ಆನೆಗುಡ್ಡೆ : ಸಮನ್ವಯ ಸಾಂಗತ್ಯ – 2023 ಉದ್ಘಾಟನಾ ಸಮಾರಂಭ

0
314

Click Here

Click Here

ಕುಂದಾಪುರ ಮಿರರ್ ಸುದ್ದಿ…

ತೆಕ್ಕಟ್ಟೆ : ಕೊರ್ಗಿ ವಿಠಲ ಶೆಟ್ಟಿ ಅವರು ಕಳೆದ ಹಲವು ವರ್ಷಗಳಿಂದಲೂ ಸಹಾಯ, ಸಹಕಾರ ಹಾಗೂ ಸಮ್ಮಿಲನದೊಂದಿಗೆ ವಿಶಿಷ್ಟ ಕಾರ್ಯ ವೈಖರಿಯ ಮೂಲಕ ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡು ಎಲ್ಲರಿಗೂ ಮಾದರಿಯಾಗಿವುದು ನಿಜಕ್ಕೂ ಹೆಮ್ಮೆಯ ವಿಚಾರ. ನಮ್ಮ ದೇಹದ ಯಾವುದೇ ಭಾಗಕ್ಕೂ ಕೂಡಾ ನೋವಾದರೂ ಪಂಚೇಂದ್ರಿಯಗಳೊಂದಿಗೆ ಇಡೀ ದೇಹವೇ ಆ ಯಾವ ಭಾಗವನ್ನು ಕೇಂದ್ರೀಕರಿಸಿ ,ಶಮನಗೊಳಿಸುವ ಕಾರ್ಯದಲ್ಲಿ ಕಾರ್ಯನಿರ್ವಹಿಸುವಂತೆ, ಅದೇ ರೀತಿಯಲ್ಲಿ ಸಮಾಜದ ನೋವು ನಲಿವುಗಳಿಗೆ ಟ್ರಸ್ಟ್ ಮೂಲಕ ಸದಾ ಸ್ಪಂದಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಕುಂಭಾಶಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ಆಡಳಿತ ಧರ್ಮದರ್ಶಿ ಕೆ.ಶ್ರೀರಮಣ ಉಪಾಧ್ಯಾಯ ಹೇಳಿದರು.

Click Here

ಅವರು ಫೆ.17 ರಂದು ಕುಂಭಾಶಿ ಆನೆಗುಡ್ಡೆ ಶ್ರೀ ವಿನಾಯಕ ಸಭಾಗೃಹದಲ್ಲಿ ಕೊರ್ಗಿ ವಿಠಲ ಶೆಟ್ಟಿ ಪಬ್ಲಿಕ್ ಚಾರಿಟೆಬಲ್ ಟ್ರಸ್ಟ್ (ರಿ.)ಕುಂಭಾಶಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಕ್ಷೇತ್ರ ಸಂಪನ್ಮೂಲ ಕೇಂದ್ರ ಕುಂದಾಪುರ ಇವರ ಸಹಯೋಗದೊಂದಿಗೆ ವಿಶೇಷ ಚೇತನ ವಿದ್ಯಾರ್ಥಿಗಳ ಪರಿಕರ ವಿತರಣೆ, ಕ್ರೀಡೆ ಹಾಗೂ ಕಲಿಕೆಯಲ್ಲಿ ಸಾಧನೆಗೈದ ಸಾರ್ಥಕ ವಿದ್ಯಾರ್ಥಿಗಳ ಪುರಸ್ಕಾರ ಕಾರ್ಯಕ್ರಮ ಸಮನ್ವಯ ಸಾಂಗತ್ಯ -2023 ವನ್ನು ಉದ್ಘಾಟಿಸಿ ಮಾತನಾಡಿದರು.

ಇದೇ ಸಂದರ್ಭದಲ್ಲಿ ಸುಮಾರು 15 ಕ್ಕೂ ಅಧಿಕ ವಿಶೇಷ ಚೇತನ ವಿದ್ಯಾರ್ಥಿಗಳಿಗೆ ಟ್ರಸ್ಟ್‍ನ ವತಿಯಿಂದ ಉಚಿತವಾಗಿ ಗಾಲಿ ಕುರ್ಚಿ ವಿತರಿಸಲಾಯಿತು ಹಾಗೂ ಟ್ರಸ್ಟ್‍ನ ಪ್ರವರ್ತಕ ಕೊರ್ಗಿ ವಿಠಲ ಶೆಟ್ಟಿ ಹಾಗೂ ಭವಾನಿ ವಿ.ಶೆಟ್ಟಿ ದಂಪತಿಗಳನ್ನು ಗುರುತಿಸಿ ಸಮ್ಮಾನಿಸಲಾಯಿತು. ಕೊರ್ಗಿ ವಿಠಲ ಶೆಟ್ಟಿ ಪಬ್ಲಿಕ್ ಚಾರಿಟೆಬಲ್ ಟ್ರಸ್ಟ್ (ರಿ.)ಕುಂಭಾಶಿ ಇದರ ಪ್ರವರ್ತಕರಾದ ಕೊರ್ಗಿ ವಿಠಲ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಉಡುಪಿ ಡಯಟ್‍ನ ಉಪಪ್ರಾಂಶುಪಾಲ ಅಶೋಕ್ ಕಾಮತ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಮಾಜಿ ಧರ್ಮದರ್ಶಿ ಕೃಷ್ಣಪ್ರಸಾದ್ ಅಡ್ಯಂತಾಯ, ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಸ್.ಕಾಂತರಾಜು, ಭವಾನಿ ವಿ.ಶೆಟ್ಟಿ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಗಣೇಶ್ ಕುಮಾರ್ ಶೆಟ್ಟಿ , ನಿವೃತ್ತ ಡಿಐಆರ್‍ಟಿ ಗಂಗೆ ಶಾನುಭಾಗ್, ನಿವೃತ್ತ ಶಿಕ್ಷಕಿ ತಿತೋತ್ತಮೆ, ಕ್ಷೇತ್ರ ಸಮನ್ವಯಾಧಿಕಾರಿ ಅಶೋಕ್ ನಾಯ್ಕ, ಕೆ.ರವಿರಾಜ್ ಉಪಾಧ್ಯಾಯ, ಉದ್ಯಮಿ ಅನಂತ ನಾಯಕ್ ತೆಕ್ಕಟ್ಟೆ, ಚರ್ಮರೋಗ ತಜ್ಞ ಡಾ| ಅರುಣ್ ಶೆಟ್ಟಿ ಕೊರ್ಗಿ, ಉದ್ಯಮಿ ಅರುಣ್ ಕುಮಾರ್ ಶೆಟ್ಟಿ , ಕೊರಗ ಶ್ರೇಯೋಭಿವೃದ್ಧಿ ಸಮಿತಿಯ ಅಧ್ಯಕ್ಷ ಗಣೇಶ್ ವಿ., ಸುಧಾಕರ ಶೆಟ್ಟಿ, ರಾಜೇಶ್ ಶೆಟ್ಟಿ , ಕ್ಷೇತ್ರ ಸಮನ್ವಯಾಧಿಕಾರಿಗಳು, ಸಂಪನ್ಮೂಲ ವ್ಯಕ್ತಿಗಳ ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಹಿರಿಯ ಶಿಕ್ಷಕ ಬಾಬು ಶೆಟ್ಟಿ ಸ್ವಾಗತಿಸಿ, ಉಪನ್ಯಾಸಕ ವಕ್ವಾಡಿ ರಂಜಿತ್ ಕುಮಾರ್ ಶೆಟ್ಟಿ ನಿರೂಪಿಸಿ,ಬಿಐಆರ್‍ಟಿ ಶಂಕರ್ ಕುಲಾಲ್, ಪ್ರದೀಪ ಕುಮಾರ್ ಶೆಟ್ಟಿ ಸಂಘಟಿಸಿ, ಟ್ರಸ್ಟ್‍ನ ಕಾರ್ಯದರ್ಶಿ ಕೆ.ರವಿರಾಜ್ ಉಪಾಧ್ಯಾಯ ವಂದಿಸಿದರು.

Click Here

LEAVE A REPLY

Please enter your comment!
Please enter your name here