ಕುಂದಾಪುರ: ಧಾರ್ಮಿಕ ಆಚರಣೆಗಳಿಂದ ಸಂಸ್ಕೃತಿ ಉಳಿವು ಸಾಧ್ಯ : ಶಾಸಕ ಕಿರಣ್ ಕೊಡ್ಗಿ

0
645

Click Here

Click Here

Video :

ಬ್ರಹ್ಮಶ್ರೀ ನಾರಾಯಣಗುರು ಮಂದಿರ , ಶ್ರಿ ಸಿದ್ಧಿವಿನಾಯಕ ದೇವಸ್ಥಾನದ 23ನೇ ವರ್ಧಂತ್ಯುತ್ಸವ, ಆಯ್ದ ತಂಡಗಳಿಂದ ಕುಣಿತ ಭಜನಾ ಸ್ಪರ್ಧೆ

ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಆಚರಣೆ, ಸಂಪ್ರದಾಯ, ಸಂಸ್ಕೃತಿಗಳ ಬೆಸುಗೆಯಾಗಿರುವ ಭಾರತದ ಅಸ್ತಿತ್ವ ಇರುವುದೇ ಧಾರ್ಮಿಕ ಆಚರಣೆಯಲ್ಲಿ. ಧಾರ್ಮಿಕ ಆಚರಣೆಗಳು ನಡೆದಷ್ಟು ದೇಶದ ಗಟ್ಟಿತನ ಉಳಿಯುವುದು ಸಾಧ್ಯ ಎಂದು ಕುಂದಾಪುರ ಶಾಸಕ ಎ ಕಿರಣ್ ಕುಮಾರ್ ಕೊಡ್ಗಿ ಹೇಳಿದರು.

Click Here

ಬ್ರಹ್ಮಶ್ರೀ ನಾರಾಯಣಗುರು ಮಂದಿರ , ಶ್ರಿ ಸಿದ್ಧಿವಿನಾಯಕ ದೇವಸ್ಥಾನ ಕುಂದಾಪುರ ಇದರ 23ನೇ ವರ್ಧಂತ್ಯುತ್ಸವ ಪ್ರಯುಕ್ತ ಆಯ್ದ ತಂಡಗಳಿಂದ ಕುಣಿತ ಭಜನಾ ಸ್ಪರ್ಧೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುಂದಾಪುರ ತಾಲೂಕು ಬಿಲ್ಲವ ಸಂಘದ ಅಧ್ಯಕ್ಷ ಅಶೋಕ್ ಪೂಜಾರಿ ಮಾತನಾಡಿ, ಬಿಲ್ಲವ ಸಂಘಕ್ಕೆ 75ನೇ ವರ್ಷದ ಸಂಭ್ರಮಕ್ಕೆ ದೇವತಾ ಕಾರ್ಯದ ಮೂಲಕ ಆರಂಭವಾಗಿದೆ. ಆ ಮೂಲಕ ಕುಂದಾಪುರದಲ್ಲಿ ಭಜನಾ ಕೈಂಕರ್ಯಕ್ಕೆ ಮುಂದಾದಾಗ ಸಂಸ್ಕಾರ ಬೆಳೆಯುತ್ತದೆ ಎಂದರು.

ಇದೇ ಸಂದರ್ಭ ರಾಷ್ಟ್ರೀಯ ಮಟ್ಟದ ವಿಶೇಷಚೇತನ ಮಹಿಳಾ ಕ್ರಿಕೆಟ್ ನಲ್ಲಿ ಚಾಂಪಿಯನ್ ಆಗಿರುವ ಕ್ರಿಕೆಟ್ ತಾರೆ ಸೃಜನಾ ಎಸ್.ಪಿ. ಅವರನ್ನು ಗೌರವಿಸಿ ಸನ್ಮಾನಿಸಲಾಯಿತು. ಬಳಿಕ ನಡೆದ ಭಜನಾ ಸ್ಪರ್ಧೆಯಲ್ಲಿ ತಾಲೂಕಿನ 20 ಭಜನಾ ತಂಡಗಳು ಭಾಗವಹಿಸಿದವು.

ಉದ್ಯಮಿ ಗಣೇಶ್ ಕಿಣೆ ಬೆಳ್ವೆ, ತಾಲೂಕು ಪಂಚಾಯಿತಿನ ಮಾಜಿ ಉಪಾಧ್ಯಕ್ಷರಾದ ಶೇಖರ್ ಚಾತ್ರಬೆಟ್ಟು, ಕುಂದಾಪುರ ಪುರಸಭೆಯ ಸದಸ್ಯರಾದ ಕೆ ಮೋಹನ್ ದಾಸ್ ಶೆಣೈ, ಕುಂದಾಪುರ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಕೃಷ್ಣಮೂರ್ತಿ.ಕೆ, ಬಸ್ರೂರು ವ್ಯವಸಾಯ ಸೇವಾ ಸಹಕಾರಿ ಸಂಘ ಇದರ ಮುಖ್ಯ ಕಾರ್ಯನಿರ್ವಣಾಧಿಕಾರಿ ಸಬಿತಾ ಪೂಜಾರಿ, ನಾರಾಯಣ ಗುರು ಯುವಕ ಮಂಡಲದ ಅಧ್ಯಕ್ಷ ಯೋಗೇಶ್ ಪೂಜಾರಿ ಕೋಡಿ, ಶ್ರೀ ನಾರಾಯಣ ಗುರು ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ರಾಜೇಶ್ ಕಡ್ಗಿ, ಬಿಲ್ಲವ ಸಮಾಜದ ಉಪಾಧ್ಯಕ್ಷರಾದ ರಾಮ ಪೂಜಾರಿ ಮುಲ್ಲಿಮನೆ,ಶಿವರಾಂ ಪೂಜಾರಿ ಬಸ್ರೂರು,ಬಿಲ್ಲವ ಮಹಿಳಾ ಘಟಕದ ಅಧ್ಯಕ್ಷರಾದ ಗಿರಿಜಾ ಮಾಣಿ ಗೋಪಾಲರವರುಈ ಸಭೆಯಲ್ಲಿ ಉಪಸ್ಥಿತರಿದ್ದರು. ರಾಜೇಶ್ ಕಡ್ಗಿ ಪ್ರಾಸ್ತಾವಿಸಿ ಸ್ವಾಗತಿಸಿದರು. ಕಾರ್ಯದರ್ಶಿ ಗಣೇಶ್ ಪೂಜಾರಿ ವಿಠಲವಾಡಿ ವಂದಿಸಿದರು. ಸತೀಶ್ ಪೂಜಾರಿ ವಡ್ಡರ್ಸೆ ಹಾಗೂ ಅನಿತಾ ನರೇಂದ್ರ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.

Click Here

LEAVE A REPLY

Please enter your comment!
Please enter your name here