ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಕನ್ನಡಾಭಿಮಾನಿ ಡಾ. ರಾಜ್ ಕುಮಾರ್ ಸಂಘಟನೆ ಇದರ ಆಶ್ರಯದಲ್ಲಿ ಕನ್ನಡ ರಾಜ್ಯೋತ್ಸವವನ್ನು ಹೊಸ ಬಸ್ ನಿಲ್ದಾಣದಲ್ಲಿ ಸಂಭ್ರಮದಿಂದ ಆಚರಿಸಲಾಯಿತು.
ದೀಪ ಬೆಳಗಿಸುವುದರ ಮೂಲಕ ಹಿರಿಯ ನ್ಯಾಯವಾದಿ ಶಿರಿಯಾರ ಮುದ್ದಣ್ಣ ಶೆಟ್ಟಿ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಾಡ ಧ್ವಜ ಧ್ವಜಾರೋಹಣವನ್ನು ಕುಂದಾಪುರದ ಠಾಣಾಧಿಕಾರಿ ವಿನಯ್ ಕೊರ್ಲಪಾಡಿ ಅವರು ನೆರವೇರಿಸಿ ಶುಭಾಶಯ ಕೋರಿದರು.
ಸಭಾಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ರತ್ನಾಕರ ಪೂಜಾರಿ ವಹಿಸಿದ್ದರು.
ಅತಿಥಿಗಳಾಗಿ ಗಾಳಿ ಮಾಧವ ಖಾರ್ವಿ, ಪ್ರಭಾಕರ ಖಾರ್ವಿ ಸೂರಜ್ ಭಟ್ ಆಗಮಿಸಿದ್ದರು.
ಆಗಸ್ಟಿನ್ ಡಿಸೋಜ ಹಾಗೂ ಶ್ರೀಧರ್ ಗಾಣಿಗ ಅವರ ಮುಂದಾಳತ್ವದಲ್ಲಿ ಸಾಮೂಹಿಕವಾಗಿ ನಾಡ ಗೀತೆ ಹಾಡಲಾಯಿತು. ಸಂಘದ ಗಾಳಿ ಸಚಿನ್ ಖಾರ್ವಿ, ಕಿಶನ್ ಖಾವಿ೯, ವಿಘ್ನೇಶ್ ಖಾವಿ೯, ನವೀನ್ ಕುಮಾರ್,ನಾಗರಾಜ್ ಮೊವಾಡಿ, ಶಿವರಾಜ್ ಖಾರ್ವಿ,ಲಕ್ಷ್ಮೀನಾರಾಯಣ ಆಚಾರ್ಯ, ದಯಾನಾಯಕ್ ಮೊದಲಾದವರು ಉಪಸ್ಥಿತರಿದ್ದರು.
ಪ್ರಣಮ್ಯ ಡಿ. ಪೂಜಾರಿ ಹಾಗೂ ಪ್ರಥಮೇಶ್ ಡಿ. ಪೂಜಾರಿ ಪ್ರಾರ್ಥನೆಗೈದರು. ಹೆಚ್.ಡುಂಢಿರಾಜ್ ಪೂಜಾರಿ ಪ್ರಾಸ್ತಾವಿಕ ನುಡಿಗಳ್ನಾಡಿದರು. ಹುಸೇನ್ ಹೈಕಾಡಿ ಕಾರ್ಯಕ್ರಮ ನಿರೂಪಿಸಿದರು. ಪ್ರರ್ತಕರ್ತ ಪತ್ರಕರ್ತ ಮಝರ್ ಕುಂದಾಪುರ ವಂದಿಸಿದರು.











