಕ್ಕೆ ಉಮೇದು ದಾರರು ನಾಮಪತ್ರ ಸಲ್ಲಿಸಿದರು. ತಂತ್ರಜ್ಞಾನದ ವಿಶೇಷ ಅನುಭವಿ ಶಿಕ್ಷಕ ಗಣೇಶ ಶೆಟ್ಟಿಗಾರರ ಸಹಕಾರದೊಂದಿಗೆ EVM- electronic voting machine ಮೊಬೈಲ್ ಗಳಲ್ಲಿ ಸಜ್ಜುಗೊಂಡಿತು. ಕಂಟ್ರೋಲ್ ಯುನಿಟ್, ಬೆಲೆಟ್ ಯುನಿಟ್ ಎರಡು ಸ್ಥಾನಗಳಿಗೆ ಬೇರೆ ಬೇರೆಯಾಗಿರಿಸಿ ಮಕ್ಕಳಿಂದ ಮತದಾನ ಮಾಡಿಸಲಾಯಿತು.

    ಚುನಾವಣೆಯ ನಿಯಮದಂತೆ ಮತದಾರರ ಪಟ್ಟಿಯಲ್ಲಿದ್ದಂತೆ ಹೆಸರು ಕರೆದು ಬೆರಳಿಗೆ ಗುರುತಿನ ಶಾಯಿ ಹಚ್ಚುವುದನ್ನು ಹಿಡಿದು ಎಲ್ಲವೂ ಕಟ್ಟುನಿಟ್ಟಾಗಿ ಪಾಲಿಸಲಾಯಿತು. ಚುನಾವಣೆಯ ಮೊದಲು ಅಣಕು ಮತದಾನ, ನಂತರ ಮತ ಎಣಿಕೆ ಅಭ್ಯರ್ಥಿಗಳ ಸಮಕ್ಷಮದಲ್ಲಿ ಮಾಡಲಾಯಿತು. ನಾಯಕ ಸ್ಥಾನಕ್ಕೆ ಓರ್ವ ಹುಡುಗಿ ಸೇರಿ ಮೂವರು ಸ್ಪರ್ಧಿಸಿದ್ದರು. ಉಪನಾಯಕ ಸ್ಥಾನಕ್ಕೆ ತಲಾ ಓರ್ವ ಹುಡುಗಿ ಹಾಗೂ ಹುಡುಗ ಸ್ಪರ್ಧಿಸಿದ್ದರು. ಎಣಿಕೆಯ ಬಳಿಕ ಮುಖ್ಯೋಪಾಧ್ಯಾಯಿನಿಯವರು ನಾಯಕನಾಗಿ ನಾಗಾರ್ಜುನ ಹಾಗೂ ಉಪನಾಯಕನಾಗಿ ದಿಶಾಂತ್ ಆಯ್ಕೆಯಾಗಿದ್ದಾರೆ ಎಂದು ಪೋಷಿಸಿದರು. ಶಿಕ್ಷಕ ವೃಂದದವರು ಸಹಕರಿಸಿದರು.