ಕುಂದಾಪುರ ಪೊಲೀಸರಿಂದ ರಸ್ತೆ ಸುರಕ್ಷತಾ ಜಾಗೃತಿ!

0
348

Click Here

Click Here

ಕುಂದಾಪುರ ಮಿರರ್ ಸುದ್ದಿ…

Click Here

ಕುಂದಾಪುರ: ಕುಂದಾಪುರ ಸಂಚಾರಿ ಪೊಲೀಸರು ಮಂಗಳವಾರ ವಾಹನ ಚಾಲಕರಿಗೆ ಸಂಚಾರ ಜಾಗೃತಿ ಮೂಡಿಸಿದ್ದಾರೆ. ನಿಯಮ ಮೀರಿ ಸಂಚರಿಸಿದರೆ ಯಮನ ಪಾದ ಸೇರಬೇಕಾಗುತ್ತದೆ ಎನ್ನುವ ಸೂಚನೆ ನೀಡಲು ಸ್ವತಃ ಯಮನ ಪಾತ್ರಧಾರಿಯನ್ನೂ ಪಕ್ಕದಲ್ಲಿಯೇ ನಿಲ್ಲಿಸಿಕೊಂಡು ಚಾಲಕರಿಗೆ ಹೂ ಕೊಟ್ಟು ಜಾಗ್ರತಿ ಮೂಡಿಸಲಾಯಿತು.

ಉಡುಪಿ ಜಿಲ್ಲಾ ಪೊಲೀಸ್ ವತಿಯಿಂದ ರಸ್ತೆ ಸುರಕ್ಷತಾ ಸಪ್ತಾಹ ಅಂಗವಾಗಿ ನಡೆದ ಈ ಜಾಗೃತಿ ಕಾರ್ಯಕ್ರಮದಲ್ಲಿ ಕುಂದಾಪುರದ ಶಾಸ್ತ್ರೀ ವೃತ್ತದಲ್ಲಿ ಪೊಲೀಸ್ ವೃತ್ತ ನಿರೀಕ್ಷಕ ನಂದಕುಮಾರ್, ನಗರ ಠಾಣೆ ಉಪನಿರೀಕ್ಷಕರ ವಿನಯ್ ಕೊರ್ಲಹಳ್ಳಿ, ಸಂಚಾರಿ ಉಪನಿರೀಕ್ಷಕ ಸುಬ್ಬಣ ಸೇರಿದಂತೆ ಪೊಲೀಸರು ಜಾಗೃತಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು. ಅತೀ ವೇಗದ ಚಾಲನೆ, ವಾಹನ ನಿಲ್ಲುವ ಮೊದಲೇ ಹತ್ತುವುದು ಅಥವಾ ಇಳಿಯುವುದು ರಸ್ತೆ ಪಕ್ಕದಲ್ಲಿ ಗುಂಪಾಗಿ ಸಂಚರಿಸುವುದು, ಚಾಲನೆ ಸಂದರ್ಭ ಮೊಬೈಲ್ ಬಳಸುವುದು, ಅವಕಾಶವಿಲ್ಲದ ಸ್ಥಳದಲ್ಲಿ ಸಂಚಾರ, ಕರ್ಕಶ ಹಾರ್ನ್ ಇತ್ಯಾದಿ ನಿಯಮಗಳ ಉಲ್ಲಂಘನೆಗಳ ಬಗ್ಗೆ ಮಾಹಿತಿ ನೀಡಿದರು. ಸಂದರ್ಭ ಕರಪತ್ರಗಳು ಹಾಗೂ ಆಟೋ ರಿಕ್ಷಾದಲ್ಲಿ ಧ್ವನಿವರ್ಧಕಗಳ ಮೂಲಕವೂ ಜಾಗೃತಿ ಮೂಡಿಸಲಾಯಿತು.

Click Here

LEAVE A REPLY

Please enter your comment!
Please enter your name here