ಕುಂದಾಪುರ ಮಿರರ್ ಸುದ್ದಿ…
ಕೋಟ :ಹಂಗಾರಕಟ್ಟೆ ಬಾಳೆಕುದ್ರು ಶ್ರೀಮಠದ ನೃಸಿಂಹಾಶ್ರಮ ಸ್ವಾಮೀಜಿ ಅವರು ಲೋಕಲ್ಯಾಣಕ್ಕಾಗಿ ಮತ್ತು ಭಕ್ತರ ಶ್ರೇಯಸ್ಸಿಗಾಗಿ ಇದೇ 3ರಿಂದ ಚಾತುರ್ಮಾಸ್ಯ ವೃತವನ್ನು ಶ್ರೀಮಠದ ಶ್ರೀಲಕ್ಷ್ಮೀ ನೃಸಿಂಹ ದೇವರ ಸನ್ನಿಧಿಯಲ್ಲಿ ಕೈಗೊಳ್ಳಲಿದ್ದಾರೆ.
ಸ್ವಾಮೀಜಿ ಅವರ ಚಾತುರ್ಮಾಸ್ಯ ಸಂದರ್ಭದಲ್ಲಿ ಪ್ರತೀದಿನ ಬೆಳಿಗ್ಗೆ 10.30 ರಿಂದ 12.30 ರವರೆಗೆ ಸ್ಥಳೀಯ ಹಾಗೂ ಪರವೂರಿನ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ, ಶ್ರೀವಿಷ್ಣು ಸಹಸ್ರನಾಮ ಪಠಣ ಮತ್ತು ಪ್ರತೀ ನಿತ್ಯ ಅನ್ನದಾನ ಸೇವೆಯೂ ನಡೆಯಲಿದೆ ಎಂದು ಮಠದ ಪ್ರಕಟಣೆ ತಿಳಿಸಿದೆ.











