ಕುಂದಾಪುರ ಮಿರರ್ ಸುದ್ದಿ…

ಕೋಟ: ಸಾಧಕ ರೈತರನ್ನು ಹುಡುಕಿ ಅವರ ಮನಗೆ ತೆರಳಿ ಗೌರವಿಸುವ ಪಂಚವರ್ಣ ಸಂಸ್ಥೆ ಕಾರ್ಯ ನಿಜಕ್ಕೂ ಅಭಿನಂದನೀಯ ಎಂದು ಮಾಜಿ ಜಿ.ಪಂ ಸದಸ್ಯ ಟಿ.ಗಣಪತಿ ಶ್ರೀಯಾನ್ ಹೇಳಿದರು.
ಭಾನುವಾರ ಪಂಚವರ್ಣ ಯುವಕ ಮಂಡಲ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ನೇತ್ರತ್ವದಲ್ಲಿ ರೈತಧ್ವನಿ ಸಂಘ ಕೋಟ, ವಿಪ್ರ ಮಹಿಳಾ ಬಳಗ ಸಾಲಿಗ್ರಾಮ, ಗೆಳೆಯರ ಬಳಗ ಕಾರ್ಕಡ, ರೋಟರಿ ಕ್ಲಬ್ ಕೋಟ ಸಾಲಿಗ್ರಾಮ ಇವರುಗಳ ಸಹಯೋಗದೊಂದಿಗೆ ತೆಕ್ಕಟ್ಟೆ ಪರಿಸರದ ಸಾಧಕ ರೈತ ಶೇಷು ದೇವಾಡಿಗ ಇವರನ್ನು ಗೌರವಿಸುವ ರೈತರೆಡೆಗೆ ನಮ್ಮನಡಿಗೆ ಕಾರ್ಯಕ್ರಮದಲ್ಲಿ ಮಾತನಾಡಿ ಪ್ರಸ್ತುತ ವಿದ್ಯಾಮಾನಗಳನ್ನು ಗಮನಿಸಿದರೆ ಯುವ ಜನಾಂಗ ಕೃಷಿ ಕಾಯಕದಿಂದ ಹಿಮ್ಮುಖ ಕಾಣುತ್ತಿದೆ ಈ ರೀತಿಯ ಪ್ರಸಂಗ ಎದುರಾದರೆ ದೇಶಕ್ಕೆ ಆಪತ್ತು ತಪ್ಪಿದಲ್ಲ ಶೇಷು ದೇವಾಡಿಗರಂತೆ ಪ್ರತಿಯೊಂದು ಭಾಗದಲ್ಲಿ ಯುವ ಸಮೂಹ ಕೃಷಿ ಕಾಯಕದಲ್ಲಿ ತೋಡಗಿಕೊಳ್ಳುವಂತರಾಗಬೇಕು. ಆ ಮೂಲಕ ಕೃಷಿ ಅವಲಂಬಿತ ದೇಶ ಎಂಬಹಣೆಪಟ್ಟಿ ನಿತ್ಯನಿರಂತರವಾಗಬೇಕು ದೇಶದ ರೈತರಿಗೆ ಪ್ರೋತ್ಸಾಹ ನೀಡುವ ಯೋಜನೆಗಳನ್ನು ಸರಕಾರ ರೂಪಿಸಬೇಕು. ಆ ಮೂಲಕ ಕೃಷ ಕಾರ್ಯಕ್ಕೆ ಉತ್ತೇಜಿಸು ಕಾರ್ಯಗಳು ನಡೆಯಲಿ, ರೈತರ ಮನೆಯಂಗಳಕ್ಕೆ ತೆರಳಿ ಅವರನ್ನು ಗುರುತಿಸುವ ಕಾರ್ಯಕ್ರಮ ನಿಜಕ್ಕೂ ಶ್ಲಾಘನೀಯ, ಪಂಚವರ್ಣ ಸಂಸ್ಥೆ ನಾನಾ ರೀತಿಯ ಸಮಾಜಮುಖಿ ಕಾರ್ಯಕ್ರಮಗಳನ್ನು ನೀಡಿ ಇತರ ಸಂಸ್ಥೆಗಳಿಗೆ ಮಾದರಿಯಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸಾಧಕ ರೈತ ತೆಕ್ಕಟ್ಟೆ ಶೇಷು ದೇವಾಡಿಗ ದಂಪತಿಗಳನ್ನು ಕೃಷಿ ಪರಿಕರಗಳನ್ನಿತ್ತು ಗೌರವಿಸಲಾಯಿತು
ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್ ಅಧ್ಯಕ್ಷತೆ ವಹಿಸಿದ್ದರು.
ತೆಕ್ಕಟ್ಟೆ ಗ್ರಾಮಪಂಚಾಯತ್ ಅಧ್ಯಕ್ಷೆ ಶೋಭಾನಾ ,ಮಾಜಿ ಉಪಾಧ್ಯಕ್ಷ ಸಂಜೀವ ದೇವಾಡಿಗ ,ತೆಕ್ಕಟ್ಟೆ ಗ್ರಾ.ಪಂ ಎಸ್ ಎಲ್ ಆರ್ ಎಂ ಘಟಕದ ಮುಖ್ಯಸ್ಥೆ ರೇವತಿ ,ರೈತಧ್ವನಿ ಸಂಘ ಕೋಟ ಅಧ್ಯಕ್ಷ ಎಂ.ಜಯರಾಮ ಶೆಟ್ಟಿ,ರೋಟರಿ ಕ್ಲಬ್ ತೆಕ್ಕಟ್ಟೆ ಮಾಜಿ ಅಧ್ಯಕ್ಷ ಹೆರಿಯ ಮಾಸ್ಟರ್,ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಕಲಾವತಿ ಅಶೋಕ್ ,ಮತ್ತಿತರರು ಉಪಸ್ಥಿತರಿದ್ದರು. ಇದೆ ವೇಳೆ ಪರಿಸರ ಜಾಗೃತಿ ಸೃಷ್ಟಿಸುವ ಉದ್ದೇಶದಿಂದ ಶೇಷು ದೇವಾಡಿಗರ ಮನೆವಠಾರದಲ್ಲಿಗಿಡ ನೆಡಲಾಯಿತು.
ಪಂಚವರ್ಣ ಮಹಿಳಾ ಮಂಡಲದ ಶಕೀಲ ನಾಗರಾಜ್ ಸ್ವಾಗತಿಸಿದರು. ಕಾರ್ಯಕ್ರಮವನ್ನು ಪಂಚವರ್ಣ ಮಹಿಳಾ ಮಂಡಲದ ಸುಜಾತ ಬಾಯರಿ ನಿರೂಪಿಸಿದರು. ಕಾರ್ಯಾಧ್ಯಕ್ಷ ರವೀಂದ್ರ ಕೋಟ ವಂದಿಸಿದರು.











