ಕೋಟ ಸಹಕಾರಿ ವ್ಯವಸಾಯಕ ಸಂಘ ಕೋಡಿ ನೂತನ ಶಾಖೆ ಉದ್ಘಾಟನೆ, ರಜತ ಸಂಭ್ರಮಾಚರಣೆ

0
361

Click Here

Click Here

ಜನಸಾಮಾನ್ಯರ ಸ್ನೇಹಿ ಸಂಘವಾಗಿ ಕೋಟ ಸಹಕಾರಿ ಸಂಘ ರೂಪುಗೊಂಡಿದೆ – ಡಾ.ಎಂ.ಎನ್ ರಾಜೇಂದ್ರ ಕುಮಾರ್

ಕುಂದಾಪುರ ಮಿರರ್ ಸುದ್ದಿ…
ಕೋಟ: ಸಹಕಾರಿ ಸಂಸ್ಥೆ ಇರುವುದು ಸೇವೆಗೆ ಆ ಸೇವೆಯ ಮೂಲಕ ಕೋಟ ಸಹಕಾರಿ ಸಂಘ ಜನಸಾಮಾನ್ಯರ ಮನ ಗೆದ್ದಿದೆ ಎಂದು ದಕ್ಷಿಣಕನ್ನಡ ಕೇಂದ್ರ ಸಹಕಾರಿ ಸಂಘ ಮಂಗಳೂರು ಇದರ. ಅಧ್ಯಕ್ಷ ಡಾ.ಎಂ ಎನ್ ರಾಜೇಂದ್ರ ಕುಮಾರ್ ಹೇಳಿದರು.

ಕೋಟ ಸಹಕಾರಿ ವ್ಯವಸಾಯಕ ಸಂಘ ಇದರ ಕೋಡಿ ಶಾಖೆಯ ನೂತನ ಶಾಖಾ ಕಟ್ಟಡ ,ಗೋದಾಮು ವಸತಿ ಸಂಕೀರ್ಣ ಹಾಗೂ ರಜತ ಮಹೋತ್ಸವದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಒಂದು ಸಂಸ್ಥೆ ಕಟ್ಟುವುದು ಸುಲಭ ಆದರೆ ಅದನ್ನು ಸಮರ್ಪಕವಾಗಿ ಮುನ್ನಡೆಸುವುದು ಕಷ್ಟಕರ ಈ ದಿಸೆಯಲ್ಲಿ ಕೋಟ ಸಹಕಾರಿಸಂಘ ಅಭಿವೃದ್ಧಿ ಪಥದಲ್ಲಿ ಮುನ್ನುಗ್ಗುತ್ತಿದೆ. ಪ್ರಸ್ತುತ ಕಾಲಘಟ್ಟದಲ್ಲಿ ರಾಷ್ಟ್ರೀಕೃತ ಬ್ಯಾಂಕ್‍ಗಳಿಗಿಂತ ಸಹಕಾರಿ ಸಂಘಗಳೇ ಜನಸಾಮಾನ್ಯರ ಸ್ನೇಹಿಯಾಗಿ ವ್ಯವಹಾರಿಕಾ ಜನೋಪಯೋಗಿ ಕೇಂದ್ರವಾಗಿ ರೂಪುಗೊಂಡಿದೆ. ನಮ್ಮ ಅವಿಭಜಿತ ಜಿಲ್ಲೆಗಳು ಬ್ಯಾಂಕ್‍ಗಳ ತವರೂರೆನಿಸಿದೆ ಆದರೆ ರಾಷ್ಟ್ರೀಕೃತ ಬ್ಯಾಂಕ್‍ಗಳ ಸಿಬ್ಬಂದಿಗಳಿಗೆ ಸ್ಥಳೀಯ ಆಡುಭಾಷೆ ಬಾರದೆ ಜನಸಾಮಾನ್ಯರಿಗೆ ಸಂಕಷ್ಟವನ್ನು ತಂದಿರಿಸಿದೆ, ಅಲ್ಲದೆ ಬ್ಯಾಂಕ್‍ಗಳ ವಿಲೀನದಿಂದ ಅಲ್ಲಿನ ಗುಣಮಟ್ಟ ಕುಸಿದಿದೆ ಎಂದರಲ್ಲದೆ ಸಹಕಾರಿ ಕ್ಷೇತ್ರ ಇಂದು ಎಲ್ಲಾ ಕ್ಷೇತ್ರದಲ್ಲೂ ಮುಂಚೂಣಿಗೆ ನಿಂತಿದೆ.ಕೃಷಿಕರ ಜೀವಾಳವಾಗಿ ಹಲವಾರು ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿರಿಸಿದೆ.

ಸರಕಾರಕ್ಕೆ ಸಲಹೆ ನೀಡಿದ ರಾಜೇಂದ್ರ ಕುಮಾರ್
ಕೃಷಿ ಕ್ಷೇತ್ರದ ಬಗ್ಗೆ ಉಲ್ಲೇಖಿಸಿದ ರಾಜೇಂದ್ರ ಕುಮಾರ್ ಕೋವಿಡ್ ಸಂದರ್ಭದಲ್ಲಿ ಅದೆಷ್ಟೊ ಜನ ಕೃಷಿ ಕಾಯಕ್ಕೆ ಮರಳಿದರು ಆದರೆ ಅವರು ಬೆಳೆದ ಬೆಳೆಗಳಿಗೆ ಸಮರ್ಪಕ ದರ ಸಿಗಲಿಲ್ಲ ಈ ರೀತಿಯ ಬೆಳವಣಿಗೆ ಕೃಷಿಕರ ಮನೋಬಲವನ್ನು ಕುಸಿಯುವಂತೆ ಮಾಡಿದೆ ಇದಕ್ಕೆ ಪೂರಕವಾದ ವಾತಾವರಣ ಸೃಷ್ಠಿಸಬೇಕಾದರೆ ಕಟಾವಿಗಿಂತ ಮೊದಲೆ ನಿಗದಿತ ಬೆಂಬಲ ಬೆಲೆ ಘೋಷಿಬೇಕು ಆಗಮಾತ್ರ ರೈತ ಸಮುದಾಯ ಸಂತುಷ್ಟರಾಗಲು ಸಾಧ್ಯ, ಸಕ್ಕರೆ ಕಾರ್ಖಾನೆ ಪುನಶ್ಚೇತನಗೊಳಿಸಲು ಸಲಹೆ ನೀಡಿದ ಅವರು ಇದರಿಂದ ಈ ಭಾಗ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಕಬ್ಬು ಹೇರಳವಾಗಿ ಬೆಳೆಯಲು ಸಾಧ್ಯವಾಗುತ್ತದೆ ಎಂದರು.

Click Here

ಭದ್ರತಾ ತಿಜೋರಿಯನ್ನು ರಾಜ್ಯದ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ ಉದ್ಘಾಟಿಸಿ ಮಾತನಾಡಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ನಮ್ಮ ಅವಿಭಜಿತ ಜಿಲ್ಲೆಗಳ ಯುವ ಸಮೂಹ ಉದ್ಯೋಗದಿಂದ ವಂಚಿತರಾಗಿದ್ದಾರೆ, ಇದಕ್ಕೆ ಕಾರಣ ನಮ್ಮ ಹಿರಿಯರು ತಮ್ಮ ಮಕ್ಕಳನ್ನು ಬ್ಯಾಂಕಿಂಗ್ ಉದ್ಯೋಗದ ಕಡೆಗೆ ಹೆಚ್ಚಿನ ಒಲವು ತೊರಬೇಕು , ಖಾಸಗಿ ಸಂಸ್ಥೆಗಳ ವ್ಯವಹಾರಕ್ಕೆ ಕಡಿವಾಣ ಹಾಕಿಕೊಂಡು ಸಹಕಾರಿ ಕ್ಷೇತ್ರದಲ್ಲಿ ಒಲವು ತೊರಿಸಿ ಎಂದು ಕರೆಇತ್ತರಲ್ಲದೆ ಸರಕಾರ ಕೃಷಿಕರಿಗಾಗಿ ಸಾಕಷ್ಟು ಸಬ್ಸಿಡಿ ಯೋಜನೆಗಳನ್ನು ರೂಪಿಸುತ್ತಿದೆ ಇದರ ಸದ್ಭಳಕೆ ಮಾಡಿಕೊಳ್ಳಿ ,ಕೋಟ ಸರಕಾರಿ ಸಂಘ ಸಾಕಷ್ಟು ಅಭಿವೃದ್ಧಿ ಹೊಂದುತ್ತಿದೆ ಸಹಕಾರಿ ಕ್ಷೇತ್ರ ಎಂಬುವುದು ರಾಜಕೀಯ ಮುಕ್ತ ಕ್ಷೇತ್ರವಾಗಿಸಲು ಕರೆ ಇತ್ತರು.

ಹಲವು ಸಾಧಕರಿಗೆ ಗೌರವ
ಈ ಸಂದರ್ಭದಲ್ಲಿ ಸಹಕಾರ ಕ್ಷೇತ್ರದ ಸಾಧನೆಗಾಗಿ ಡಾ.ಎಂ ಎನ್ ರಾಜೇಂದ್ರ ಕುಮಾರ್ ಹಾಗೂ ರಾಜ್ಯ ಆಹಾರ ನಾಗರೀಕ ಸರಬರಾಜು ನಿಗಮದ ಉಪಾಧ್ಯಕ್ಷ ಕಿರಣ್ ಕೊಡ್ಗಿ,ನಿವೃತ್ತ ಯೋಧರಾದ ಗಣೇಶ್ ಅಡಿಗ,ವಿನೋದ್ ಕುಮಾರ್,ಕೋಡಿ ಶಾಖೆಯ ಆರಂಭಿಕ ಕಾಲಘಟ್ಟದಲ್ಲಿ ಸಹಕಾರವಿತ್ತ ಮಾಜಿ.ಜಿ.ಪಂ ಸದಸ್ಯ ಶಂಕರ್ ಎ ಕುಂದರ್,ಮಾಜಿ ಪಂಚಾಯತ್ ಸದಸ್ಯ ಲಕ್ಷ್ಮಣ್ ಸುವರ್ಣ,ಸಂಘದ ಮಾಜಿ ನಿರ್ದೇಶಕ ವಾಮನ್ ಸಾಲಿಯಾನ್,ಶಾಖಾ ಸಭಾಪತಿ ಡಾ.ಕೃಷ್ಣ ಕಾಂಚನ್,ಕಟ್ಟಡ ಗುತ್ತಿಗೆದಾರ. ಪ್ರಮೋದ್ ಶೆಟ್ಟಿ, ಇಂಜಿನಿಯರ್ ಚೇತನ್,ಸಂಘದ ಕಟ್ಟಡ ಸ್ಥಳಕ್ಕೆ ಸಹಕಾರವಿತ್ತ ರಾಜೇಶ್ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.

ನೂತನ ಕಟ್ಟಡ,ಗೋದಾಮು,ಭದ್ರತಾ ಕೊಠಡಿ,ವಸತಿ ಸಂಕೀರ್ಣವನ್ನು ಗಣ್ಯರ ಸಮ್ಮುಖದಲ್ಲಿ ಉದ್ಘಾಟಿಸಲಾಯಿತು.
ಸುತ್ತುನಿಧಿಯನ್ನು ರಾಜ್ಯ ಆಹಾರ ಮತ್ತು ನಾಗರೀಕ ಸರಬರಾಜು ನಿಗಮದ ಉಪಾಧ್ಯಕ್ಷ ಕಿರಣ್ ಕೊಡ್ಗಿ ವಿತರಿಸಿದರು. ಗಣಕಯಂತ್ರವನ್ನು ಪ್ರಾಥಮಿಕ ಭೂ ಅಭಿವೃದ್ಧಿ ಬ್ಯಾಂಕ್ ಕುಂದಾಪುರ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ ಚಾಲನೆ ನೀಡಿದರು.

ಸಭೆಯ ಅಧ್ಯಕ್ಷತೆಯನ್ನು ಕೋಟ ಸಹಕಾರಿ ವ್ಯವಸಾಯಕ ಸಂಘದ ಅಧ್ಯಕ್ಷ ಜಿ.ತಿಮ್ಮ ಪೂಜಾರಿ ವಹಿಸಿದ್ದರು.

ಮುಖ್ಯ ಅಭ್ಯಾಗತರಾಗಿ ಕೋಡಿ ಗ್ರಾ.ಪಂ ಅಧ್ಯಕ್ಷ ಕೆ.ಪ್ರಭಾಕರ್ ಮೆಂಡನ್, ಶ್ರೀದೇವಿ ಮಾರಿಕಾಂಬ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಕೃಷ್ಣ ಕೆ, ರಾಮಾಂಜನೇಯ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಶಂಭು ಪೂಜಾರಿ, ಕೋಡಿ ಮೀನುಗಾರಿಕಾ ಪ್ರಾಥಮಿಕ ಸಹಕಾರ ಸಂಘದ ಅಧ್ಯಕ್ಷ ಅಶೋಕ್ ತಿಂಗಳಾಯ, ಮೂರ್ತೆದಾರರ ಸೇವಾ ಸಹಕಾರ ಸಂಘದ ಅಧ್ಯಕ್ಷ ಕೊರಗ ಪೂಜಾರಿ, ಎಸ್ ಡಿ ಸಿಸಿ ಬ್ಯಾಂಕ್ ಮೇಲ್ವಿಚಾರಕ ರಾಜಾರಾಮ್ ಶೆಟ್ಟಿ ,ಸಂಘದ ಉಪಾಧ್ಯಕ್ಷ ಜಿ.ರಾಜೀವ ದೇವಾಡಿಗ, ನಿರ್ದೇಶಕರುಗಳಾದ ಟಿ.ಮಂಜುನಾಥ್ ಗಿಳಿಯಾರು,ಮಹೇಶ್ ಶೆಟ್ಟಿ ರಂಜೀತ್ ಕುಮಾರ್, ಉದಯ್ ಕುಮಾರ್ ಶೆಟ್ಟಿ, ನಾಗರಾಜ್ ಹಂದೆ, ರಾಜೇಶ್ ಉಪಾಧ್ಯ ,ರವೀಂದ್ರ ಕಾಮತ್, ಗೀತಾ ಶಂಭು ಪೂಜಾರಿ, ಪ್ರೇಮಾ, ರಶ್ಮೀತಾ, ಶ್ರೀಕಾಂತ್ ಶೆಣೈ, ಭಾಸ್ಕರ್ ಶೆಟ್ಟಿ, ಅಚ್ಯುತ್ ಪೂಜಾರಿ,ಸಂಘದ ಮಾಜಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೋಭಾ ಶೆಟ್ಟಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಪ್ರಶಾಂತ್ ಶೆಟ್ಟಿ ನಿರೂಪಿಸಿದರು.ಶಾಖಾ ಸಭಾಪತಿ ಡಾ.ಕೃಷ್ಣ ಕಾಂಚನ್ ಸ್ವಾಗತಿಸಿದರು. ಸಿಬ್ಬಂದಿ ಶಾಲಿನಿ ಹಂದೆ ಸನ್ಮಾನ ಪತ್ರ ವಾಚಿಸಿದರು. ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶರತ್ ಕುಮಾರ್ ಶೆಟ್ಟಿ ವರದಿ ವಾಚಿಸಿ ವಂದಿಸಿದರು.

Click Here

LEAVE A REPLY

Please enter your comment!
Please enter your name here