ಕೋಟ :ಬಸ್ ಕ್ಯಾಂಟರ್ ಡಿಕ್ಕಿ- ಬಸ್ ಚಾಲಕ ಸಹಿತ 8 ಮಂದಿಗೆ ಗಾಯ

0
510

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಬುಧವಾರ ಸಂಜೆ ಕೋಟ ಪೊಲೀಸ್ ಠಾಣಾ ವ್ಯಾಪ್ತಿಯ ಆವರ್ಸೆ ಎಂಬಲ್ಲಿ ಖಾಸಗೀ ಬಸ್ ಹಾಗೂ ಕ್ಯಾಂಟರ್ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಬಸ್ ಚಾಲಕ ಸಹಿತ ಎಂಟು ಮಂದಿಗೆ ಗಂಭೀರ ಗಾಯಗಳಾಗಿವೆ.

Click Here

ಲೋಕಲ್ ಸಂಚರಿಸುವ ದುರ್ಗಾಂಭಾ ಬಸ್ ಹಾಗೂ ಎದುರುಗಡೆಯಿಂದ ಬರುತ್ತಿದ್ದ ಕ್ಯಾಂಟರ್ ಡಿಕ್ಕಿ ಹೊಡೆದುಕೊಂಡಿವೆ. ವಿಪರೀತ ಮಳೆಯಿಂದಾಗಿ ರಸ್ತೆ ಕಾಣಿಸುತ್ತಿರಲಿಲ್ಲ ಎನ್ನಲಾಗಿದ್ದು, ಅಪಘಾತದ ಸ್ಥಳದಲ್ಲಿ ರಸ್ತೆಯ ಮೇಲೆಯೇ ಹೈ ಟೆನ್ಷನ್ ವಯರ್ ಗಳಿರುವ ವಿದ್ಯುತ್ ಕಂಬ ನೆಡಲಾಗಿರುವುದರಿಂದ ಕ್ಯಾಂಟರ್ ಚಾಲಕ ತೀರಾ ಎಡಗಡೆಗೆ ಚಲಿಸಿದ್ದೇ ಅಪಘಾತಕ್ಕೆ ಕಾರಣವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ರಸ್ತೆ ಮೇಲೆಯೇ ವಿದ್ಯುತ್ ಕಂಬ ಇರುವ ಬಗ್ಗೆ ಹಲವಾರು ಬಾರಿ ಮೆಸ್ಕಾಂ ಗಮನಕ್ಕೆ ತರಲಾಗಿದ್ದರೂ ಮೆಸ್ಕಾಂ ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪಿಸಿರುವ ಸ್ಥಳೀಯರು ಅಪಘಾತದಲ್ಲಿ ಗಾಯಗೊಂಡವರಿಗೆ ಮೆಸ್ಕಾಂ ಇಲಾಖೆಯೇ ನೇರ ಹೊಣೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಅಪಘಾತದಲ್ಲಿ ಗಾಯಗೊಂಡವರ ವಿವರ ಲಭ್ಯವಾಗಿಲ್ಲ.

Click Here

LEAVE A REPLY

Please enter your comment!
Please enter your name here