ಕುಂದಾಪುರ: ಎಂಟು ತಿಂಗಳ ಹಿಂದೆ ಕಳುವುಗೈದಿದ್ದ ಚಿನ್ಬಾಭರಣ ರಾಜಸ್ಥಾನದಲ್ಲಿ ಪತ್ತೆ! ಆರೋಪಿಗಳ ಸಹಿತ ಆಭರಣ ವಶ

0
1213

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಕಳೆದ ವರ್ಷ ಜೂನ್ ತಿಂಗಳಲ 10ನೇ ತಾರೀಖು ಕುಂದಾಪುರದ ಖಾಸಗೀ ಹೊಟೇಲ್ ಒಂದರಲ್ಲಿ ರಾತ್ರಿ ಚಿನ್ನದ ಮಾರ್ಕೆಟಂಗ್ ಎಕ್ಸಿಕ್ಯೂಟಿವ್ ಒಬ್ಬರಿಂದ ಸುಮಾರು ಇಪ್ಪತ್ತೆರಡೂವರೆ ಲಕಗಷ ಮೌಲ್ಯದ ಚಿನ್ನಾಭರಣ ಕಳುವುಗೈದು ಪರಾರಿಯಾಗಿದ್ದ ಆರೋಪಿತರ ಸಹಿತ ಸುಮಾರು 10 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಕುಂದಾಪುರ ಪೊಲೀಸರು ಮುಂಬೈನಲ್ಲಿ ವಶಪಡಿಸಿಕೊಂಡಿದ್ದಾರೆ. ಬಂಧಿತ ಆರೋಪಿಗಳನ್ನು ರಾಜಸ್ಥಾನದ ಪಾಲಿ ಜಿಲ್ಲೆಯ ಖೋರ್ ಗ್ರಾಮದ ರಾನ್ ರಾಯಲ್ ಯಾನೆ ಬಾಳು ರಾಮ್(21) ಹಾಗೂ ಸೇವಾರಿ ಗ್ರಾಮ ಬರ್ಲಾಬೆರಾ ಗ್ರಾಮದ ಪ್ರವೀಣ್ ಕುಮಾರ್ (25) ಎಂದು ಗುರುತಿಸಲಾಗಿದೆ.

Click Here

ಮೊಹಮ್ಮದ್ ಶಾಹಬುದ್ದಿನ್ ರವರ ಮಾಲಕತ್ವದ ಹಾಜಿ ಗೋಲ್ಡ್ ಎಂಡ್ ಡೈಮೆಂಡ್ ಎಂಬ ಜ್ಯುವೆಲ್ಲರಿಯ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಒಬ್ಬ ಜೂನ್ 10ರಂದು ವ್ಯಾಪಾರಕ್ಕೆಂದು ಬಂದಿದ್ದವರು ರಾತ್ರಿ ಸ್ನೇಹಿತ ರಾಮ್ ಎಂಬಾತನೊಂದಿಗೆ ಕುಂದಾಪುರದ ಖಾಸಗಿ ಹೋಟೆಲ್ ನಲ್ಲಿ ತಂಗಿದ್ದು, ಮಂಚದ ನಡುವೆ ಚಿನ್ನಾಭರಣ ಇರುವ ಬ್ಯಾಗ್ ಇಟ್ಟಿದ್ದರು. ಬೆಳಿಗ್ಗೆ ಎದ್ದು ನೋಡುವಾಗ ರಾಮ್ ಹಾಗೂ ಚಿನ್ನದ ಬ್ಯಾಗ್ ನಾಪತ್ತೆಯಾಗಿತ್ತು. ಈ ಬಗ್ಗೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ತಕರಣದ ಬೆನ್ನತ್ತಿದ್ದ ಕುಂದಾಪುರ ಪೊಲೀಸರು ಆರೋಪಿಗಳು ಹಾಗೂ 10 ಲಕ್ಷ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.

Click Here

LEAVE A REPLY

Please enter your comment!
Please enter your name here