ಕೋಟ :ದೀಪಾವಳಿಯ ಪ್ರಯುಕ್ತ ಜನತಾ ಪ್ರೀಮಿಯರ್ ಲೀಗ್ ಕ್ರೀಡಾಕೂಟ

0
220

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಜನತಾ ಫಿಶ್ ಮೀಲ್ ಮತ್ತು ಆಯಿಲ್ ಪ್ರಾಡಕ್ಟ್ಸ್ ವತಿಯಿಂದ ಪ್ರತಿವರ್ಷ ದೀಪಾವಳಿ ಪ್ರಯುಕ್ತ ನೆಡಸಿಕೊಂಡು ಬರುವ ಜೆ.ಪಿ.ಎಲ್ ಪಂದ್ಯಾವಳಿಯನ್ನು ಈ ವರ್ಷ ಕೂಡ ವಿಜೃಂಭಣೆಯಿಂದ ಮಣೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಮೈದಾನದಲ್ಲಿ ಆಯೋಜಿಸಲಾಗಿತ್ತು.

ಜನತಾ ಸಮೂಹ ಸಂಸ್ಥೆಗಳ ಮುಖ್ಯಸ್ಥರಾದ ಆನಂದ್ ಸಿ ಕುಂದರ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.

Click Here

ಕೋಟತಟ್ಟು ಪಂಚಾಯತ್ ಅಧ್ಯಕ್ಷ ಸತೀಶ್ ಕುಂದರ್, ವಾಹಿನಿ ಯುವಕ ಮಂಡಲದ ರಮೇಶ್ ಕುಂದರ್, ಸ್ಥಳೀಯ ಕ್ರೀಡಾ ಪ್ರೋತ್ಸಾಹಕರಾದ ಪ್ರಭಾಕರ್ ಕುಂದರ್ ಜನತಾ ಸಂಸ್ಥೆಯ ನಿರ್ದೇಶಕರುಗಳಾದ ಪ್ರಶಾಂತ್ ಕುಂದರ್ ,ರಕ್ಷಿತ್ ಕುಂದರ್ ಮತ್ತು ಸಂಸ್ಥೆಯ ಎ.ಜಿ.ಎಮ್ ಶ್ರೀನಿವಾಸ್ ಕುಂದರ್ , ವ್ಯವಸ್ಥಾಪಕ ಮಿಥುನ್ ಕುಮಾರ್ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ರವಿಕಿರಣ ಕೋಟ ನಿರೂಪಿಸಿದರು. ಜನತಾ ಸಂಸ್ಥೆಯ ಸಿಬ್ಬಂದಿಗಳ ನಡುವೆ ನಡೆದ ಪಂದ್ಯಕೂಟದಲ್ಲಿ ಸಮಬಲದ ಹೋರಾಟದಲ್ಲಿ ಜನತಾ ಭಗತ್ ಇಲೆವೆನ್ ತಂಡ ಜಯಶಾಲಿಯಾಗಿ ಜನತಾ ಬೃಂದಾವನ ತಂಡ ರನ್ನರ ಅಪ್ ಪ್ರಶಸ್ತಿಯನ್ನು ಪಡೆಯಿತು. ಈ ಸಂದರ್ಭದಲ್ಲಿ ಕ್ರೀಡಾಕೂಟವನ್ನು ವೀಕ್ಷಿಸಿದ ಜನತಾ ಸಿಬ್ಬಂದಿಗಳಿಗೆ ವಿಶೇಷವಾದ ಲಕ್ಕಿ ಡೀಪ್ ಅನ್ನು ನೀಡಿ ಅದರ ವಿಜಯಶಾಲಿಗಳಿಗೆ ಸೈಕಲ್, ಸ್ಮಾರ್ಟ್ ವಾಚ್, ಇಯರ್ ಬಡ್‌ಗಳನ್ನು ಸಂಸ್ಥೆಯ ನಿರ್ದೇಶಕರಾದ ಪ್ರಶಾಂತ್ ಕುಂದರ್ ವಿತರಿಸಿದರು.

Click Here

LEAVE A REPLY

Please enter your comment!
Please enter your name here